ADVERTISEMENT

ಸೆನ್ಸೆಕ್ಸ್ 536 ಅಂಶ ಇಳಿಕೆ

ಪಿಟಿಐ
Published 28 ಜನವರಿ 2021, 17:03 IST
Last Updated 28 ಜನವರಿ 2021, 17:03 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ದೇಶದ ಷೇರುಪೇಟೆಗಳಲ್ಲಿ ಸತತ ಐದನೇ ದಿನವೂ ನಕಾರಾತ್ಮಕ ವಹಿವಾಟು ನಡೆಯಿತು. ವಿದೇಶಿ ಬಂಡವಾಳ ಹೊರಹರಿವು ಹಾಗೂ ಜಾಗತಿಕ ಮಾರುಕಟ್ಟೆಗಳಲ್ಲಿ ಕಂಡುಬಂದ ಮಾರಾಟದ ಒತ್ತಡದಿಂದಾಗಿ ಷೇರುಪೇಟೆಗಳಲ್ಲಿ ಸೂಚ್ಯಂಕಗಳು ಇಳಿಕೆ ಕಾಣುವಂತಾಗಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಗುರುವಾರ 536 ಅಂಶ ಇಳಿಕೆ ಕಂಡು 46,874 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 150 ಅಂಶ ಇಳಿಕೆಯಾಗಿ 13,817 ಅಂಶಗಳಿಗೆ ತಲುಪಿತು.

ಐದು ದಿನಗಳ ವಹಿವಾಟಿನಲ್ಲಿ ಸೆನ್ಸೆಕ್ಸ್ 2,917.76 ಅಂಶಗಳಷ್ಟು ಹಾಗೂ ನಿಫ್ಟಿ 827 ಅಂಶಗಳಷ್ಟು ಕುಸಿತ ಕಂಡಿವೆ.

ADVERTISEMENT

ಗರಿಷ್ಠ ನಷ್ಟ: ದಿನದ ವಹಿವಾಟಿನಲ್ಲಿ ಎಚ್‌ಯುಎಲ್‌ ಷೇರು ಶೇ 3.65ರಷ್ಟು ಗರಿಷ್ಠ ನಷ್ಟ ಕಂಡಿತು. ಮಾರುತಿ, ಎಚ್‌ಡಿಎಫ್‌ಸಿ ಬ್ಯಾಂಕ್‌, ಪವರ್ ಗ್ರಿಡ್‌, ಕೋಟಕ್‌ ಬ್ಯಾಂಕ್‌, ಇಂಡಸ್‌ಇಂಡ್ ಬ್ಯಾಂಕ್‌, ಎಚ್‌ಸಿಎಲ್‌ ಟೆಕ್‌ ಮತ್ತು ಬಜಾಜ್‌ ಫಿನ್‌ಸರ್ವ್ ಷೇರುಗಳು ಸಹ ನಷ್ಟ ಅನುಭವಿಸಿದವು.

ಗಳಿಕೆ: ಎಕ್ಸಿಸ್‌ ಬ್ಯಾಂಕ್‌, ಎಸ್‌ಬಿಐ, ಒಎನ್‌ಜಿಸಿ, ಐಸಿಐಸಿಐ ಬ್ಯಾಂಕ್‌ ಮತ್ತು ಅಲ್ಟ್ರಾಟೆಕ್‌ ಷೇರುಗಳು ಶೇ 6.16ರವರೆಗೂ ಏರಿಕೆ ಕಂಡವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.