ADVERTISEMENT

ಸೆನ್ಸೆಕ್ಸ್ 975 ಅಂಶ ಚೇತರಿಕೆ

ಪಿಟಿಐ
Published 21 ಮೇ 2021, 16:43 IST
Last Updated 21 ಮೇ 2021, 16:43 IST
ಷೇರುಪೇಟೆ ವಹಿವಾಟು–ಸಾಂದರ್ಭಿಕ ಚಿತ್ರ
ಷೇರುಪೇಟೆ ವಹಿವಾಟು–ಸಾಂದರ್ಭಿಕ ಚಿತ್ರ   

ಮುಂಬೈ: ಎರಡು ದಿನಗಳಿಂದ ಕುಸಿತ ಕಂಡಿದ್ದ ಷೇರುಪೇಟೆ ಸಂವೇದಿ ಸೂಚ್ಯಂಕಗಳು ಶುಕ್ರವಾರ ಭರ್ಜರಿ ಏರಿಕೆ ದಾಖಲಿಸಿದವು. ಎಸ್‌ಬಿಐನ ಉತ್ತಮ ಫಲಿತಾಂಶ ಹಾಗೂ ಕೋವಿಡ್‌–19 ಪ್ರಕರಣಗಳು ಕಡಿಮೆ ಆಗುತ್ತಿರುವುದು ಮಾರುಕಟ್ಟೆಯಲ್ಲಿ ಉತ್ಸಾಹದ ವಾತಾವರಣ ನಿರ್ಮಾಣಕ್ಕೆ ಕಾರಣವಾದವು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 975 ಅಂಶ ಏರಿಕೆ ಕಂಡಿತು. ಮಾರ್ಚ್‌ 30ರ ನಂತರ ಸೆನ್ಸೆಕ್ಸ್‌ ಒಂದು ದಿನದಲ್ಲಿ ಕಂಡ ಅತಿದೊಡ್ಡ ಏರಿಕೆ ಇದು. ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 269 ಅಂಶ ಏರಿಕೆ ಕಂಡಿತು.

ಶುಕ್ರವಾರದ ವಹಿವಾಟಿನಲ್ಲಿ ಹೂಡಿಕೆದಾರರ ಸಂಪತ್ತು ಒಟ್ಟು ₹ 2.41 ಲಕ್ಷ ಕೋಟಿಯಷ್ಟು ಜಾಸ್ತಿ ಆಗಿದೆ. ಈ ವಾರದ ಅವಧಿಯಲ್ಲಿ ಸೆನ್ಸೆಕ್ಸ್‌ ಒಟ್ಟು 1,807 ಅಂಶ, ನಿಫ್ಟಿ 497 ಅಂಶ ಏರಿಕೆ ದಾಖಲಿಸಿವೆ. ‘ಎಸ್‌ಬಿಐ ಉತ್ತಮ ಫಲಿತಾಂಶ ದಾಖಲಿಸಿದ ಕಾರಣ, ಬ್ಯಾಂಕಿಂಗ್ ವಲಯದ ಷೇರುಗಳು ಉತ್ತಮ ಏರಿಕೆ ಕಂಡವು’ ಎಂದು ಎಲ್‌ಕೆಪಿ ಸೆಕ್ಯುರಿಟೀಸ್‌ನ ಸಂಶೋಧನಾ ಮುಖ್ಯಸ್ಥ ಎಸ್. ರಂಗನಾಥನ್ ಹೇಳಿದರು. ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯದಲ್ಲಿ 23 ಪೈಸೆ ಏರಿಕೆ ಆಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.