ADVERTISEMENT

ಮುಧೋಳ: ಅರಿಶಿಣ ಬೆಳೆಯ ನಡುವೆ ಗಾಂಜಾ ಬೆಳೆದು ಬಲೆಗೆ ಬಿದ್ದರು!

ಅಬಕಾರಿ ಅಧಿಕಾರಿಗಳ ದಾಳಿ, ₹35 ಲಕ್ಷ ಮೌಲ್ಯದ ಗಾಂಜಾ ವಶ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2021, 10:34 IST
Last Updated 21 ಸೆಪ್ಟೆಂಬರ್ 2021, 10:34 IST
   

ಬಾಗಲಕೋಟೆ: ಅರಿಶಿಣ ಬೆಳೆಯ ನಡುವೆ ಬೆಳೆಯಲಾಗಿದ್ದ ₹35 ಲಕ್ಷ ಮೌಲ್ಯದ 140 ಕೆ.ಜಿ ಗಾಂಜಾ ಗಿಡಗಳನ್ನು ಜಿಲ್ಲೆಯ ಅಬಕಾರಿ ಇಲಾಖೆ ಅಧಿಕಾರಿಗಳು ಮಂಗಳವಾರ ವಶಪಡಿಸಿಕೊಂಡಿದ್ದಾರೆ.

ಮುಧೋಳ ತಾಲ್ಲೂಕು ರನ್ನ ಬೆಳಗಲಿ ಗ್ರಾಮದಿಂದ ಮುಗಳಖೋಡಕ್ಕೆ ಹೋಗುವ ರಸ್ತೆಯಲ್ಲಿರುವ ನಾಗಪ್ಪ ಕಲ್ಲೋಳೆಪ್ಪಗೋಳ ಅವರ ಜಮೀನಿನಲ್ಲಿ ಒಟ್ಟು 56 ಗಾಂಜಾ ಗಿಡಗಳನ್ನು ಬೆಳೆಯಲಾಗಿತ್ತು. ಒಂದೊಂದು ಗಿಡ ಬರೋಬ್ಬರಿ 8 ರಿಂದ 12 ಅಡಿ ಎತ್ತರ ಬೆಳೆದಿದ್ದವು.

ಖಚಿತ ಮಾಹಿತಿ ಮೇರೆಗೆ ಬಾಗಲಕೋಟೆ ಜಿಲ್ಲಾ ಅಬಕಾರಿ ಉಪ ಆಯುಕ್ತ ರಮೇಶ ಕುಮಾರ ನೇತೃತ್ವದಲ್ಲಿ ದಾಳಿ ನಡೆಸಿ ಗಾಂಜಾ ವಶಪಡಿಸಿಕೊಂಡು ಜಮೀನಿನ ಮಾಲೀಕನನ್ನು ಬಂಧಿಸಲಾಗಿದೆ. ಕೆಲ ದಿನಗಳ ಹಿಂದೆ ಮುಧೋಳ ತಾಲ್ಲೂಕಿನ ಮಂಟೂರು ಸಮೀಪ ಕಬ್ಬಿನ ಗದ್ದೆಯಲ್ಲಿ ಬೆಳೆಯಲಾಗಿದ್ದ ಗಾಂಜಾ ಗಿಡಗಳನ್ನು ಅಬಕಾರಿ ಅಧಿಕಾರಿಗಳ ತಂಡ ವಶಪಡಿಸಿಕೊಂಡಿದ್ದನ್ನು ಸ್ಮರಿಸಬಹುದು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.