ADVERTISEMENT

ಬಾರ್ಬೆಕ್ಯು ನೇಷನ್‌ ಹಾಸ್ಪಿಟ್ಯಾಲಿಟಿ ಐಪಿಒಗೆ ಇಂದು ಕೊನೆಯ ದಿನ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2021, 3:17 IST
Last Updated 26 ಮಾರ್ಚ್ 2021, 3:17 IST
-
-   

ಬೆಂಗಳೂರು: ಡೈನಿಂಗ್ ರೆಸ್ಟೋರೆಂಟ್ ಸರಣಿ ಕಂಪನಿ ಬಾರ್ಬೆಕ್ಯು ನೇಷನ್‌ ಹಾಸ್ಪಿಟ್ಯಾಲಿಟಿ ಲಿಮಿಟೆಡ್‌ (ಬಿಎನ್‌ಎಚ್‌ಎಲ್ ), ಪ್ರಾಥಮಿಕ ಮಾರುಕಟ್ಟೆಯಿಂದ ಬಂಡವಾಳ ಸಂಗ್ರಹಿಸಲು ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಪ್ರಕಟಿಸಿದೆ. ಈ ಕೊಡುಗೆ ಖರೀದಿಸಲು ಶುಕ್ರವಾರ (ಮಾರ್ಚ್‌ 26) ಕೊನೆಯ ದಿನವಾಗಿದೆ.

ಇದೇ 24ರಂದು ಬಿಡುಗಡೆಯಾಗಿದ್ದ ‘ಐಪಿಒ’ದ ಬೆಲೆ ಶ್ರೇಣಿಯನ್ನು ₹ 498 ರಿಂದ ₹ 500ವರೆಗೆ ನಿಗದಿಪಡಿಸಲಾಗಿದೆ. ಕನಿಷ್ಠ ಹೂಡಿಕೆ 30 ಷೇರುಗಳಾಗಿದ್ದು, ನಂತರ 30 ಷೇರುಗಳ ಗುಣಾಕಾರದಲ್ಲಿ ಇರಲಿದೆ. ₹ 453 ಕೋಟಿ ಮೊತ್ತದ ನೀಡಿಕೆ ಇದಾಗಿದೆ.

ಐಪಿಒ ಮೂಲಕ ಸಂಗ್ರಹವಾಗುವ ಮೊತ್ತವನ್ನು ಹೊಸ ರೆಸ್ಟೊರೆಂಟ್‌ಗಳನ್ನು ಆರಂಭಿಸಲು, ವಹಿವಾಟು ವಿಸ್ತರಿಸಲು, ಕಂಪನಿಯ ಸಾಲ ಮರುಪಾವತಿ ಹಾಗೂ ಇತರ ಕಾರ್ಪೊರೇಟ್‌ ಉದ್ದೇಶಗಳಿಗೆ ಬಳಸಿಕೊಳ್ಳಲು ಕಂಪನಿ ಉದ್ದೇಶಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.