ADVERTISEMENT

ಆಗಸ್ಟ್‌ನಲ್ಲಿ ಚಿನ್ನ ಆಮದು ಎರಡು ಪಟ್ಟು ಹೆಚ್ಚಳ

ರಾಯಿಟರ್ಸ್
Published 6 ಸೆಪ್ಟೆಂಬರ್ 2021, 17:22 IST
Last Updated 6 ಸೆಪ್ಟೆಂಬರ್ 2021, 17:22 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಚಿನ್ನದ ಆಮದು ಪ್ರಮಾಣವು ಆಗಸ್ಟ್‌ನಲ್ಲಿ ಎರಡು ಪಟ್ಟು ಹೆಚ್ಚಾಗಿದ್ದು, ಐದು ತಿಂಗಳ ಗರಿಷ್ಠ ಮಟ್ಟಕ್ಕೆ ತಲುಪಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಚಿನ್ನದ ಬೆಲೆ ಇಳಿಕೆ ಆಗಿರುವುದರಿಂದ ಹಾಗೂ ಹಬ್ಬದ ಋತುವಿನ ಬೇಡಿಕೆಯನ್ನು ಪೂರೈಸಲು ವ್ಯಾಪಾರಿಗಳು ಹೆಚ್ಚಿನ ಖರೀದಿ ನಡೆಸಿದ್ದಾರೆ. ಭಾರತವು 2020ರ ಆಗಸ್ಟ್‌ನಲ್ಲಿ 63 ಟನ್‌ ಚಿನ್ನ ಆಮದು ಮಾಡಿಕೊಂಡಿತ್ತು. ಆಮದು ಪ್ರಮಾಣವು 2021ರ ಆಗಸ್ಟ್‌ನಲ್ಲಿ 121 ಟನ್‌ಗೆ ಏರಿಕೆ ಆಗಿದೆ ಎಂದು ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೌಲ್ಯದ ಲೆಕ್ಕದಲ್ಲಿ ₹ 27,047 ಕೋಟಿಗಳಿಂದ ₹ 48,977 ಕೋಟಿಗಳಿಗೆ ಏರಿಕೆ ಆಗಿದೆ.

ಚಿನ್ನದ ಆಮದು ಹೆಚ್ಚಾಗುವುದರಿಂದ ದೇಶದ ವ್ಯಾಪಾರ ಕೊರತೆ ಅಂತರ ಮತ್ತು ರೂಪಾಯಿ ಮೇಲೆ ಒತ್ತಡ ಹೆಚ್ಚುವ ಅಂದಾಜು ಮಾಡಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.