ADVERTISEMENT

1,030 ಅಂಶ ಏರಿದ ಸೆನ್ಸೆಕ್ಸ್

ಪಿಟಿಐ
Published 24 ಫೆಬ್ರುವರಿ 2021, 16:13 IST
Last Updated 24 ಫೆಬ್ರುವರಿ 2021, 16:13 IST

ಮುಂಬೈ: ಹಣಕಾಸು ವಲಯದ ಷೇರುಗಳ ಖರೀದಿ ಭರಾಟೆ ಜೋರಾಗಿದ್ದ ಕಾರಣದಿಂದಾಗಿ ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್‌ ಬುಧವಾರದ ವಹಿವಾಟಿನಲ್ಲಿ 1,030 ಅಂಶ ಏರಿಕೆ ಕಂಡಿತು.

ರಾಷ್ಟ್ರೀಯ ಷೇರುಪೇಟೆಯಲ್ಲಿ ತಾಂತ್ರಿಕ ಕಾರಣದಿಂದಾಗಿ ವಹಿವಾಟು ಕೆಲವು ಹೊತ್ತು ಸ್ಥಗಿತಗೊಂಡಿತ್ತು. ನಂತರ, ವಹಿವಾಟಿನ ಅವಧಿಯನ್ನು ತುಸು ವಿಸ್ತರಿಸಲಾಯಿತು. ರಾಷ್ಟ್ರೀಯ ಷೇರುಪೇಟೆಯ ಸೂಚ್ಯಂಕ ನಿಫ್ಟಿ 274 ಅಂಶ ಏರಿಕೆ ದಾಖಲಿಸಿತು.

ಷೇರುಪೇಟೆಯ ದಿನದ ವಹಿವಾಟು ಮಧ್ಯಾಹ್ನ 3.30ಕ್ಕೆ ಮುಕ್ತಾಯಗೊಳ್ಳುತ್ತದೆ. ಬುಧವಾರ 3.30ಕ್ಕೂ ತುಸು ಮೊದಲು, ‘ವಹಿವಾಟು 5 ಗಂಟೆಯವರೆಗೂ ಮುಂದುವರಿಯಲಿದೆ’ ಎಂದು ಬಿಎಸ್‌ಇ ಮತ್ತು ಎನ್‌ಎಸ್‌ಇ ಪ್ರಕಟಿಸಿದವು. ಎನ್‌ಎಸ್‌ಇಯಲ್ಲಿ ಬೆಳಿಗ್ಗೆ 11.40ರ ನಂತರ ತಾಂತ್ರಿಕ ದೋಷದಿಂದಾಗಿ ವಹಿವಾಟು ನಡೆದಿರಲಿಲ್ಲ. ಆದರೆ, ಬಿಎಸ್‌ಇಯಲ್ಲಿ ವಹಿವಾಟು ಮುಂದುವರಿದಿತ್ತು.

ADVERTISEMENT

ಬ್ರೆಂಟ್ ಕಚ್ಚಾ ತೈಲದ ಬೆಲೆಯಲ್ಲಿ ಶೇಕಡ 0.96ರಷ್ಟು ಹೆಚ್ಚಳ ಆಗಿದೆ. ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯದಲ್ಲಿ 11 ಪೈಸೆ ಹೆಚ್ಚಳ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.