ADVERTISEMENT

ಎಲ್‌ಐಸಿಯಿಂದ ‘ಪ್ರಗತಿ’ ಆ್ಯಪ್‌ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2021, 4:32 IST
Last Updated 19 ಸೆಪ್ಟೆಂಬರ್ 2021, 4:32 IST
ಎಲ್‌ಐಸಿ ಅಧ್ಯಕ್ಷ ಎಂ.ಆರ್‌. ಕುಮಾರ್‌ ಅವರು ಆ್ಪಪ್‌ ಬಿಡುಗಡೆ ಮಾಡಿದರು. ವ್ಯವಸ್ಥಾಪಕ ನಿರ್ದೇಶಕರಾದ ಮುಕೇಶ್‌ ಗುಪ್ತಾ, ರಾಜ್‌ ಕುಮಾರ್‌, ಸಿದ್ಧಾರ್ಥ್‌ ಮೊಹಂತಿ, ಮಿನಿ ಐಪೆ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಎಲ್‌ಐಸಿ ಅಧ್ಯಕ್ಷ ಎಂ.ಆರ್‌. ಕುಮಾರ್‌ ಅವರು ಆ್ಪಪ್‌ ಬಿಡುಗಡೆ ಮಾಡಿದರು. ವ್ಯವಸ್ಥಾಪಕ ನಿರ್ದೇಶಕರಾದ ಮುಕೇಶ್‌ ಗುಪ್ತಾ, ರಾಜ್‌ ಕುಮಾರ್‌, ಸಿದ್ಧಾರ್ಥ್‌ ಮೊಹಂತಿ, ಮಿನಿ ಐಪೆ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.   

ಬೆಂಗಳೂರು: ಭಾರತೀಯ ಜೀವ ವಿಮಾ ನಿಗಮವು (ಎಲ್‌ಐಸಿ) ತನ್ನ ಡೆವಲಪ್‌ಮೆಂಟ್‌ ಆಫಿಸರ್‌ಗಳಿಗಾಗಿ ಪ್ರಗತಿ ಆ್ಯಪ್ (ಪರ್ಫಾರ್ಮೆನ್ಸ್‌ ರಿವ್ಯು ಅಪ್ಲಿಕೇಷನ್‌, ಗ್ರೋತ್‌ ಆ್ಯಂಡ್‌ ಟ್ರೆಂಡ್‌ ಇಂಡಿಕೇಟರ್‌) ಬಿಡುಗಡೆ ಮಾಡಿದೆ.

ಕಂತು ಸಂಗ್ರಹ ಮತ್ತು ಏಜೆನ್ಸಿ ಸಕ್ರಿಯಗೊಳಿಸುವಿಕೆ ಸೇರಿದಂತೆ ಇನ್ನೂ ಹಲವು ಮಾಹಿತಿಗಳನ್ನು ಈ ಆ್ಯಪ್‌ ಒದಗಿಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

‘ಎಲ್‌ಐಸಿ’ಯು ತನ್ನ ಗ್ರಾಹಕರ ಅನುಕೂಲಕ್ಕಾಗಿ ಹಲವು ಗ್ರಾಹಕ ಕೇಂದ್ರಿತ ಕ್ರಮಗಳನ್ನು ಹಾಗೂ ಅಧಿಕಾರಿಗಳ ಕೆಲಸಗಳನ್ನು ಸುಲಭಗೊಳಿಸಲು ಡಿಜಿಟಲ್ ಉಪಕ್ರಮಗಳನ್ನು ಜಾರಿಗೊಳಿಸುತ್ತಿದೆ ಎಂದೂ ಹೇಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.