ADVERTISEMENT

ಹಸನ್‌ ಬದುಕು ಹಸನಾದ ಕತೆ: ಮಸಾಯ್ ಸ್ಕೂಲ್ ಯಶೋಗಾಥೆ

​ಪ್ರಜಾವಾಣಿ ವಾರ್ತೆ
Published 22 ಜನವರಿ 2020, 20:00 IST
Last Updated 22 ಜನವರಿ 2020, 20:00 IST
ಹಸನ್
ಹಸನ್   

ಇಂಟರ್‌ನೆಟ್‌ ಮೂಲಕ ಕನ್ನ ಹಾಕಿ ಸರ್ಕಾರದ ಮಹತ್ವದ ದಾಖಲೆ, ಸೇನೆಯ ರಹಸ್ಯ ಮಾಹಿತಿ ಕದಿಯುವ ಯುಗವಿದು. ಹ್ಯಾಕರ್‌ಗಳ ಕೈಗೆ ಸಿಗದಂತೆ ಮಹತ್ವದ ರಹಸ್ಯ ಮಾಹಿತಿಗಳನ್ನು ರಕ್ಷಿಸುವುದು ಸವಾಲಿನ ಕೆಲಸ. ಸಾಂಕೇತಿಕ ಭಾಷೆಯ ಗೂಡಾರ್ಥವನ್ನು ಭೇದಿಸುವ ಮತ್ತು ರಹಸ್ಯ ಮಾಹಿತಿಗಳನ್ನು ಸುರಕ್ಷಿತವಾಗಿ ರಕ್ಷಿಸಿ ಇಡಲು ಕೋಡಿಂಗ್‌ ಮತ್ತು ಡಿಕೋಡಿಂಗ್‌ ಜ್ಞಾನ ಗೊತ್ತಿರಬೇಕಾಗುತ್ತದೆ.

ಡಿಜಿಟಲ್‌ ಕೋಡಿಂಗ್ ಮತ್ತು ಡಿಕೋಡಿಂಗ್‌ ಕೌಶಲ ಗೊತ್ತಿರುವವರಿಗೆ ಭಾರಿ ಬೇಡಿಕೆ ಇದೆ. ಬೆಂಗಳೂರು ಮತ್ತು ಬಿಹಾರದ ಪಟ್ನಾದಲ್ಲಿ ಮಸಾಯ್‌ ಸ್ಕೂಲ್‌ ಮಿಲಿಟರಿ ಶೈಲಿಯ ಕೋಡಿಂಗ್‌ ಕೌಶಲವನ್ನು ಶಾಸ್ತ್ರೀಯವಾಗಿ ಕಲಿಸುತ್ತಿದೆ.

ಸ್ಟ್ಯಾಂಕ್‌ ವೆಬ್‌ ಅಭಿವೃದ್ಧಿ ಕಾರ್ಯಕ್ರಮ ರೂಪಿಸಿ, ವಿನ್ಯಾಸಗೊಳಿಸಿದೆ. ಇದೊಂದು ಕೌಶಲಯುಕ್ತ ಮತ್ತು ಉದ್ಯೋಗಕ್ಕೆ ಪೂರಕವಾದ ಕೋಡಿಂಗ್‌ ಕಾರ್ಯಕ್ರಮ. ಇಲ್ಲಿ ತರಬೇತಿ ಪಡೆದವರು ಉತ್ತಮ ಉದ್ಯೋಗ ಮತ್ತು ಸಂಬಳ ಪಡೆಯುತ್ತಿದ್ದಾರೆ.

ADVERTISEMENT

ಮಸಾಯ್‌ ಸ್ಕೂಲ್‌ನ ಪದವೀಧರರ ಮೊದಲ ತಂಡ ಹೊರಬಿದ್ದಿದೆ. ಈ ತಂಡದಲ್ಲಿರುವ ತಮಿಳುನಾಡಿನ ಹಾಸನದ ಹಸನ್ ಕತೆ ಕುತೂಹಲಕಾರಿಯಾಗಿದೆ.

ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಪದವೀಧರನಾಗಿದ್ದರೂ ಒಳ್ಳೆಯ ಉದ್ಯೋಗ ದೊರೆಯದ ಕಾರಣಹಸನ್‌ ಸ್ಥಳೀಯ ವರ್ಕ್‌ಶಾಪ್‌ನಲ್ಲಿ ಕಡಿಮೆ ಸಂಬಳಕ್ಕೆ ಕೆಲಸ ಮಾಡುತ್ತಿದ್ದರು. ಎಂಜಿನಿಯರಿಂಗ್‌ ಪದವಿ ಮಾತ್ರ ಸಾಕಾಗದು ವಿಶೇಷ ಕೌಶಲವೂ ಅಗತ್ಯ ಎಂಬ ಸಂಗತಿಯನ್ನು ಮನಗಂಡ ಹಸನ್‌ ನೇರವಾಗಿ ಸೇರಿದ್ದು ಬೆಂಗಳೂರಿನ ಮಸಾಯ್‌ ಸ್ಕೂಲ್‌ಗೆ.

ಬೆಂಗಳೂರಿನಲ್ಲಿ ಬಾಡಿಗೆ ರೂಂನಲ್ಲಿ ಉಳಿದುಕೊಳ್ಳುವಷ್ಟು ಸ್ಥಿತಿವಂತರಾಗಿರಲಿಲ್ಲ. ಕ್ಯಾಂಪಸ್‌ನಲ್ಲಿ ಉಳಿದುಕೊಂಡು ನಿತ್ಯ ಸಮೀಪದ ಮಸೀದೆಯಲ್ಲಿ ಸ್ನಾನ, ಪ್ರಾರ್ಥನೆ ಮುಗಿಸಿಕೊಂಡು ಬರುತ್ತಿದ್ದರು. ತರಬೇತಿ ಮುಗಿದ ತಕ್ಷಣ ಸ್ಟಾರ್ಟ್ ಅಪ್‌ವೊಂದರಲ್ಲಿ ಸ್ಟ್ಯಾಂಕ್‌ ಡೆವೆಲಪರ್ ಆಗಿ ಉದ್ಯೋಗ ಗಿಟ್ಟಿಸಿಕೊಂಡಿದ್ದು, ಕೈತುಂಬಾ ವೇತನ ಪಡೆಯುತ್ತಿದ್ದಾರೆ. ಇದು ಕೇವಲ ಹಸನ್‌ ಒಬ್ಬರ ಕತೆಯಲ್ಲ. ಪದವಿ ಮುಗಿಸಿ ಕೆಲಸ ಸಿಗದೆ ಪರದಾಡುತ್ತಿರುವ ಪ್ರತಿಯೊಬ್ಬ ನಿರುದ್ಯೋಗಿ ಯುವಕರ ಕತೆ ಇದಕ್ಕಿಂತ ಭಿನ್ನವಾಗಿಲ್ಲ.

ಇಲ್ಲಿ ಉಚಿತವಾಗಿ ಹೆಸರು ನೋಂದಣಿ ಮಾಡಬಹುದಾಗಿದೆ. ಅಭ್ಯರ್ಥಿಗಳು ಉತ್ತಮ ವೇತನದ ಉದ್ಯೋಗ ಪಡೆದ ಬಳಿಕ ಕೋರ್ಸ್‌ ಶುಲ್ಕ ಭರಿಸಬಹುದಾಗಿದೆ ಎನ್ನುತ್ತಾರೆ ಮಸಾಯ್‌ ಸ್ಕೂಲ್‌ ಸಹ ಸ್ಥಾಪಕ ಪ್ರತೀಕ್‌ ಶುಕ್ಲಾ. 12ನೇ ತರಗತಿ ಪಾಸಾದ ಅರ್ಹತೆಯೊಂದಿದ್ದರೆ ಸಾಕು. 2019ರಲ್ಲಿ ಬೆಂಗಳೂರಿನಲ್ಲಿ ಆರಂಭವಾದ ಮಸಾಯ್‌ ಸ್ಕೂಲ್‌ನಲ್ಲಿ ಸದ್ಯ 56 ವಿದ್ಯಾರ್ಥಿಗಳಿದ್ದಾರೆ. ಜನವರಿಯಲ್ಲಿ ಹೊಸ ಬ್ಯಾಚ್‌ ಆರಂಭವಾಗಲಿದೆ.

ಮಾಹಿತಿಗೆ ಸಂಪರ್ಕಿಸಿ:https://www.masaischool.com/#courses

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.