ADVERTISEMENT

ಚಾಲಿ ಅಡಿಕೆಗೆ ₹ 50 ಸಾವಿರ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2021, 22:29 IST
Last Updated 21 ಸೆಪ್ಟೆಂಬರ್ 2021, 22:29 IST

ಮಂಗಳೂರು: ಕ್ಯಾಂಪ್ಕೊದಲ್ಲಿ ಹೊಸ ಚಾಲಿ ಅಡಿಕೆ ದರ ಮಂಗಳವಾರ ಕ್ವಿಂಟಲ್‌ಗೆ ₹ 50 ಸಾವಿರ ಆಗಿದೆ. ‘ಬೆಳೆಗಾರರ ಬಳಿ ಅಡಿಕೆ ಸಂಗ್ರಹ ಇದ್ದರೂ, ದರ ಇನ್ನಷ್ಟು ಏರಿಕೆ ಆಗಬಹುದು ಎಂಬ ನಿರೀಕ್ಷೆ ಇರುವುದರಿಂದ, ಅಡಿಕೆಯು ಪೂರ್ಣ ಪ್ರಮಾಣದಲ್ಲಿ ಮಾರುಕಟ್ಟೆಗೆ ಬರುತ್ತಿಲ್ಲ. ಹಾಗಾಗಿ ಹೊಸ ಚಾಲಿಗೆ ಹಳೆಯ ಚಾಲಿಯ ದರ ಸಿಗುತ್ತಿದೆ’ ಎಂದು ಮಾರುಕಟ್ಟೆ ವಿಶ್ಲೇಷಕರು ಹೇಳಿದ್ದಾರೆ.

ಸುಳ್ಯ ತಾಲ್ಲೂಕು ಬೆಳ್ಳಾರೆಯ ಹೊರ ವ್ಯಾಪಾರಿ ಅಂಗಣದಲ್ಲಿ ಕಳೆದ ವಾರ ಚಾಲಿ ಅಡಿಕೆ ಕ್ವಿಂಟಲ್‌ಗೆ ಗರಿಷ್ಠ ₹ 51 ಸಾವಿರ ದರ ದೊರಕಿತ್ತು.

ಲಾಕ್‌ಡೌನ್ ತೆರವುಗೊಂಡ ನಂತರ, ಚಾಲಿ ಅಡಿಕೆಯ ದರ ಏರುಮುಖಿ ಆಗಿದೆ. ಅಡಿಕೆಯ ಪ್ರಮುಖ ಮಾರುಕಟ್ಟೆಯಾದ ಉತ್ತರ ಭಾರತದಲ್ಲಿ ಬೇಡಿಕೆ ಹೆಚ್ಚಾಗಿರುವುದು
ಬೆಲೆ ಏರಿಕೆಯ ಕಾರಣಗಳಲ್ಲಿ ಒಂದಾಗಿದೆ ಎನ್ನಲಾಗಿದೆ. ಹಳೇ ಚಾಲಿ ಕ್ವಿಂಟಲ್‌ಗೆ ಗರಿಷ್ಠ ₹ 51,500ಕ್ಕೆ ಖರೀದಿಯಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.