ADVERTISEMENT

ಉಬರ್ ಕ್ಯಾಬ್ ಚಾಲಕರಿಗೆ ಕಾಣಿಸಲಿದೆ ಡ್ರಾಪ್ ಲೊಕೇಶನ್

ಪಿಟಿಐ
Published 20 ಮೇ 2022, 12:54 IST
Last Updated 20 ಮೇ 2022, 12:54 IST
ಹೊಸ ಫೀಚರ್ ಪರಿಚಯಿಸಿದ ಉಬರ್
ಹೊಸ ಫೀಚರ್ ಪರಿಚಯಿಸಿದ ಉಬರ್   

ನವದೆಹಲಿ: ಉಬರ್ ಕ್ಯಾಬ್ ಚಾಲಕರಿಗೆ ಇನ್ನು ಮುಂದೆ ಡ್ರಾಪ್ ಲೊಕೇಶನ್ ಕಾಣಿಸಲಿದೆ.

ಹೀಗಾಗಿ, ಬುಕಿಂಗ್ ಪಡೆದುಕೊಂಡ ಬಳಿಕ ಡ್ರಾಪ್ ಲೊಕೇಶನ್ ತಿಳಿದುಕೊಂಡು, ಟ್ರಿಪ್ ರದ್ದುಮಾಡುವ ಸಮಸ್ಯೆಯಿಂದ ಬಳಕೆದಾರರಿಗೆ ಮುಕ್ತಿ ಸಿಗಲಿದೆ.

ಉಬರ್ ಕ್ಯಾಬ್ ಬಳಕೆದಾರರು, ಪ್ರಯಾಣಕ್ಕೆ ಬುಕಿಂಗ್ ಮಾಡುವ ಸಂದರ್ಭದಲ್ಲಿ ಚಾಲಕರಿಗೆ ಪಿಕಪ್ ಲೊಕೇಶನ್ ಮಾತ್ರ ಕಾಣಿಸುತ್ತಿತ್ತು. ಆದರೆ ಡ್ರಾಪ್ ಲೊಕೇಶನ್ ಕಾಣಿಸುತ್ತಿರಲಿಲ್ಲ. ಹೀಗಾಗಿ, ಕೆಲವೊಮ್ಮೆ ಬುಕಿಂಗ್ ಪಡೆದುಕೊಂಡ ಕ್ಯಾಬ್ ಚಾಲಕರು, ಪ್ರಯಾಣಿಕರಿಗೆ ಕರೆ ಮಾಡಿ, ಡ್ರಾಪ್ ಲೊಕೇಶನ್ ತಿಳಿದುಕೊಳ್ಳುತ್ತಿದ್ದರು. ಬಳಿಕ, ಅವರು ಬರುವುದಿಲ್ಲವೆಂದಾದರೆ, ಟ್ರಿಪ್ ಕ್ಯಾನ್ಸಲ್ ಮಾಡುತ್ತಿದ್ದರು.

ADVERTISEMENT

ಇದರಿಂದ ಬಳಕೆದಾರರಿಗೆ ಸಮಸ್ಯೆಯಾಗುತ್ತಿತ್ತು. ಜತೆಗೆ ಚಾಲಕರಿಗೆ ಕೂಡ ಕೆಲವೊಂದು ದೂರದ ಪ್ರದೇಶಕ್ಕೆ ತೆರಳುವುದು ಬೇಡವಾಗಿದ್ದರೆ, ಬುಕಿಂಗ್ ಪಡೆದುಕೊಂಡು, ನಂತರ ರದ್ದುಮಾಡುವ ಪ್ರಮೇಯ ಎದುರಾಗುತ್ತಿತ್ತು.

ಹೀಗಾಗಿ ದೇಶದಲ್ಲಿ ಉಬರ್, ಚಾಲಕರಿಗೆ ಬುಕಿಂಗ್ ಪಡೆದುಕೊಳ್ಳುವ ಸಂದರ್ಭದಲ್ಲೇ ಡ್ರಾಪ್ ಲೊಕೇಶನ್ ಕೂಡ ಕಾಣಿಸುವುದರಿಂದ, ಟ್ರಿಪ್ ಪಡೆದುಕೊಳ್ಳಬೇಕೇ ಅಥವಾ ಬೇಡವೇ ಎಂದು ನಿರ್ಧರಿಸಬಹುದಾಗಿದೆ. ಜತೆಗೆ, ಬುಕಿಂಗ್ ಮಾಡಿದ ಟ್ರಿಪ್ ಕ್ಯಾನ್ಸಲ್ ಆಗುವ ಸಮಸ್ಯೆಯಿಂದ ಗ್ರಾಹಕರಿಗೂ ಮುಕ್ತಿ ಸಿಗಲಿದೆ. ನೂತನ ಫೀಚರ್, ಈಗಾಗಲೇ 20ಕ್ಕೂ ಅಧಿಕ ನಗರಗಳಲ್ಲಿ ಬಳಕೆಗೆ ಬಂದಿದೆ ಎಂದು ಉಬರ್ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.