ADVERTISEMENT

Reliance Jio | ಕರೆ, ಡೇಟಾ ಶುಲ್ಕ ಹೆಚ್ಚಳ: ಡಿಸೆಂಬರ್‌ 1ರಿಂದ ಹೊಸ ದರ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2021, 10:32 IST
Last Updated 29 ನವೆಂಬರ್ 2021, 10:32 IST
ಜಿಯೊ
ಜಿಯೊ   

ಬೆಂಗಳೂರು: ಏರ್‌ಟೆಲ್‌ ಮತ್ತು ವೊಡಾಫೋನ್‌ ಐಡಿಯಾ ಬಳಿಕ ಇದೀಗ ಜಿಯೊ ಕಂಪ‍ನಿತನ್ನ ಪ್ರಿಪೇಯ್ಡ್‌ ಸೇವೆಗಳ ಮೇಲಿನ ಶುಲ್ಕವನ್ನುಶೇ 21ರವರೆಗೆ ಹೆಚ್ಚಿಸುವ ನಿರ್ಧಾರವನ್ನು ಭಾನುವಾರ ಘೋಷಿಸಿದೆ. ಡಿಸೆಂಬರ್‌ 1ರಿಂದ ಪರಿಷ್ಕೃತ ದರ ಜಾರಿಗೆ ಬರಲಿವೆ ಎಂದು ತಿಳಿಸಿದೆ.

ಜಿಯೊಫೋನ್‌ ಯೋಜನೆ, ಅನಿಯಮಿತ ಯೋಜನೆ ಮತ್ತು ಡೇಟಾ ಆ್ಯಡ್‌ಆನ್‌ ಮೇಲಿನ ಶುಲ್ಕಗಳನ್ನು ಶೇ 19.6 ರಿಂದ ಶೇ 21.3ರವರೆಗೂ ಏರಿಕೆ ಮಾಡಲಾಗಿದೆ.

ಈ ಹೊಸ ಅನಿಯಮಿತ ಯೋಜನೆಗಳು ಉದ್ಯಮದಲ್ಲಿ ಉತ್ತಮ ಮೌಲ್ಯ ತಂದುಕೊಡಲಿವೆ. ಜಾಗತಿಕವಾಗಿ ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟದ ಸೇವೆಗಳನ್ನು ನೀಡುವ ಕಂಪನಿಯ ಬದ್ಧತೆಯನ್ನು ಇದು ಎತ್ತಿಹಿಡಿಯಲಿದೆ ಎಂದು ತಿಳಿಸಿದೆ.

ADVERTISEMENT

ವಾರದ ಹಿಂದಷ್ಟೇ ಏರ್‌ಟೆಲ್ ಮತ್ತು ವೊಡಾಫೋನ್ ಪ್ರಿಪೇಯ್ಡ್ ಡೇಟಾ ಮತ್ತು ಕರೆ ದರ ಏರಿಕೆಯಾಗಿತ್ತು.

ಡಿಸೆಂಬರ್‌ 1ರಿಂದ ಪರಿಷ್ಕೃತ ದರ ಜಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.