ADVERTISEMENT

ಭಾರತದ ಐ.ಟಿ. ವಲಯದಲ್ಲಿ ಹೊಸದಾಗಿ 3.75 ಲಕ್ಷ ಉದ್ಯೋಗ

ಪಿಟಿಐ
Published 9 ಡಿಸೆಂಬರ್ 2021, 4:59 IST
Last Updated 9 ಡಿಸೆಂಬರ್ 2021, 4:59 IST
   

ಮುಂಬೈ (ಪಿಟಿಐ): ದೇಶದ ಹಲವು ಕಂಪನಿಗಳು ತ್ವರಿತವಾಗಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತಿರುವ ಕಾರಣ, ಐ.ಟಿ. ಮತ್ತು ವಾಣಿಜ್ಯ ಪ್ರಕ್ರಿಯೆ ನಿರ್ವಹಣೆ ಉದ್ಯಮವು ಪ್ರಸಕ್ತ ಹಣಕಾಸು ವರ್ಷದಲ್ಲಿ ಹೊಸದಾಗಿ 3.75 ಲಕ್ಷ ಉದ್ಯೋಗ ಸೃಷ್ಟಿಸುವ ನಿರೀಕ್ಷೆ ಇದೆ ಎಂದು ಟೀಮ್‌ಲೀಸ್‌ ಡಿಜಿಟಲ್ ಸಂಸ್ಥೆ ಸಿದ್ಧಪಡಿಸಿರುವ ವರದಿ ಹೇಳಿದೆ.

ನೂರಕ್ಕೂ ಹೆಚ್ಚಿನ ಉದ್ಯೋಗದಾತರ ಜೊತೆ ಮಾತುಕತೆ ನಡೆಸಿ ಈ ವರದಿ ಸಿದ್ಧಪಡಿಸಲಾಗಿದೆ. ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳುವುದು ಕಾರ್ಪೊರೇಟ್‌ಗಳಿಗೆ ಮಾತ್ರ ಸೀಮಿತ ಆಗಿಲ್ಲ. ಅಭ್ಯರ್ಥಿಗಳು ಕೂಡ ಈ ವ್ಯವಸ್ಥೆಗೆ ಮುಕ್ತವಾಗಿ ತೆರೆದುಕೊಳ್ಳುತ್ತಿದ್ದಾರೆ ಎಂದು ವರದಿಯು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT