ADVERTISEMENT

ಅಭಿವೃದ್ಧಿ, ಜನಪರ ವಿಷಯ‌ ಚರ್ಚೆ ಮಾಡಲಿ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2023, 10:31 IST
Last Updated 22 ಫೆಬ್ರುವರಿ 2023, 10:31 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬಾಗಲಕೋಟೆ: ಅಭಿವೃದ್ಧಿ, ಜನಪರ ವಿಷಯಗಳ ಬಗ್ಗೆ ಚರ್ಚಿಸಬೇಕೇ ಹೊರತು, ವೈಯಕ್ತಿಕ ಧಾರ್ಮಿಕ ಆಚರಣೆ ಚರ್ಚೆ ಮಾಡುವ ವಿಷಯವಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಸಿ.ಟಿ. ರವಿ ಮಾಂಸ ತಿಂದು ದೇವಸ್ಥಾನ ಪ್ರವೇಶಿಸಿದ ಬಗ್ಗೆ ಹುನಗುಂದದಲ್ಲಿ ಬುಧವಾರ ಸುದ್ದಿಗಾರರರ ಪ್ರಶ್ನೆಗೆ ಉತ್ತರಿಸಿದ ಅವರು, ಮಾಂಸ ಸೇವನೆ ಮಾಡುವುದು, ಮಾಡದಿರುವುದು, ದೇವಸ್ಥಾನಗಳಿಗೆ ಹೋಗುವುದು, ಹೋಗದಿರುವುದು ವೈಯಕ್ತಿಕ ವಿಚಾರಗಳು. ಅಭಿವೃದ್ಧಿ ಮಾಡದ ಬಿಜೆಪಿ ಇಂತಹ ವಿಷಯಗಳನ್ನೇ ವಿವಾದವನ್ನಾಗಿ ಮಾಡಿಕೊಳ್ಳುತ್ತದೆ ಎಂದು ಟೀಕಿಸಿದರು.

ಗಾಂಧಿ, ಟಿಪ್ಪು, ಅಬ್ಬಕ್ಕ, ಗೋಡ್ಸೆ ವಿಚಾರ ಬಿಟ್ಟು, ಅಭಿವೃದ್ಧಿ ವಿಷಯಗಳ ಬಗ್ಗೆ ಮಾತನಾಡಬೇಕಿದೆ. ಜನರಿಗೆ ಮುಖ ತೋರಿಸಲು ಆಗದ ರಾಜ್ಯ ಬಿಜೆಪಿ ನಾಯಕರು ಕೇಂದ್ರ ನಾಯಕರನ್ನು ಕರೆ ತರುತ್ತಿದ್ದಾರೆ. ಇದರಿಂದ ಯಾವುದೇ ಲಾಭವಾಗುವುದಿಲ್ಲ ಎಂದರು.

ADVERTISEMENT

ನಟ ಅನಂತನಾಗ್ ಅವರು ನಮ್ಮೊಂದಿಗೆ ಇದ್ದರು. ಜೆ.ಎಚ್.ಪಟೇಲ್ ಅವರ ಸಂಪುಟದಲ್ಲಿ ಸಚಿವರೂ ಆಗಿದ್ದರು. ಚುನಾವಣೆ ಸಂದರ್ಭದಲ್ಲಿ ಪಕ್ಷ ಸೇರ್ಪಡೆ ಸಹಜ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.