ADVERTISEMENT

ದೇಶದ ಬಂಡವಾಳ ಮಾರುಕಟ್ಟೆಯಲ್ಲಿ ‘ಎಫ್‌ಪಿಐ’ ಹೂಡಿಕೆ ₹ 7,605 ಕೋಟಿ

ಪಿಟಿಐ
Published 12 ಸೆಪ್ಟೆಂಬರ್ 2021, 10:26 IST
Last Updated 12 ಸೆಪ್ಟೆಂಬರ್ 2021, 10:26 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ವಿದೇಶಿ ಬಂಡವಾಳ ಹೂಡಿಕೆದಾರರು ದೇಶದ ಬಂಡವಾಳ ಮಾರುಕಟ್ಟೆಯಲ್ಲಿ ಹೂಡಿಕೆಯನ್ನು ಮುಂದುವರಿಸಿದ್ದಾರೆ. ಸೆಪ್ಟೆಂಬರ್‌ನಲ್ಲಿ ಈವರೆಗೆ ಒಟ್ಟಾರೆ ₹ 7,605 ಕೋಟಿ ಹೂಡಿಕೆ ಮಾಡಿದ್ದಾರೆ.

ವಿದೇಶಿ ಹೂಡಿಕೆದಾರರು ಸೆಪ್ಟೆಂಬರ್ 1 ರಿಂದ 9ರವರೆಗಿನ ಅವಧಿಯಲ್ಲಿ ₹ 4,385 ಕೋಟಿ ಮೌಲ್ಯದ ಷೇರುಗಳನ್ನು ಹಾಗೂ ₹ 3,220 ಕೋಟಿ ಮೌಲ್ಯದ ಸಾಲಪತ್ರಗಳನ್ನು ಖರೀದಿ ಮಾಡಿದ್ಧಾರೆ.

ಹೂಡಿಕೆದಾರರು ಆಗಸ್ಟ್‌ನಲ್ಲಿ ₹ 16,459 ಕೋಟಿ ಬಂಡವಾಳ ಹೂಡಿಕೆ ಮಾಡಿದ್ದರು. ಇದರಲ್ಲಿ ಬಾಂಡ್‌ ಮಾರುಕಟ್ಟೆಯಲ್ಲಿನ ಹೂಡಿಕೆಯ ಮೊತ್ತವೇ ದಾಖಲೆಯ ₹ 14,376 ಕೋಟಿಗಳಷ್ಟಿತ್ತು.

ADVERTISEMENT

ಜಾಗತಿಕ ಹೂಡಿಕೆಯು ಸವಾಲಿನಿಂದ ಕೂಡಿರಲಿದ್ದು, ಇದರಿಂದಾಗಿ 2021ರ ಸೆಪ್ಟೆಂಬರ್‌–ಡಿಸೆಂಬರ್‌ ಅವಧಿಯಲ್ಲಿ ಎಫ್‌ಪಿಐ ಒಳಹರಿವು ಚಂಚಲವಾಗಿರಲಿದೆ ಎಂದು ಕೋಟಕ್‌ ಸೆಕ್ಯುರಿಟೀಸ್‌ನ ಕಾರ್ಯನಿರ್ವಾಹಕ ಉಪಾಧ್ಯಕ್ಷ ಶ್ರೀಕಾಂತ್‌ ಚೌಹಾಣ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.