ADVERTISEMENT

ಐಪಿಒ: ಆರಂಭದ ದಿನವೇ ಹೆಚ್ಚು ಷೇರು ಮಾರಾಟ

ಪಿಟಿಐ
Published 23 ಆಗಸ್ಟ್ 2021, 20:45 IST
Last Updated 23 ಆಗಸ್ಟ್ 2021, 20:45 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್‌–ಜುಲೈ ಅವಧಿಯಲ್ಲಿ ಶೇಕಡ 52ರಷ್ಟು ಐಪಿಒ ಹೂಡಿಕೆದಾರರು, ಷೇರುಗಳು ಷೇರು ಮಾರುಕಟ್ಟೆ ಪ್ರವೇಶಿಸಿದ ದಿನವೇ ಮಾರಾಟ ಮಾಡಿದ್ದಾರೆ ಎಂದು ಮೋತಿಲಾಲ್‌ ಓಸ್ವಾಲ್‌ ಫೈನಾನ್ಶಿಯಲ್‌ ಸರ್ವೀಸಸ್ ಹೇಳಿದೆ.

ಶೇ 20ರಷ್ಟು ಹೂಡಿಕೆದಾರರು ಷೇರು ವಿನಿಮಯ ಕೇಂದ್ರಗಳಲ್ಲಿ ನೋಂದಣಿ ಮಾಡಿದ ಮೊದಲ ವಾರದೊಳಗೆ ಷೇರುಗಳನ್ನು ಮಾರಾಟ ಮಾಡಿದ್ದಾರೆ ಎಂದು ಅದು ತಿಳಿಸಿದೆ.

ಮೋತಿಲಾಲ್‌ನ 5.7 ಲಕ್ಷ ಹೂಡಿಕೆದಾರರು ಆರಂಭಿಕ ಷೇರು ಖರೀದಿಯಲ್ಲಿ ಭಾಗವಹಿಸಿದ್ದರು. ಹಿಂದಿನ ಹಣಕಾಸು ವರ್ಷದಲ್ಲಿ ಕೇವಲ 5.1 ಲಕ್ಷ ಹೂಡಿಕೆದಾರರು ಭಾಗವಹಿಸಿದ್ದರು.

ADVERTISEMENT

ಐಪಿಒದಲ್ಲಿ ಭಾಗವಹಿಸಿದ್ದ ಮೂರರಲ್ಲಿ ಎರಡರಷ್ಟು ಹೂಡಿಕೆದಾರರು ಗುಜರಾತ್‌, ರಾಜಸ್ಥಾನ ಮತ್ತು ಮಹಾರಾಷ್ಟ್ರ ರಾಜ್ಯಗಳಿಗೆ ಸೇರಿದವರಾಗಿದ್ದಾರೆ.

ಶೇ 61ರಷ್ಟು ಹೂಡಿಕೆದಾರರು ಐಪಿಒಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿದ್ದಾರೆ. ಗ್ಲೆನ್‌ಮಾರ್ಕ್‌ ಲೈಫ್‌ಸೈನ್ಸ್‌ ಐಪಿಒಗೆ ಶೇ 68ರಷ್ಟು ಅತಿ ಹೆಚ್ಚಿನ ಆನ್‌ಲೈನ್‌ ಅರ್ಜಿಗಳನ್ನು ಬಂದಿದ್ದವು. ಒಟ್ಟಾರೆ ಹೂಡಿಕೆಯ ಮೌಲ್ಯದಲ್ಲಿ ಶೇ 71ರಷ್ಟು ಆನ್‌ಲೈನ್‌ ಮೂಲಕವೇ ಬಂದಿದೆ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.