ADVERTISEMENT

ಗೆಲುವಿಗೆ ಮೊದಲೇ ಬಿಜೆಪಿ, ಜೆಡಿಎಸ್‌ ವಿಜಯೋತ್ಸವ..!

​ಪ್ರಜಾವಾಣಿ ವಾರ್ತೆ
Published 14 ಮೇ 2018, 9:14 IST
Last Updated 14 ಮೇ 2018, 9:14 IST

ಸಿಂದಗಿ: ಗೆಲುವು ನನ್ನದೇ ಎಂಬ ಲೆಕ್ಕಾಚಾರದಲ್ಲಿ ಮತಕ್ಷೇತ್ರದ ಜೆಡಿಎಸ್–ಬಿಜೆಪಿ ಅಭ್ಯರ್ಥಿಗಳು ಇದ್ದಾರೆ.

‘10–15ಸಾವಿರ ಮತಗಳ ಅಂತರದಿಂದ ಗೆಲುವು ನನ್ನದೇ’ ಎನ್ನುತ್ತಾರೆ ಜೆಡಿಎಸ್ ಅಭ್ಯರ್ಥಿ ಎಂ.ಸಿ.ಮನಗೂಳಿ.

ಅದರಂತೆ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ‘5–6 ಸಾವಿರ ಮತಗಳ ಅಂತರದಿಂದ ನಾನೇ ಗೆಲ್ಲುವುದು’. ಜೆಡಿಎಸ್ ಕಾರ್ಯ ಕರ್ತರು ಮುಂಚಿತವಾಗಿಯೇ ವಿಜ ಯೋತ್ಸವ ಆಚರಿಸಿಕೊಂಡರೂ ಗೆಲ್ಲೋದು ನಾನೇ ಎಂದು ಭೂಸನೂರ ಪುನರುಚ್ಚರಿಸಿದರು.

ADVERTISEMENT

ಆದರೆ ಕಾಂಗ್ರೆಸ್ ಅಭ್ಯರ್ಥಿ ಮಲ್ಲಣ್ಣ ಸಾಲಿ ಅವರಿಂದ ಕಾಂಗ್ರೆಸ್ ಧುರೀಣನೊಬ್ಬ ಚುನಾವಣೆಯಲ್ಲಿ ನನಗೆ ಕೈ ಕೊಟ್ಟಿದ್ದಾನೆ ಎಂಬ ಅಸಮಾಧಾನದ ಮಾತು ಮಾತ್ರ ಕೇಳಿ ಬಂದಿತು.

ಮತದಾನ ಮುಗಿದ ನಂತರ ಸಂಜೆ ಸಿಂದಗಿಯ ಡಾ.ಅಂಬೇಡ್ಕರ್ ವೃತ್ತದಲ್ಲಿ ದಲಿತ ಮುಖಂಡರು ಪಟಾಕಿ ಸಿಡಿಸಿ ಇದು ಜೆಡಿಎಸ್ ವಿಜಯೋತ್ಸವ ಎಂದು ಆಚರಣೆ ಮಾಡಿದರೆ, ಆಲಮೇಲದ ಅಂಬೇಡ್ಕರ್ ನಗರದಲ್ಲಿ ಅಲ್ಲೂ ದಲಿತ ಮುಖಂಡರು ಪಟಾಕಿ ಸಿಡಿಸಿ ಇದು ಬಿಜೆಪಿ ವಿಜಯೋತ್ಸವ ಎಂದು ಬಹಿರಂಗಪಡಿಸಿದ ಘಟನೆ ನಡೆದಿದೆ.

ಎರಡೂ ಪಕ್ಷಗಳ ಕಾರ್ಯಕರ್ತರಲ್ಲಿ ಉತ್ಸಾಹ ಕಂಡು ಬರುತ್ತಿದೆ. ‘ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಗೆ ಸಿಂದಗಿ ಮತಕ್ಷೇತ್ರದ ಕೆಲವು ಗ್ರಾಮಗಳ ಮತಗಟ್ಟೆಗಳಲ್ಲಿ ಏಜೆಂಟರು ಸಿಕ್ಕಿಲ್ಲ ಎಂಬುವುದೇ ದುರಂತ’ ಎಂದು ಕಾಂಗ್ರೆಸ್ ಧುರೀಣನೊಬ್ಬರು ಹೀಗೆ ಪ್ರತಿಕ್ರಿಯಿಸಿದರು.

ಮತದಾರ ಪ್ರಭು ಯಾರಿಗೆ ಒಲಿದಿದ್ದಾರೆ ಎಂಬುವುದು ಇನ್ನೆರಡು ದಿನಗಳಲ್ಲಿ ಬಹಿರಂಗಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.