ADVERTISEMENT

ಸೆಪ್ಟೆಂಬರ್‌ನಲ್ಲಿ 38 ದೇಶಿ ವಿಮಾನಗಳ ಹಾರಾಟ: ಇಂಡಿಗೊ

ಪಿಟಿಐ
Published 13 ಸೆಪ್ಟೆಂಬರ್ 2021, 14:44 IST
Last Updated 13 ಸೆಪ್ಟೆಂಬರ್ 2021, 14:44 IST
ಪಿಟಿಐ ಚಿತ್ರ
ಪಿಟಿಐ ಚಿತ್ರ   

ನವದೆಹಲಿ: ನಗರ ಪ್ರದೇಶಗಳ ನಡುವಿನಸಂಪರ್ಕ ವ್ಯವಸ್ಥೆ ಸುಧಾರಿಸಲು ಸೆಪ್ಟೆಂಬರ್‌ನಲ್ಲಿ 38 ದೇಶೀಯ ವಿಮಾನಗಳ ಹಾರಾಟ ಆರಂಭಿಸುವುದಾಗಿ ಇಂಡಿಗೊ ತಿಳಿಸಿದೆ.

ರಾಯಪುರ ಮತ್ತು ಪುಣೆ ನಡುವೆ ಹೊಸದಾಗಿ ವಿಮಾನ ಹಾರಾಟ ಆರಂಭಿಸಲಾಗುವುದು. ಅದೇ ವೇಳೆ ಲಖನೌ-ರಾಂಚಿ, ಬೆಂಗಳೂರು-ವಿಶಾಖಪಟ್ಟಣಂ, ಚೆನ್ನೈ-ಇಂಧೋರ್‌, ಲಖನೌ-ರಾಯಪುರ, ಮುಂಬೈ-ಗುವಾಹಟಿ ಮತ್ತು ಇಂಧೋರ್-ಅಹಮದಾಬಾದ್‌ ನಗರಗಳಿಗೆ ವಿಮಾನ ಸೇವೆ ಪುನರಾರಂಭಿಸಲಾಗುವುದು ಎಂದು ವಿಮಾನಯಾನ ಸಂಸ್ಥೆ ಪ್ರಕಟಿಸಿದೆ.

ʼನಮ್ಮ ದೇಶೀಯಸಂಪರ್ಕ ಜಾಲವನ್ನುಮತ್ತಷ್ಟು ಬಲಪಡಿಸಲು 38 ಹೊಸ ವಿಮಾನಗಳನ್ನು ಸೇರಿಸಲು ಹರ್ಷವಾಗುತ್ತಿದೆʼ ಎಂದು ಇಂಡಿಗೊದ ಕಾರ್ಯತಂತ್ರ ಮತ್ತು ಆದಾಯ ಅಧಿಕಾರಿ ಸಂಜಯ್‌ ಕುಮಾರ್‌ ಹೇಳಿದ್ದಾರೆ.

ADVERTISEMENT

ʼಹೆಚ್ಚಾಗಿರುವ ಪ್ರಯಾಣದ ಬೇಡಿಕೆಯನ್ನು ಈ ವಿಮಾನಗಳು ಪೂರೈಸಲಿದ್ದು, ನಗರಗಳ ನಡುವಿನ ಸಂಪರ್ಕ ವ್ಯವಸ್ಥೆಯನ್ನು ಸುಧಾರಿಸಲಿವೆʼ ಎಂದೂ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.