ADVERTISEMENT

ಟ್ರಾವೆಲ್ ಅಂಡ್ ಟೂರಿಸಂ ಕೋರ್ಸ್ ಮಾಡುವಾಸೆ...

ಅನ್ನಪೂರ್ಣ ಮೂರ್ತಿ
Published 20 ಮೇ 2018, 19:30 IST
Last Updated 20 ಮೇ 2018, 19:30 IST
ಟ್ರಾವೆಲ್ ಅಂಡ್ ಟೂರಿಸಂ ಕೋರ್ಸ್ ಮಾಡುವಾಸೆ...
ಟ್ರಾವೆಲ್ ಅಂಡ್ ಟೂರಿಸಂ ಕೋರ್ಸ್ ಮಾಡುವಾಸೆ...   

1. ನಾನು ದ್ವಿತೀಯ ಪಿಯುಸಿ (ಕಾಮರ್ಸ್‌ ವಿಭಾಗದಲ್ಲಿ) ಓದುತ್ತಿದ್ದೇನೆ. ನಾನು ಟ್ರಾವೆಲ್ ಅಂಡ್ ಟೂರಿಸಂ ಕೋರ್ಸ್ ಬಗ್ಗೆ ಕೇಳಿದ್ದೇನೆ. ಇದರ ಬಗ್ಗೆ ಮಾಹಿತಿ ನೀಡುತ್ತೀರಾ? ಈ ಕೋರ್ಸ್ ಯಾವ ಕಾಲೇಜಿನಲ್ಲಿದೆ. ನನಗೆ ಬೆಂಗಳೂರಿನಲ್ಲಿ ಓದಬೇಕೆಂಬ ಆಸೆ ಇದೆ.
–ಚೇತನ್, ಶಿವಮೊಗ್ಗ

ಉತ್ತರ: ಪ್ರಯಾಣಿಕರು, ಹಲವಾರು ದೇಶಗಳನ್ನು ಸುತ್ತುವುದು, ಪರ್ವತರೋಹಣ ಮಾಡುವುದು, ಬ್ಯುಸಿನೆಸ್‌ ಮೇಲೆ ಊರು–ದೇಶವನ್ನು ಸುತ್ತುವುದು, ತೀರ್ಥಯಾತ್ರೆಗಳಿಗೆ ಹೋಗುವುದು ಮಾಡುತ್ತಾರೆ. ಇವರಿಗೆಲ್ಲಾ ಪ್ರಯಾಣದ ತಂಗುವ ಸೌಕರ್ಯವನ್ನೂ ಊಟ–ತಿಂಡಿಯ ವ್ಯವಸ್ಥೆಯನ್ನೂ ನೋಡುವ ಜಾಗಗಳಿಗೆ ಗೈಡ್‌ಗಳನ್ನು ಒದಗಿಸುವುದು – ಈ ಎಲ್ಲಾ ಜವಾಬ್ದಾರಿಯನ್ನು ಪದವಿ, ಸ್ನಾತಕೋತ್ತರ ಪದವಿ ಪಡೆದ, ಟ್ರಾವೆಲ್‌ ಅಂಡ್‌ ಟೂರಿಸಂ ಪರಿಣಿತರು ಮಾಡುತ್ತಾರೆ. ‌

ಬಿಎ/ಬಿಕಾಂ ಇನ್ ಟ್ರಾವೆಲ್ ಅಂಡ್ ಟೂರಿಸಂ ಕೋರ್ಸ್‌ಗಳಿವೆ. ಎಂಟಿಎ ಮಾಸ್ಟರ್ ಆಫ್ ಟ್ರಾವೆಲ್ ಅಂಡ್ ಟೂರಿಸಂ ಕೋರ್ಸ್‌ ಸಹ ಇದೆ. ಇಂಟಿಗ್ರೇಟೆಡ್ ಕೋರ್ಸ್ 5 ವರ್ಷದ್ದು, ಎಂಬಿಎ ಇನ್ ಟ್ರಾವೆಲ್ ಅಂಡ್ ಟೂರಿಸಂ ಇದೆ. ಡಿಗ್ರಿ ಕೋರ್ಸ್ – 3ವರ್ಷ ಅವಧಿಯದುಸ್ನಾತಕೋತ್ತರ – 2ವರ್ಷ ಅವಧಿಯದು

ಎಂಬಿಎ – 2ವರ್ಷ ಅವಧಿಯದು ಬೆಂಗಳೂರಿನಲ್ಲೇ 42 ಕಾಲೇಜುಗಳಲ್ಲಿ ಈ ವ್ಯಾಸಂಗದ ಅವಕಾಶವಿದೆ. ಬಿಎ/ಬಿಕಾಂ/ಎಂಟಿಎ ಇನ್ ಟ್ರಾವೆಲ್ ಅಂಡ್ ಟೂರಿಸಂ ನೀಡುವ ಕೆಲವು ಕಾಲೇಜುಗಳು;

1. Garden city University

www.gardenciyuniversity.ac.in

2. Mount Carmel College, Bengaluru

www. mountcarmelcollegeblr.co.in

3. Kristu Jayanti College, Bengaluru

www.kristujayanti.edu.in

4. Presidency College, Bengaluru

www.presidencycollege.ac.in

5. The Oxford Educational Institute, Bengaluru.

ಎಂಬಿಎ ಇನ್ ಟ್ರಾವೆಲ್ ಅಂಡ್ ಟೂರಿಸಂ ಕಾಲೇಜುಗಳು

1.Christ University, Bengaluru

www.christuniversity.in

2. Jain University, Bengaluru

www.jainuniversity.in

ಇಂಟಿಗ್ರೇಟೆಡ್ ಕೋರ್ಸ್ ಇನ್ ಟ್ರಾವೆಲ್ ಅಂಡ್ ಟೂರಿಸಂ

1. SJES College of Management Studies, Bengaluru

www.sjesinstitution.in

2. Bengaluru University, Bengaluru

www.bangaloreuniversity.ac.in

ಇಂಡಿಯನ್ ಇನ್‌ಸ್ಟಿಟೂಟ್ ಆಫ್ ಟೂರಿಸಂ ಅಂಡ್ ಟ್ರಾವೆಲ್ ಮ್ಯಾನೇಜ್‌ಮೆಂಟ್ ಮಿನಿಸ್ಟ್ರಿ ಆಫ್ ಟೂರಿಸಂ, ಭಾರತ ಸರ್ಕಾರ, ಎಂಬಿಎ ಇನ್ ಟ್ರಾವೆಲ್ ಅಂಡ್ ಟೂರಿಸಂ ಕೋರ್ಸ್ ನೀಡುತ್ತಾರೆ.

ಉದ್ಯೋಗ ಅವಕಾಶಗಳು:

1. ಟ್ರಾವೆಲ್ ಏಜೆನ್ಸಿಸ್‌

2. ಏರ್‌ಪೋರ್ಟ್‌ಗಳಲ್ಲಿ

3. ಟೂರ್ ಆಪರೇಟರ್‌

4. ಇವೆಂಟ್ ‌ಮ್ಯಾನೇಜ್‌ಮೆಂಟ್ ಕಂಪನಿಗಳಲ್ಲಿ

5. ಅಡ್ವೆಂಚರ್ ಟೂರಿಸಂ

6. ಹಾಲಿಡೆ ಕನ್ಸ್‌ಲ್ಟೆಂಟ್‌

7. ಕ್ರೂಸ್‌ಗಳಲ್ಲಿ

8. ಏರ್‌ಲೈನ್ಸ್‌

9. ಹೋಟೆಲ್‌

10. ಟೂರಿಸಂ ಡಿರ್ಪಾಟ್‌ಮೆಂಟ್‌, ಸರ್ಕಾರ ಮತ್ತು ಖಾಸಗಿ

ಇನ್ನೂ ಅನೇಕ...

2. ನಾನು ದ್ವಿತೀಯ ಪಿಯುಸಿ ಉತ್ತೀರ್ಣನಾಗಿದ್ದು, ಮುಂದೆ ಎಂಜಿನಿಯರಿಂಗ್ ಓದಬೇಕೆಂದುಕೊಂಡಿದ್ದೇನೆ. ಎಂಜಿನಿಯರಿಂಗ್‌ಗೆ ಲಭ್ಯವಿರುವ ಸಾಲ್ಕರ್‌ಶಿಪ್‌ಗಳ ಬಗ್ಗೆ ತಿಳಿಸಿ.
–ವಿವೇಕ್, ಮಡಿಕೇರಿ

ಉತ್ತರ: ಯಾವುದೇ ವಿದ್ಯಾರ್ಥಿಗಳು ಓದಲು ಹಣವಿಲ್ಲ ಎಂದು ವಿದ್ಯಾಭ್ಯಾಸ ನಿಲ್ಲಿಸುವ ಸ್ಥಿತಿ ಇಲ್ಲ. ಮುಂದಾಲೋಚನೆ ಬಹಳ ಮುಖ್ಯ. ಒಂದು ಕೋರ್ಸ್ ಸೇರಲು, ಎಷ್ಟು ಹಣ ಬೇಕಾಗುತ್ತದೆ, ಇದನ್ನು ಹೇಗೆ ಸಂಗ್ರಹಿಸಬೇಕು ಅನ್ನುವ ಮಾಹಿತಿಯನೆಲ್ಲಾ ಮೊದಲೇ ಪಡೆದಿರಬೇಕು. ವಿದ್ಯಾರ್ಥಿವೇತನ (Scholarship)ಗಳು ಅನೇಕ ತರಹ.

1. ಜಾತಿ ಆಧಾರಿತ ಸ್ಕಾಲರ್‌ಶಿಪ್‌ಗಳು (ಬ್ರಾಹ್ಮಣ, ಲಿಂಗಾಯಿತ, ಮುಸ್ಲಿಂ, ಒಕ್ಕಲಿಗ.... ಹೀಗೆ).

2. ಮೆರಿಟ್ ಕಮ್ ಮೀಸ್ಸ್ ಸ್ಕಾಲರ್‌ಶಿಪ್‌ಗಳು

3. ಲೋನ್ ಸ್ಕಾಲರ್‌ಶಿಪ್‌ಗಳು

4. ಅಲ್ಪಸಂಖ್ಯಾತರಿಗೆ ಸ್ಕಾಲರ್‌ಶಿಪ್‌ಗಳು (Minority)  ಹೀಗೆ ಅನೇಕ....

ನೀವು ಗಮನದಲ್ಲಿ ಇಡಬೇಕಾದದ್ದು, ಇದಕ್ಕೆ ಯಾವಾಗ ಅರ್ಜಿ ಸಲ್ಲಿಸಬೇಕು, ಜಾಹೀರಾತು ಯಾವಾಗ ಬರುತ್ತದೆ ಎಂಬುದನ್ನು. ವೆಬ್‌ಸೈಟ್ (website)ನಲ್ಲಿ ಎಲ್ಲಾ ಮಾಹಿತಿಯನ್ನು ಸಂಗ್ರಹಿಸಿ.

ಸರ್ಕಾರಿ ವಿದ್ಯಾರ್ಥಿವೇತನಗಳು ಅನೇಕ ಇವೆ.  ಎಂಜಿನಿಯರಿಂಗ್ ಪದವಿಗೂ ಮತ್ತು ಸ್ನಾತಕೋತ್ತರ ಪದವಿಗೂ ವಿದ್ಯಾರ್ಥಿವೇತನಗಳಿವೆ. ಭಾರತದಲ್ಲಿನ ವ್ಯಾಸಂಗದಲ್ಲಿ ಮತ್ತು ಹೊರದೇಶದಲ್ಲಿ ಓದಲೂ ವಿದ್ಯಾರ್ಥಿವೇತನಗಳಿವೆ

ಕೆಲವೊಂದನ್ನು ಹೇಳುವುದಾದರೆ:

1. Priyadarshini Academy Scholarships, Priyadarshini Academy, #1, Arcadia Ashoka hall building, N.C.P.A Road, Nariman Point, Mumbai - 400021

2. K. C. Mahindra Scholarships, Managing Trustee, K. C. Mahindra Educational Trust Cevil Court, 3rd floor, near Regal Cinema, Mahakayi, Bhusham Mars, Mumbai - 400001

3. The Apex Life Scholarships, The Coordinator (SCT Dept), Apex life International, #250, 1st floor, Sant nagar, East of Kailash, New Delhi - 110065

4. The Lotus Trust Scholarships, The Chief Executive, The Lotus Trust, Lotus House, 6, Marine line's, Mumbai - 40020

5. Sh. Lalbhai Dalpatbhai Vanda, Pankoranaka, Ahmedabad - 380001

6. Sahu Jain Educational Scholarships, Interest free loan scholarship, Secretory, Sahu Jain Trust, #18, Institutional area, Lodhi Road, New Delhi - 110003.

3. ನಾನು ಪಿಯುಸಿಯಲ್ಲಿ ಕಲಾ‌ ವಿಭಾಗ ಆಯ್ಕೆ ಮಾಡಿಕೊಂಡೆ. ನಾನು ಪದವಿಯಲ್ಲಿ ಪತ್ರಿಕೋದ್ಯಮ ವಿಷಯವನ್ನು ಆರಿಸಿಕೊಂಡು ಅದರೊಂದಿಗೆ ಐಚ್ಛಿಕ ಕನ್ನಡವನ್ನು ಅಭ್ಯಾಸಕ್ಕೆ ತೆಗೆದುಕೊಂಡೆ. ಈಗ ನಾನು ಅಂತಿಮ (ಮೂರನೇ ವರ್ಷ) ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ. ನನಗೆ ಟೀಚಿಂಗ್ ಫೀಲ್ಡ್‌ನಲ್ಲಿ ಆಸಕ್ತಿಯಿದೆ. ನಾನು ಮುಂದೆ ಪತ್ರಿಕೋದ್ಯಮದಲ್ಲಿ ಎಂಎ ಮಾಡಬೇಕೆಂದಿರುವೆ. ಸರ್ಕಾರಿ ಉದ್ಯೋಗಿಯಾಗುವ ಬಯಕೆ ಕೂಡ ಇದೆ. ಆದ್ದರಿಂದ ಆ ನಿಟ್ಟಿನಲ್ಲಿ ನನ್ನ ತಯಾರಿ ಯಾವ ರೀತಿ ಇರಬೇಕು. ಎನ್‌ಇಟಿ ‍ಪರೀಕ್ಷೆಯನ್ನು ಎಂಎ ಓದುತ್ತಾ ಬರೆಯಲು ಸಾಧ್ಯವೇ?
–ಕಾವ್ಯ ಕೆ. ಟಿ ಕಳಸ

ಉತ್ತರ: ನೀವು ಈಗಾಗಲೇ ನಿಮ್ಮ ಗುರಿಯನ್ನು ಆಯ್ಕೆ ಮಾಡಿಕೊಂಡು, ಅದನ್ನು ಹೇಗೆ ಮಾಡಬೇಕು ಅನ್ನುವ ತಯಾರಿಯಲ್ಲಿರುವುದು ತುಂಬಾ ಸಂತೋಷ. ಎಂಎ ಮಾಡಿದರೆ ಉತ್ತಮ ಉದ್ಯೋಗಾವಕಾಶಗಳಿಗೆ ದಾರಿಯಾಗುತ್ತದೆ. ನಿಮಗೆ ಪಾಠ ಹೇಳಲು ಮತ್ತು ಸರ್ಕಾರಿ ನೌಕರಿ, ಎರಡರ ಮೇಲೂ ಹಂಬಲವಿದೆ.

ಎಂಎಯ ನಂತರ ಯುಜಿಸಿ ಎನ್‌ಇಟಿ ಪರೀಕ್ಷೆ ಬರೆಯಬೇಕು. ಕನ್ನಡದಲ್ಲಿ ಎಂಎ (ಜರ್ನಲಿಸಂ ಅಂಡ್ ಮಾಸ್ ಕಮ್ಯೂನಿಕೇಷನ್) ಈ ಕೆಳಗಿನ ಹಲವು ಕಾಲೇಜುಗಳಲ್ಲಿ ಮಾಡಬಹುದು.

1. SDM Degree College Ujire.

2. Kannada University, Hampi.

3. Mangalore University, Mangalaganotri, Mangalore.

4. Karnataka University, Dharwad.

5. Kuvempu University, Jnansaihadri, Shivamoga

(ದೂರಶಿಕ್ಷಣದ ಮೂಲಕ ಒಂದು ವರ್ಷದ ಡಿಪ್ಲೋಮಾ ಕೋರ್ಸ್ ಅನ್ನು ಕೂಡ ಮಾಡಬಹುದು).

ನೀವು ಕನ್ನಡದಲ್ಲಿ ಜರ್ನಲಿಸಂ ಮಾಡಿದರೆ –

1. www.naukri.com

2. www.quikr.com

3. www.indeed.com

4. www.fresherworld.com

5. www.timesjob.com

6. www. zaporeta.co.in

ಈ ಮೇಲ್ಕಂಡ ವೆಬ್‌ಸೈಟ್‌ನವರ ಸಹಾಯದಿಂದ ಉದ್ಯೋಗವನ್ನು ಹುಡುಕಬಹುದು.

ಸರ್ಕಾರಿ ಉದ್ಯೋಗಕ್ಕೆ ಪ್ರಸಾರ ಭಾರತಿ ವೆಬ್‌ಸೈಟ್‌ ಮೂಲಕ ಪ್ರಯ್ನತಿಸಿ.

www.prasarbharati.gov.in

ಇದಲ್ಲದೇ ಅನೇಕ ಕನ್ನಡ ಪತ್ರಿಕೆಗಳಲ್ಲೂ ವಾಹಿನಿಗಳಲ್ಲೂ ಉದ್ಯೋಗಾವಕಾಶಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.