ADVERTISEMENT

ಹಲಕುರ್ಕಿ ವೀರಯೋಧ ಚಿದಾನಂದ ಹಾವು ಕಚ್ಚಿ ಸಾವು

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2021, 5:52 IST
Last Updated 10 ಸೆಪ್ಟೆಂಬರ್ 2021, 5:52 IST
ಯೋಧ ಚಿದಾನಂದ ಹಲಕುರ್ಕಿ
ಯೋಧ ಚಿದಾನಂದ ಹಲಕುರ್ಕಿ   

ಕೆರೂರ (ಬಾಗಲಕೋಟೆ ಜಿಲ್ಲೆ): ಜಮ್ಮು ಕಾಶ್ಮೀರದಲ್ಲಿ ಕರ್ತವ್ಯ ನಿರತರಾಗಿದ್ದ ವೇಳೆ ಹಾವು ಕಚ್ಚಿ ಇಲ್ಲಿಗೆ ಸಮೀಪದ ಹಲಕುರ್ಕಿ ಗ್ರಾಮದ ಯೋಧ ಚಿದಾನಂದ ಚನ್ನಬಸಪ್ಪ ಹಲಕುರ್ಕಿ ಉರ್ಫ್‌ ಶಿರಸ್ತೇದಾರ (25) ಬುಧವಾರ ರಾತ್ರಿ ಮೃತಪಟ್ಟಿದ್ದಾರೆ.

ಅವರಿಗೆ ತಂದೆ ಚನ್ನಬಸಪ್ಪ, ತಾಯಿ ರತ್ನಮ್ಮ, ಸಹೋದರ ಬಸವರಾಜ ಇದ್ದಾರೆ. ಆರೂವರೆ ವರ್ಷಗಳ ಹಿಂದೆ ಅವರು ಭಾರತೀಯ ಸೇನೆಯ ಮರಾಠಾ ರೆಜಿಮೆಂಟ್‌ನಲ್ಲಿ ಸೈನಿಕರಾಗಿ ಆಯ್ಕೆಗೊಂಡು ಜಮ್ಮುವಿನಲ್ಲಿ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಇಂದು ಸಂಜೆ ಪಾರ್ಥಿವ ಶರೀರ: ಯೋಧನ ಪಾರ್ಥಿವ ಶರೀರ ಸ್ವಗ್ರಾಮಕ್ಕೆ ಶುಕ್ರವಾರ ಸಂಜೆ ಬರಲಿದ್ದು ಅಂತ್ಯ ಸಂಸ್ಕಾರದ ಸ್ಥಳ ನಿಗದಿಗಾಗಿ ಬಾದಾಮಿ ತಾಲ್ಲೂಕು ಆಡಳಿತ ಸಿದ್ಧತೆ ನಡೆಸಿದೆ.

ADVERTISEMENT

ಬಾದಾಮಿ ತಹಶೀಲ್ದಾರ್ ಎಸ್.ಬಿ. ಇಂಗಳೆ, ಸಿಪಿಐ ರಮೇಶ ಹಾನಾಪುರ ಯೋಧನ ಗ್ರಾಮಕ್ಕೆ ತೆರಳಿ, ಅಂತ್ಯಸಂಸ್ಕಾರದ ಸ್ಥಳ ನಿಗದಿಗಾಗಿ ಗ್ರಾಮದ ಹಿರಿಯರು, ಪ್ರಮುಖರೊಂದಿಗೆ ಚರ್ಚಿಸಿದರು. ಬಾದಾಮಿ ಮಾರ್ಗದ ಗ್ರಾಮದ ಅಗಸಿ ಬಳಿ ಅಂತ್ಯಸಂಸ್ಕಾರ ಹಾಗೂ ಪುತ್ಥಳಿ ನಿರ್ಮಾಣಕ್ಕೆ ಸ್ಥಳ ನಿಗದಿ ಮಾಡಲಾಯಿತು ಗ್ರಾಮಸ್ಥರು ಪ್ರಜಾವಾಣಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.