ADVERTISEMENT

ಸೇವಾ ವಲಯದ ಪ್ರಗತಿ ಇಳಿಕೆ

ಪಿಟಿಐ
Published 5 ಜನವರಿ 2019, 18:35 IST
Last Updated 5 ಜನವರಿ 2019, 18:35 IST

ನವದೆಹಲಿ: ಸೇವಾ ವಲಯದ ಚಟುವಟಿಕೆ ಡಿಸೆಂಬರ್‌ನಲ್ಲಿ ಅಲ್ಪ ಇಳಿಕೆ ಕಂಡಿದೆ ಎಂದು ನಿಕೇಯ್‌ ಇಂಡಿಯಾ ಸಂಸ್ಥೆ ತಿಳಿಸಿದೆ.

ನಿಕೇಯ್‌ ಇಂಡಿಯಾ ಸರ್ವೀಸಸ್‌ ಬಿಸಿನೆಸ್‌ ಆಕ್ಟಿವಿಟಿ ಸೂಚ್ಯಂಕನವೆಂಬರ್‌ನಲ್ಲಿ 53.7ರಷ್ಟಿತ್ತು.ಇದು ಡಿಸೆಂಬರ್‌ನಲ್ಲಿ 53.2ಕ್ಕೆ ಇಳಿಕೆಯಾಗಿದೆ. ಆದರೆ, ಉದ್ಯೋಗ ಸೃಷ್ಟಿಯಲ್ಲಿ ಉತ್ತಮ ಪ್ರಗತಿ ದಾಖಲಿಸಿದೆ.

‘ಹೊಸ ಯೋಜನೆಗಳು ಮತ್ತು ಉದ್ಯೋಗ ಸೃಷ್ಟಿಯಲ್ಲಿ ವಲಯವು ಸಕಾರಾತ್ಮಕ ಮಟ್ಟದಲ್ಲಿದೆ. ಆದರೆ, ವಹಿವಾಟು ವಿಸ್ತರಣೆ ಮಂದಗತಿಯಲ್ಲಿ ಸಾಗುವ ಮೂಲಕ2018ರ ವರ್ಷಾಂತ್ಯವನ್ನು ನಿರಾಶಾದಾಯಕವಾಗಿಸಿದೆ’ ಎಂದು ಐಎಚ್‌ಎಸ್‌ ಮರ್ಕಿಟ್‌ ಸಂಸ್ಥೆಯ ಆರ್ಥಿಕ ತಜ್ಞ ಪಾಲಿಯಾನಾ ಡಿ ಲಿಮಾ ವಿಶ್ಲೇಷಣೆ ಮಾಡಿದ್ದಾರೆ. ಸಾರ್ವತ್ರಿಕ ಚುನಾವಣೆಯ ಕಾರಣದಿಂದಾಗಿ ಪ್ರಗತಿಯ ವೇಗ ತಗ್ಗಿದರೂ2019ರಲ್ಲಿ ಸುಸ್ತಿರ ಪ್ರಗತಿ ಸಾಧಿಸಲಿದೆ ಎಂದುಸಂಸ್ಥೆ ವಿಶ್ವಾಸ ವ್ಯಕ್ತಪಡಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.