ADVERTISEMENT

ಷೇರುಪೇಟೆ: ಲಾಭ ಗಳಿಕೆ ವಹಿವಾಟು, 5 ದಿನಗಳ ಓಟಕ್ಕೆ ತಡೆ

ಪಿಟಿಐ
Published 19 ಆಗಸ್ಟ್ 2022, 13:56 IST
Last Updated 19 ಆಗಸ್ಟ್ 2022, 13:56 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಐದು ದಿನಗಳಿಂದ ಗಳಿಕೆ ಕಂಡಿದ್ದ ದೇಶದ ಷೇರುಪೇಟೆ ಸೂಚ್ಯಂಕಗಳು ಶುಕ್ರವಾರ ಕುಸಿತ ದಾಖಲಿಸಿದವು. ಹೂಡಿಕೆದಾರರು ಲಾಭ ಗಳಿಕೆಯ ಉದ್ದೇಶದಿಂದ ಷೇರುಗಳನ್ನು ಮಾರಾಟ ಮಾಡಿದ್ದು ಕುಸಿತಕ್ಕೆ ಒಂದು ಕಾರಣ.

ರೂಪಾಯಿ ಮೌಲ್ಯ ಇಳಿಕೆ ಹಾಗೂ ವಿದೇಶಿ ಬಂಡವಾಳದ ಹೊರಹರಿವು ಕೂಡ ಕುಸಿತಕ್ಕೆ ಕಾರಣವಾದವು ಎಂದು ವರ್ತಕರು ತಿಳಿಸಿದ್ದಾರೆ. ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 651 ಅಂಶ, ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 198 ಅಂಶ ಕುಸಿದವು.

‘ಜಾಗತಿಕ ಷೇರುಪೇಟೆಗಳಲ್ಲಿನ ಮಂದಗತಿಯ ವಹಿವಾಟು ಹಾಗೂ ಹೂಡಿಕೆದಾರರು ಲಾಭ ಗಳಿಕೆಯ ಉದ್ದೇಶದಿಂದ ನಡೆಸಿದ ವಹಿವಾಟು ದೇಶದ ಷೇರುಪೇಟೆ ಸೂಚ್ಯಂಕಗಳ ಮೇಲೆ ಪರಿಣಾಮ ಉಂಟುಮಾಡಿತು’ ಎಂದು ಜಿಯೋಜಿತ್ ಫೈನಾನ್ಶಿಯಲ್‌ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ.

ಶುಕ್ರವಾರಕ್ಕೆ ಕೊನೆಗೊಂಡ ವಾರದಲ್ಲಿ ಸೆನ್ಸೆಕ್ಸ್ ಒಟ್ಟು 183 ಅಂಶ, ನಿಫ್ಟಿ 60 ಅಂಶ ಏರಿಕೆ ಕಂಡಂತಾಗಿದೆ. ‘ಸಾಲದ ಮೇಲಿನ ಬಡ್ಡಿ ದರಕ್ಕೆ ಹೆಚ್ಚು ಸ್ಪಂದಿಸುವ ಬ್ಯಾಂಕಿಂಗ್, ಆಟೊಮೊಬೈಲ್ ಮತ್ತು ರಿಯಾಲ್ಟಿ ಷೇರುಗಳಲ್ಲಿ ಲಾಭ ಗಳಿಕೆಯ ವಹಿವಾಟು ಹೆಚ್ಚು ನಡೆದಿದೆ’ ಎಂದು ಕೋಟಕ್ ಸೆಕ್ಯುರಿಟೀಸ್‌ನ ಡೆಪ್ಯುಟಿ ಉಪಾಧ್ಯಕ್ಷ ಅಮೋಲ್ ಅಠವಳೆ ಹೇಳಿದ್ದಾರೆ.

ಬಿಎಸ್‌ಇ ಮಿಡ್‌ಕ್ಯಾಪ್ ಹಾಗೂ ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ಕ್ರಮವಾಗಿ ಶೇ 1.27ರಷ್ಟು ಮತ್ತು ಶೇ 0.93ರಷ್ಟು ಇಳಿಕೆ ಕಂಡಿವೆ.

ಸೋಲ್, ಶಾಂಘೈ, ಟೋಕಿಯೊ ಷೇರುಪೇಟೆಗಳು ಕುಸಿದಿವೆ. ಹಾಂಗ್‌ಕಾಂಗ್‌ ಷೇರುಪೇಟೆಯಲ್ಲಿ ಏರಿಕೆ ದಾಖಲಾಗಿದೆ.

ಬಿಎಸ್‌ಇ: ವಲಯವಾರು ಇಳಿಕೆ

ರಿಯಾಲ್ಟಿ;2.14

ಲೋಹ;1.84

ಎಫ್‌ಎಂಸಿಜಿ;1.24

ಹಣಕಾಸು;1.63

ತೈಲ ಮತ್ತು ಅನಿಲ;1.62

ಬ್ಯಾಂಕ್‌;1.61

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.