ADVERTISEMENT

ಚಕ್ರಬಡ್ಡಿ ಮನ್ನಾ ಯೋಜನೆ: ಫೆ. 29ರ ಸಾಲ ಆಧಾರ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2020, 17:39 IST
Last Updated 28 ಅಕ್ಟೋಬರ್ 2020, 17:39 IST

ನವದೆಹಲಿ: ಮನ್ನಾ ಮಾಡಬೇಕಿರುವ ಚಕ್ರಬಡ್ಡಿಯ ಮೊತ್ತವನ್ನು ಲೆಕ್ಕ ಹಾಕಲು ಫೆಬ್ರುವರಿ 29ಕ್ಕೆ ಇದ್ದ ಸಾಲದ ಮೊತ್ತವನ್ನು ಪರಿಗಣಿಸಲಾಗುತ್ತದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ.

₹ 2 ಕೋಟಿವರೆಗಿನ ಸಾಲದ ಆರು ತಿಂಗಳ ಅವಧಿಯ ಚಕ್ರಬಡ್ಡಿಯನ್ನು ಮನ್ನಾ ಮಾಡುವಂತೆ ಭಾರತೀಯ ರಿಸರ್ವ್‌ ಬ್ಯಾಂಕ್ (ಆರ್‌ಬಿಐ) ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಹಾಗೂ ಬ್ಯಾಂಕುಗಳಿಗೆ ಮಂಗಳವಾರ ಸೂಚನೆ ನೀಡಿದೆ. ಸಾಲದ ಕಂತುಗಳ ಮರುಪಾವತಿಗೆ ವಿನಾಯಿತಿ ನೀಡಿದ್ದ ಆರು ತಿಂಗಳ ಅವಧಿಯ ಚಕ್ರಬಡ್ಡಿಯ ಈ ಯೋಜನೆಯ ಅಡಿ ಮನ್ನಾ ಆಗಲಿದೆ.

ಚಕ್ರಬಡ್ಡಿಯ ಮೊತ್ತವನ್ನು ನವೆಂಬರ್ 5ರೊಳಗೆ ಮನ್ನಾ ಮಾಡಬೇಕು ಎಂದು ಸೂಚಿಸಲಾಗಿದೆ. ಮನ್ನಾ ಸೌಲಭ್ಯ ಪಡೆಯಲು ಸಾಲಗಾರರು ಅರ್ಜಿ ಸಲ್ಲಿಸಬೇಕಾದ ಅಗತ್ಯ ಇಲ್ಲ ಎಂದು ಹಣಕಾಸು ಸಚಿವಾಲಯ ಹೇಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.