ADVERTISEMENT

ಉದ್ಯಮಿಗಳಿಗೆ ಏಕಗವಾಕ್ಷಿ ವ್ಯವಸ್ಥೆಗೆ ಚಾಲನೆ

ಪಿಟಿಐ
Published 22 ಸೆಪ್ಟೆಂಬರ್ 2021, 17:29 IST
Last Updated 22 ಸೆಪ್ಟೆಂಬರ್ 2021, 17:29 IST

ನವದೆಹಲಿ: ವಾಣಿಜ್ಯೋದ್ಯಮಿಗಳಿಗೆ ನೆರವಾಗುವ ಉದ್ದೇಶದ ರಾಷ್ಟ್ರೀಯ ಏಕಗವಾಕ್ಷಿ ವ್ಯವಸ್ಥೆಗೆ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಪೀಯೂಷ್ ಗೋಯಲ್ ಬುಧವಾರ ಪ್ರಾಯೋಗಿಕ ಚಾಲನೆ ನೀಡಿದರು. ಅನುಮೋದನೆ ಹಾಗೂ ನೋಂದಣಿಗಳಿಗೆ ಸರ್ಕಾರಿ ಕಚೇರಿಗಳಿಗೆ ಅಲೆಯುವ ಸಮಸ್ಯೆಯು ಈ ಪೋರ್ಟಲ್‌ನಿಂದಾಗಿ ನಿವಾರಣೆ ಆಗುತ್ತದೆ ಎಂದು ಹೇಳಿದರು.

ಕೇಂದ್ರದ 18 ಇಲಾಖೆಗಳು ಹಾಗೂ ರಾಜ್ಯಗಳ 9 ಇಲಾಖೆಗಳ ಅನುಮೋದನೆಗಳನ್ನು ಈ ಪೋರ್ಟಲ್‌ ಮೂಲಕ ಪಡೆಯಬಹುದು. ಕೇಂದ್ರದ 14 ಇಲಾಖೆಗಳು ಹಾಗೂ ರಾಜ್ಯಗಳ 5 ಇಲಾಖೆಗಳನ್ನು ಪೋರ್ಟಲ್‌ಗೆ ಡಿಸೆಂಬರ್‌ ಕೊನೆಯೊಳಗೆ ಸೇರ್ಪಡೆ ಮಾಡಲಾಗುವುದು ಎಂದು ತಿಳಿಸಿದರು. ‘ಇದು ಅಧಿಕಾರಶಾಹಿಯಿಂದ ಸ್ವಾತಂತ್ರ್ಯ. ವಾಣಿಜ್ಯ ವಹಿವಾಟನ್ನು ಸುಲಲಿತಗೊಳಿಸುವ ಪ್ರಕ್ರಿಯೆಯಲ್ಲಿ ದೊಡ್ಡ ಹೆಜ್ಜೆ ಇದು’ ಎಂದರು.

ಈ ಪೋರ್ಟಲ್‌ನಿಂದಾಗಿ ವ್ಯವಸ್ಥೆಯಲ್ಲಿ ಪಾರದರ್ಶಕತೆ, ಉತ್ತರದಾಯಿತ್ವ ಹಾಗೂ ಸ್ಪಂದನಶೀಲತೆ ಬರಲಿದೆ. ಅಗತ್ಯ ಮಾಹಿತಿಗಳೆಲ್ಲ ಒಂದೇ ಕಡೆ ಸಿಗುವಂತೆ ಆಗಲಿದೆ ಎಂದು ತಿಳಿಸಿದರು. ಸದ್ಯಕ್ಕೆ ಈ ಪೋರ್ಟಲ್‌ನ ಬೀಟಾ ಆವೃತ್ತಿಯು ಸಾರ್ವಜನಿಕರಿಗೆ ಲಭ್ಯವಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.