ADVERTISEMENT

ಪುರಸಭೆ ಮುಂದೆ ನೀರಿಗಾಗಿ ಪ್ರತಿಭಟನೆ

4ನೇ ವಾರ್ಡ್ ಶೇಷಗಿರಿ ಬಡಾವಣೆ ಸಮರ್ಪಕವಾಗಿ ನೀರು ಪೂರೈಸಲು ಸ್ಥಳೀಯರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2018, 11:03 IST
Last Updated 17 ಏಪ್ರಿಲ್ 2018, 11:03 IST

ಪಾವಗಡ: 4ನೇ ವಾರ್ಡ್ ಶೇಷಗಿರಿ ಬಡಾವಣೆ ಸಮರ್ಪಕವಾಗಿ ನೀರು ಪೂರೈಸಬೇಕು ಎಂದು ಒತ್ತಾಯಿಸಿ ಬಡಾವಣೆ ನಿವಾಸಿಗಳು ಸೋಮವಾರ ಪುರಸಭೆ ಮುಂದೆ ಖಾಲಿ ಕೊಡಗಳೊಂದಿಗೆ ಪ್ರತಿಭಟಿಸಿದರು.

ಪುರಸಭೆ ಅಧಿಕಾರಿಗಳು, ಸಿಬ್ಬಂದಿ ಬೇಜವಾಬ್ದಾರಿಯಿಂದಾಗಿ ಶೇಷಗಿರಿ ಬಡಾವಣೆ ನಿವಾಸಿಗಳು 2 ತಿಂಗಳಿಂದ ನೀರಿಲ್ಲದೆ ವ್ಯಥೆ ಅನುಭವಿಸುತ್ತಿದ್ದಾರೆ. ಬಳಕೆ ನೀರನ್ನೂ ಕೊಳ್ಳಬೇಕಿದೆ ಎಂದು ಆರೋಪಿಸಿದರು.

ನೀರು ಏಕೆ ಪೂರೈಸುತ್ತಿಲ್ಲ ಎಂದು ಸಿಬ್ಬಂದಿಯನ್ನು ಕೇಳಿದರೆ ಬೇಜವಾಬ್ದಾರಿ ಉತ್ತರ ನೀಡುತ್ತಾರೆ. ಸೌಜನ್ಯಕ್ಕಾದರೂ ಬಡಾವಣೆಗೆ ಭೇಟಿ ನೀಡಿ ಸಮಸ್ಯೆ ಬಗ್ಗೆ ಗಮನಹರಿಸುತ್ತಿಲ್ಲ. ಟ್ಯಾಂಕರ್‌ಗೆ ಹಣ ಕೊಡಲಾಗದೆ ಕಿಲೋ ಮೀಟರ್ ದೂರದಿಂದ ನೀರನ್ನು ಹೊತ್ತು ತರಬೇಕಿದೆ ಎಂದು ಮಹಿಳೆಯರು ಸಮಸ್ಯೆ ಹೇಳಿಕೊಂಡರು.

ADVERTISEMENT

ಶೀಘ್ರ ಸಮಸ್ಯೆ ಬಗೆಹರಿಸದಿದ್ದಲ್ಲಿ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿದರು. ಬಡಾವಣೆ ನಿವಾಸಿ ನಾಗಭೂಷಣ್, ಶ್ರೀನಿವಾಸ್, ಲಕ್ಷ್ಮಕ್ಕ, ಸರೋಜಮ್ಮ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.