ADVERTISEMENT

ಸ್ಕ್ವಾಷ್‌: ಫೈನಲ್‌ಗೆ ಸೌರವ್‌–ದೀಪಿಕಾ

ಪಿಟಿಐ
Published 13 ಏಪ್ರಿಲ್ 2018, 20:18 IST
Last Updated 13 ಏಪ್ರಿಲ್ 2018, 20:18 IST

ಗೋಲ್ಡ್‌ ಕೋಸ್ಟ್‌: ಅಮೋಘ ಆಟ ಆಡಿದ ಭಾರತದ ಸೌರವ್‌ ಘೋಷಾಲ್‌ ಮತ್ತು ದೀಪಿಕಾ ಪಳ್ಳಿಕಲ್‌ ಅವರು ಕಾಮನ್‌ವೆಲ್ತ್‌ ಕ್ರೀಡಾಕೂಟದ ಸ್ಕಾಷ್‌ ಸ್ಪರ್ಧೆಯಲ್ಲಿ ಫೈನಲ್ ಪ್ರವೇಶಿಸಿದ್ದಾರೆ.

ಶುಕ್ರವಾರ ನಡೆದ ಮಿಶ್ರ ತಂಡ ವಿಭಾಗದ ಸೆಮಿಫೈನಲ್‌ನಲ್ಲಿ ಸೌರವ್‌ ಮತ್ತು ದೀಪಿಕಾ 2–1ರಿಂದ ನ್ಯೂಜಿಲೆಂಡ್‌ನ ಜೊಯೆಲ್ಲೆ ಕಿಂಗ್‌ ಮತ್ತು ಪಾಲ್‌ ಕಾಲ್‌ ಅವರನ್ನು ಸೋಲಿಸಿದರು.

ಕೂಟದಲ್ಲಿ ಅಗ್ರಸ್ಥಾನ ಹೊಂದಿರುವ ಕಿಂಗ್‌ ಮತ್ತು ಪಾಲ್‌ ಅವರು ಮೊದಲ ಗೇಮ್‌ನಲ್ಲಿ ಮೋಡಿ ಮಾಡಿದರು. ಚುರುಕಿನ ಸರ್ವ್‌ ಮತ್ತು ಆಕರ್ಷಕ ರಿಟರ್ನ್‌ಗಳ ಮೂಲಕ ಪಾಯಿಂಟ್ಸ್‌ ಕಲೆ ಹಾಕಿದ ಅವರು 11–9ರಿಂದ ಗೇಮ್ ಗೆದ್ದು 1–0ರ ಮುನ್ನಡೆ ಗಳಿಸಿದರು.

ADVERTISEMENT

ಐದನೆ ಶ್ರೇಯಾಂಕಿತ ಭಾರತದ ಜೋಡಿ ಎರಡನೆ ಗೇಮ್‌ನಲ್ಲಿ ಮಿಂಚಿತು. 11–8ರಿಂದ ಎದುರಾಳಿಗಳ ಸವಾಲು ಮೀರಿದ ದೀಪಿಕಾ ಮತ್ತು ಸೌರವ್‌ 1–1ರಲ್ಲಿ ಸಮಬಲ ಮಾಡಿಕೊಂಡರು.

ನಿರ್ಣಾಯಕ ಎನಿಸಿದ್ದ ಮೂರನೆ ಗೇಮ್‌ನಲ್ಲಿ ಭಾರತದ ಜೋಡಿ ರೋಚಕ ಘಟ್ಟದಲ್ಲಿ ಮಿಂಚಿನ ಆಟ ಆಡಿ ಗೆಲುವಿನ ತೋರಣ ಕಟ್ಟಿತು.

ಮಹಿಳೆಯರ ಡಬಲ್ಸ್‌ನಲ್ಲಿ ದೀಪಿಕಾ ಮತ್ತು ಜೋಷ್ನಾ ಚಿಣ್ಣಪ್ಪ ಸೆಮಿಫೈನಲ್‌ ಪ್ರವೇಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.