ADVERTISEMENT

ಎರಡನೇ ದಿನವೂ ಸೆನ್ಸೆಕ್ಸ್‌ ಇಳಿಕೆ

ಪಿಟಿಐ
Published 17 ಜೂನ್ 2021, 17:30 IST
Last Updated 17 ಜೂನ್ 2021, 17:30 IST
ಷೇರುಪೇಟೆ– ಸಾಂದರ್ಭಿಕ ಚಿತ್ರ
ಷೇರುಪೇಟೆ– ಸಾಂದರ್ಭಿಕ ಚಿತ್ರ   

ಮುಂಬೈ: ದೇಶದ ಷೇರುಪೇಟೆಗಳಲ್ಲಿ ಸತತ ಎರಡನೇ ದಿನವೂ ಸೂಚ್ಯಂಕಗಳು ಇಳಿಕೆ ಕಂಡವು. ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ 179 ಅಂಶ ಇಳಿಕೆ ಆಗಿ 52,323 ಅಂಶಗಳಿಗೆ ತಲುಪಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 76 ಅಂಶ ಇಳಿಕೆಯಾಗಿ 15,691ಕ್ಕೆ ತಲುಪಿತು.

ನಿರೀಕ್ಷೆಗಿಂತಲೂ ವೇಗವಾಗಿ ಬಡ್ಡಿದರ ಏರಿಕೆ ಮಾಡುವುದಾಗಿ ಅಮೆರಿಕದ ಫೆಡರಲ್‌ ರಿಸರ್ವ್ ಹೇಳಿದೆ. ಈ ಸುದ್ದಿಯು ಜಾಗತಿಕ ಷೇರುಪೇಟೆಗಳಲ್ಲಿ ಇಳಿಮುಖ ವಹಿವಾಟು ನಡೆಯುವಂತೆ ಮಾಡಿ, ದೇಶಿ ಮಾರುಕಟ್ಟೆಯ ಮೇಲೆಯೂ ಪರಿಣಾಮ ಉಂಟುಮಾಡಿತು ಎಂದು ತಜ್ಞರು ಹೇಳಿದ್ದಾರೆ.

ಬ್ಯಾಂಕ್‌ ಮತ್ತು ಹಣಕಾಸು ವಲಯದ ಷೇರುಗಳು ಹೆಚ್ಚಿನ ನಷ್ಟ ಅನುಭವಿಸಿದವು. ಬಿಎಸ್‌ಇ ಮಿಡ್‌ ಮತ್ತು ಸ್ಮಾಲ್ ಕ್ಯಾಪ್‌ ಸೂಚ್ಯಂಕಗಳು ಶೇ 1.29ರವರೆಗೂ ಇಳಿಕೆ ಕಂಡಿವೆ.

ADVERTISEMENT

ರೂಪಾಯಿ 76 ಪೈಸೆ ಕುಸಿತ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ 76 ಪೈಸೆ ಕುಸಿತ ಕಂಡಿದ್ದು, ಒಂದು ಡಾಲರ್‌ಗೆ ₹ 74.08ಕ್ಕೆ ತಲುಪಿತು. ಎಂಟು ದಿನಗಳ ವಹಿವಾಟು ಅವಧಿಗಳಲ್ಲಿ ರೂಪಾಯಿ ಮೌಲ್ಯ 128 ಪೈಸೆಗಳಷ್ಟು ಇಳಿಕೆ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.