ADVERTISEMENT

ಗ್ಲೆನ್‌ಮಾರ್ಕ್‌ ಲೈಫ್‌ ಸೈನ್ಸಸ್‌ ಐಪಿಒ: ಪ್ರತಿ ಷೇರಿಗೆ ₹ 695–720ರವರೆಗೆ ನಿಗದಿ

ಪಿಟಿಐ
Published 22 ಜುಲೈ 2021, 3:40 IST
Last Updated 22 ಜುಲೈ 2021, 3:40 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಗ್ಲೆನ್‌ಮಾರ್ಕ್‌ ಲೈಫ್‌ ಸೈನ್ಸಸ್‌ ಕಂಪನಿಯು ಇದೇ 27ರಂದು ತನ್ನ ಷೇರುಗಳನ್ನು ಸಾರ್ವಜನಿಕರಿಗೆ ಖರೀದಿಗೆ ಮುಕ್ತವಾಗಿಸಲಿದ್ದು (ಐಪಿಒ), ಪ್ರತಿ ಷೇರಿಗೆ ₹ 695–720ರವರೆಗೆ ಬೆಲೆ ನಿಗದಿಪಡಿಸಿದೆ.

ಜುಲೈ 27ರಿಂದ 29ರವರೆಗೆ ಮೂರು ದಿನಗಳವರೆಗೆ ಷೇರು ಖರೀದಿಗೆ ಅವಕಾಶ ಇರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

₹ 1,060 ಕೋಟಿ ಮೊತ್ತದ ಹೊಸ ಷೇರುಗಳು ಹಾಗೂ ಗ್ಲೆನ್‌ಮಾರ್ಕ್‌ ಫಾರ್ಮಾದ 63 ಲಕ್ಷ ಷೇರುಗಳು ಮಾರಾಟಕ್ಕೆ ಲಭ್ಯವಿರಲಿವೆ. ಒಟ್ಟಾರೆ ₹ 1,513 ಕೋಟಿ ಬಂಡವಾಳ ಸಂಗ್ರಹಿಸುವ ನಿರೀಕ್ಷೆಯನ್ನು ಕಂಪನಿ ಹೊಂದಿದೆ.

ADVERTISEMENT

ಐಪಿಒ ಮೂಲಕ ಸಂಗ್ರಹ ಆಗಲಿರುವ ಬಂಡವಾಳವನ್ನು ದುಡಿಯುವ ಬಂಡವಾಳದ ಅಗತ್ಯ ಮತ್ತು ಇನ್ನಿತರೆ ಉದ್ದೇಶಗಳಿಗೆ ಬಳಸಿಕೊಳ್ಳಲಾಗುವುದು ಎಂದು ಕಂಪನಿ ತಿಳಿಸಿದೆ.

ಮಾರಾಟ ಮಾಡಲಿರುವ ಒಟ್ಟಾರೆ ಷೇರುಗಳಲ್ಲಿ ಅರ್ಧದಷ್ಟನ್ನು ಸಾಂಸ್ಥಿಕ ಹೂಡಿಕೆದಾರರರಿಗೆ ಮೀಸಲಿಡಲಾಗಿದೆ. ಶೇ 35ರಷ್ಟನ್ನು ರಿಟೇಲ್‌ ಹೂಡಿಕೆದಾರರಿಗೆ ಇನ್ನುಳಿದ ಶೇ 15ರಷ್ಟು ಸಾಂಸ್ಥಿಕೇತರ ಹೂಡಿಕೆದಾರರು ಖರೀದಿಸಬಹುದಾಗಿದೆ ಎಂದು ಹೇಳಿದೆ.

ಗೋಲ್ಡ್‌ಮನ್‌ ಸ್ಯಾಚ್ಸ್‌ (ಇಂಡಿಯಾ) ಸೆಕ್ಯುರಿಟೀಸ್‌ ಪ್ರೈವೇಟ್‌ ಲಿಮಿಟೆಡ್‌, ಎಸ್‌ಬಿಐ ಕ್ಯಾಪಿಟಲ್‌ ಮಾರ್ಕೇಟ್ಸ್‌, ಕೋಟಕ್‌ ಮಹೀಂದ್ರ ಕ್ಯಾಪಿಟಲ್‌ ಕಂಪನಿ, ಬಿಒಎಫ್‌ಎ ಸೆಕ್ಯುರಿಟೀಸ್‌ ಇಂಡಿಯಾ ಲಿಮಿಟೆಡ್, ಡಿಎಎಂ ಕ್ಯಾಪಿಟಲ್‌ ಅಡ್ವೈಸರ್ಸ್‌ ಲಿಮಿಟೆಡ್‌ ಮತ್ತು ಬಿಒಬಿ ಕ್ಯಾಪಿಟಲ್‌ ಮಾರ್ಕೇಟ್ಸ್‌ ಕಂಪನಿಗಳು ಐಪಿಒ ಪ್ರಕ್ರಿಯೆಯ ನಿರ್ವಹಣೆ ಮಾಡಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.