ADVERTISEMENT

ಷೇರುಪೇಟೆಯಲ್ಲಿ ಸಕಾರಾತ್ಮಕ ವಹಿವಾಟು; ಸೆನ್ಸೆಕ್ಸ್‌ 850 ಅಂಶ ಹೆಚ್ಚಳ

ಏಜೆನ್ಸೀಸ್
Published 30 ಮಾರ್ಚ್ 2021, 6:36 IST
Last Updated 30 ಮಾರ್ಚ್ 2021, 6:36 IST
ಷೇರುಪೇಟೆ ವಹಿವಾಟು–ಸಾಂದರ್ಭಿಕ ಚಿತ್ರ
ಷೇರುಪೇಟೆ ವಹಿವಾಟು–ಸಾಂದರ್ಭಿಕ ಚಿತ್ರ   

ಮುಂಬೈ: ಹೋಳಿ ಹಬ್ಬದ ಪ್ರಯುಕ್ತ ಸೋಮವಾರ ರಜೆಯಲ್ಲಿದ್ದ ದೇಶದ ಷೇರುಪೇಟೆಗಳಲ್ಲಿ ಮಂಗಳವಾರ ಸಕಾರಾತ್ಮಕ ವಹಿವಾಟು ದಾಖಲಾಗಿದೆ. ಆರಂಭಿಕ ವಹಿವಾಟಿನಲ್ಲಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 500 ಅಂಶ ಏರಿಕೆ ಕಂಡಿತು.

ಎಚ್‌ಡಿಎಫ್‌ಸಿ, ಹಿಂದುಸ್ತಾನ್‌ ಯೂನಿಲಿವರ್‌ ಹಾಗೂ ಐಸಿಐಸಿಐ ಬ್ಯಾಂಕ್‌ ಷೇರುಗಳು ಗಳಿಕೆ ಕಂಡಿವೆ. ಸೆನ್ಸೆಕ್ಸ್‌ ಬೆಳಿಗ್ಗೆ 10:55ರ ವರೆಗೂ ಶೇ 1.73ರಷ್ಟು (847.65 ಅಂಶ) ಹೆಚ್ಚಳವಾಗಿ 49,856.15 ಅಂಶಗಳಲ್ಲಿ ವಹಿವಾಟು ನಡೆದಿದೆ. ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 254.80 ಅಂಶಗಳು (ಶೇ 1.76ರಷ್ಟು) ಏರಿಕೆಯಾಗಿ 14,762.10 ಅಂಶಗಳಲ್ಲಿ ವಹಿವಾಟು ಮುಂದುವರಿದಿದೆ.

ಸೆನ್ಸೆಕ್ಸ್‌ ಕಂಪನಿಗಳ ಸಾಲಿನಲ್ಲಿ ಎಚ್‌ಯುಎಲ್‌, ಟೈಟಾನ್‌, ಎನ್‌ಟಿಪಿಸಿ, ಒಎನ್‌ಜಿಸಿ, ಡಾ.ರೆಡ್ಡೀಸ್‌, ನೆಸ್ಲೆ ಇಂಡಿಯಾ, ಪವರ್‌ಗ್ರಿಡ್‌, ಎಚ್‌ಡಿಎಫ್‌ಸಿ ಹಾಗೂ ಐಸಿಐಸಿಐ ಬ್ಯಾಂಕ್‌ ಷೇರುಗಳು ಶೇ 3ರ ವರೆಗೂ ಗಳಿಕೆ ಕಂಡಿವೆ. ಮಹೀಂದ್ರಾ ಆ್ಯಂಡ್‌ ಮಹೀಂದ್ರಾ ಷೇರು ಬೆಲೆ ಇಳಿಕೆಯಾಗಿದೆ.

ADVERTISEMENT

ಅಮೆರಿಕದ ಡಾಲರ್‌ ಎದುರು ಭಾರತದ ರೂಪಾಯಿ ಮೌಲ್ಯ 34 ಪೈಸೆ ಕುಸಿದಿದೆ. ಪ್ರತಿ ಡಾಲರ್‌ಗೆ ₹ 72.85ರಲ್ಲಿ ವಹಿವಾಟು ನಡೆದಿದೆ.

ಷೇರುಪೇಟೆಗಳಲ್ಲಿ ಸಕಾರಾತ್ಮಕ ವಹಿವಾಟು ಕಂಡು ಬಂದರೂ, ಮಹಾರಾಷ್ಟ್ರದಲ್ಲಿ ಕೋವಿಡ್‌ ಪ್ರಕರಣಗಳ ಏರಿಕೆಯು ವಹಿವಾಟಿನ ಪರಿಣಾಮ ಬೀರಬಹುದಾಗಿದೆ.

ಶುಕ್ರವಾರ ವಹಿವಾಟು ಅಂತ್ಯಕ್ಕೆ ಸೆನ್ಸೆಕ್ಸ್‌ 568.38 ಅಂಶಗಳು ಹೆಚ್ಚಳವಾಗಿ 49,008.50 ಅಂಶ ಹಾಗೂ ನಿಫ್ಟಿ 182.40 ಅಂಶಗಳು ಏರಿಕೆಯಾಗಿ 14,507.30 ಅಂಶ ತಲುಪಿತ್ತು. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹ 50.13 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.