ADVERTISEMENT

ಸೆಪ್ಟೆಂಬರ್‌ 17 ರಿಂದ ದಿನಸಿ ಪೂರೈಕೆ ಸೇವೆ ಸ್ಥಗಿತ: ಜೊಮ್ಯಾಟೊ

ಪಿಟಿಐ
Published 12 ಸೆಪ್ಟೆಂಬರ್ 2021, 16:27 IST
Last Updated 12 ಸೆಪ್ಟೆಂಬರ್ 2021, 16:27 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಜೊಮ್ಯಾಟೊ ಕಂಪನಿಯು ಸೆಪ್ಟೆಂಬರ್‌ 17ರಿಂದ ದಿನಸಿ ಸಾಮಗ್ರಿಗಳನ್ನು ಮನೆ ಬಾಗಿಲಿಗೆ ತಲುಪಿಸುವ ಸೇವೆಯನ್ನು ಸ್ಥಗಿತಗೊಳಿಸುವುದಾಗಿ ಹೇಳಿದೆ.

ಗ್ರಾಹಕರಿಗೆ ದಿನಸಿ ಸಾಮಗ್ರಿಗಳನ್ನು ಸಮಯಕ್ಕೆ ಸರಿಯಾಗಿ ಪೂರೈಸಲು ಸಾಧ್ಯವಾಗುತ್ತಿಲ್ಲ ಮತ್ತು ಅದು ಗ್ರಾಹಕರಲ್ಲಿ ಅಸಮಾಧಾನ ಮೂಡಿಸುತ್ತಿದೆ ಎನ್ನುವ ಕಾರಣಗಳಿಂದಾಗಿ ಈ ಸೇವೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿರುವುದಾಗಿ ಅದು ತಿಳಿಸಿದೆ.

ಕಳೆದ ವರ್ಷ ಕೋವಿಡ್‌–19 ಸಾಂಕ್ರಾಮಿಕದಿಂದ ಲಾಕ್‌ಡೌನ್‌ ಜಾರಿಗೆ ಬಂದಾಗ ಕಂಪನಿಯು ಈ ಸೇವೆಯನ್ನು ಆರಂಭಿಸಿತ್ತು.

ADVERTISEMENT

‘ಜೊಮಾಟೊದಲ್ಲಿ, ನಮ್ಮ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಸೇವೆಗಳನ್ನು ಮತ್ತು ನಮ್ಮ ವ್ಯಾಪಾರಿ ಪಾಲುದಾರರಿಗೆ ಅತಿದೊಡ್ಡ ಬೆಳವಣಿಗೆಯ ಅವಕಾಶಗಳನ್ನು ನೀಡುತ್ತಿರುವುದಾಗಿ ನಾವು ನಂಬುತ್ತೇವೆ. ನಮ್ಮ ಗ್ರಾಹಕರು ಮತ್ತು ವ್ಯಾಪಾರಿ ಪಾಲುದಾರರಿಗೆ ಇವುಗಳನ್ನು ತಲುಪಿಸಲು ಪ್ರಸ್ತುತ ಮಾದರಿಯು ಉತ್ತಮ ಮಾರ್ಗ ಎಂದು ನಾವು ನಂಬುವುದಿಲ್ಲ. ಹೀಗಾಗಿ ದಿನಸಿ ಸಾಮಗ್ರಿಗಳನ್ನು ಪೂರೈಸುವ ಸೇವೆಯನ್ನು ನಿಲ್ಲಿಸಲು ಉದ್ದೇಶಿಸಲಾಗಿದೆ’ ಎಂದು ದಿನಸಿ ಸಾಮಗ್ರಿಗಳನ್ನು ಪೂರೈಸುವ ಪಾಲುದಾರರಿಗೆ ಕಳುಹಿಸಿರುವ ಇ–ಮೇಲ್‌ನಲ್ಲಿ ಅದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.