ADVERTISEMENT

ಖಾತೆಯಲ್ಲಿ ಕನಿಷ್ಠ ಮೊತ್ತ ಕಾಪಾಡದವರಿಂದ ₹ 170 ಕೋಟಿ ದಂಡ ಸಂಗ್ರಹಿಸಿದ ಪಿಎನ್‌ಬಿ!

ಪಿಟಿಐ
Published 20 ಸೆಪ್ಟೆಂಬರ್ 2021, 14:25 IST
Last Updated 20 ಸೆಪ್ಟೆಂಬರ್ 2021, 14:25 IST
   

ನವದೆಹಲಿ: ಕೇಂದ್ರ ಸರ್ಕಾರದ ಸ್ವಾಮ್ಯದ ಪಂಜಾಬ್ ನ್ಯಾಷನಲ್‌ ಬ್ಯಾಕ್‌ (ಪಿಎನ್‌ಬಿ), ಖಾತೆಯಲ್ಲಿ ಕನಿಷ್ಠ ಮೊತ್ತ ಕಾಯ್ದುಕೊಳ್ಳದ ಗ್ರಾಹಕರಿಗೆ ದಂಡ ವಿಧಿಸುವ ಮೂಲಕ 2020–21ನೆಯ ಸಾಲಿನಲ್ಲಿ ಸರಿಸುಮಾರು ₹ 170 ಕೋಟಿ ಸಂಗ್ರಹಿಸಿದೆ.

2019–20ರಲ್ಲಿ ಈ ಬಗೆಯ ದಂಡ ಸಂಗ್ರಹದ ಮೂಲಕ ಬ್ಯಾಂಕ್‌ಗೆ ಬಂದ ಆದಾಯದ ಮೊತ್ತವು ₹ 286 ಕೋಟಿ ಆಗಿತ್ತು ಎಂದು ಮಾಹಿತಿ ಹಕ್ಕು (ಆರ್‌ಟಿಐ)ಕಾಯ್ದೆಯ ಅಡಿ ಪಡೆದುಕೊಂಡ ಅಂಕಿ–ಅಂಶಗಳಿಂದ ಗೊತ್ತಾಗಿದೆ. ಬ್ಯಾಂಕ್‌ಗಳು ಈ ಬಗೆಯ ದಂಡಗಳನ್ನು ಪ್ರತಿ ತ್ರೈಮಾಸಿಕಕ್ಕೆ ಒಮ್ಮೆ ಗ್ರಾಹಕರಿಂದ ವಸೂಲಿ ಮಾಡುತ್ತವೆ.

ಪಿಎನ್‌ಬಿ ಬ್ಯಾಂಕ್‌ ಎಟಿಎಂ ವಹಿವಾಟು ಶುಲ್ಕದ ಮೂಲಕ 2020–21ರಲ್ಲಿ ₹ 74.28 ಕೋಟಿ ಆದಾಯ ಗಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.