ADVERTISEMENT

ಜೊಮ್ಯಾಟೊ ಕಂಪನಿಯ ಷೇರು ದರ ಶೇ 53 ಏರಿಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಜುಲೈ 2021, 8:49 IST
Last Updated 23 ಜುಲೈ 2021, 8:49 IST
ಜೊಮ್ಯಾಟೊ ಷೇರು ದರ ಭರ್ಜರಿ ಏರಿಕೆ - ಪ್ರಾತಿನಿಧಿಕ ಚಿತ್ರ
ಜೊಮ್ಯಾಟೊ ಷೇರು ದರ ಭರ್ಜರಿ ಏರಿಕೆ - ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಸಿದ್ಧ ಆಹಾರವನ್ನು ಮನೆ ಬಾಗಿಲಿಗೆ ತಲುಪಿಸುವ ಸೇವೆ ನೀಡುತ್ತಿರುವ ಜೊಮ್ಯಾಟೊ ಕಂಪನಿ ಷೇರು ಪೇಟೆಗೆ ಲಗ್ಗೆ ಇರಿಸಿದ ಆರಂಭದ ದಿನವೇ ಭರ್ಜರಿ ಗಳಿಕೆಯತ್ತ ಸಾಗಿದೆ.

ಜೊಮ್ಯಾಟೊ ಕಂಪನಿಯ ಷೇರುಗಳು ಸಾರ್ವಜನಿಕ ಖರೀದಿಗೆ ಮುಕ್ತವಾಗಿದ್ದು, ಶುಕ್ರವಾರ ನಿಗದಿತ ಮೊತ್ತಕ್ಕಿಂತ ಶೇ 53 ಏರಿಕೆ ದರದಲ್ಲಿ ಮಾರಾಟವಾಗಿದೆ.

ಜೊಮ್ಯಾಟೊ, ಐಪಿಒ ಮೂಲಕ ಪ್ರತಿ ಷೇರಿಗೆ ₹76 ದರ ನಿಗದಿಪಡಿಸಿತ್ತು. ಆದರೆ, ಶುಕ್ರವಾರದ ವಹಿವಾಟು ಆರಂಭದಲ್ಲಿ ಶೇ 53 ಏರಿಕೆಯೊಂದಿಗೆ ₹116 ದರ ಪಡೆದುಕೊಂಡಿದೆ.

ADVERTISEMENT

ಅಲ್ಲದೆ, ಜೊಮ್ಯಾಟೊ ಷೇರು ಖರೀದಿಸಿದವರಲ್ಲಿ ಹೆಚ್ಚಿನವರು ಯುವಕರು ಮತ್ತು ಮೊದಲ ಬಾರಿಗೆ ಷೇರು ಹೂಡಿಕೆ ಕ್ಷೇತ್ರಕ್ಕೆ ಕಾಲಿರಿಸಿದವರು ಎಂದು ಪೇಟಿಎಂ ಮನಿ ಹೇಳಿತ್ತು.

ಜೊಮ್ಯಾಟೊ, 2008ರಲ್ಲಿ ಸ್ಥಾಪನೆಯಾಗಿದ್ದು, ದೇಶದ 525 ನಗರಗಳಲ್ಲಿ ಕಾರ್ಯಾಚರಿಸುತ್ತಿದ್ದು, ಸುಮಾರು 3,90,000 ರೆಸ್ಟೋರೆಂಟ್‌ಗಳ ಜತೆ ಸಹಭಾಗಿತ್ವ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.