ADVERTISEMENT

ಶೇ 6.7ರ ಬಡ್ಡಿದರದಲ್ಲಿ ಗೃಹಸಾಲ: ಎಚ್‌ಡಿಎಫ್‌ಸಿ ಲಿಮಿಟೆಡ್

ಪಿಟಿಐ
Published 21 ಸೆಪ್ಟೆಂಬರ್ 2021, 16:24 IST
Last Updated 21 ಸೆಪ್ಟೆಂಬರ್ 2021, 16:24 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಎಚ್‌ಡಿಎಫ್‌ಸಿ ಲಿಮಿಟೆಡ್‌, ಹಬ್ಬದ ಕೊಡುಗೆಯಾಗಿ ಶೇಕಡ 6.7ರ ಆರಂಭಿಕ ಬಡ್ಡಿದರದಲ್ಲಿ ಗೃಹಸಾಲ ನೀಡುವುದಾಗಿ ಮಂಗಳವಾರ ತಿಳಿಸಿದೆ. ಸದ್ಯ ಎಸ್‌ಬಿಐ ಇದೇ ಪ್ರಮಾಣದ ಬಡ್ಡಿದರದಲ್ಲಿ ಗೃಹಸಾಲ ನೀಡುತ್ತಿದೆ.

ಈ ಕೊಡುಗೆಯು ಸೆಪ್ಟೆಂಬರ್‌ 20ರಿಂದಲೇ ಜಾರಿಗೆ ಬಂದಿದ್ದು ಅಕ್ಟೋಬರ್‌ 31ಕ್ಕೆ ಅಂತ್ಯವಾಗಲಿದೆ. ಸಾಲದ ಮೊತ್ತ ಅಥವಾ ಗ್ರಾಹಕರು ಯಾವ ಉದ್ಯೋಗದಲ್ಲಿ ಇದ್ದಾರೆ ಎಂಬುದನ್ನು ಪರಿಗಣಿಸದೆಯೇ ಈ ಬಡ್ಡಿದರದಲ್ಲಿ ಸಾಲ ನೀಡಲಾಗುವುದು ಎಂದು ಎಚ್‌ಡಿಎಫ್‌ಸಿ ಪ್ರಕಟಣೆಯಲ್ಲಿ ತಿಳಿಸಿದೆ.

ಕ್ರೆಡಿಟ್‌ ಸ್ಕೋರ್‌ 800 ಮತ್ತು ಅದಕ್ಕಿಂತಲೂ ಹೆಚ್ಚಿನ ಮಟ್ಟದಲ್ಲಿ ಇರುವ ಗ್ರಾಹಕರು ಶೇ 6.70ರ ಬಡ್ಡಿದರದಲ್ಲಿ ಸಾಲ ಪಡೆಯಬಹುದಾಗಿದೆ ಎಂದು ಹೇಳಿದೆ.

ADVERTISEMENT

ಈ ವಿಶೇಷ ಕೊಡುಗೆಗೂ ಮೊದಲು, ವೇತನ ಪಡೆಯುವ ಗ್ರಾಹಕರ ಕ್ರೆಡಿಟ್‌ ಸ್ಕೋರ್‌ 800 ಮತ್ತು ಅದಕ್ಕಿಂತ ಹೆಚ್ಚಿನದ್ದಾಗಿದ್ದರೆ ₹ 75 ಲಕ್ಷ ಮೊತ್ತದ ಸಾಲಕ್ಕೆ ಶೇ 7.15ರ ಬಡ್ಡಿದರ ಇತ್ತು. ಸ್ವಂತ ಉದ್ಯೋಗ ಮಾಡುತ್ತಿರುವ ಗ್ರಾಹಕರಿಗೆ ಶೇ 7.30ರ ಬಡ್ಡಿದರ ಇತ್ತು ಎಂದು ಅದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.