ADVERTISEMENT

‘ಸತ್ಯ ಮಾರ್ಗದಿಂದ ಜೀವನದಲ್ಲಿ ನೆಮ್ಮದಿ’

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2021, 12:27 IST
Last Updated 8 ಸೆಪ್ಟೆಂಬರ್ 2021, 12:27 IST
ರಬಕವಿ ಬನಹಟ್ಟಿ ತಾಲ್ಲೂಕಿನ ಬಂಡಿಗಣಿ ಮಠದಲ್ಲಿ ಹಮ್ಮಿಕೊಳ್ಳಲಾದ ಶ್ರಾವಣ ಮಾಸದ ಪ್ರವಚನ ಸಮಾರೋಪದಲ್ಲಿ ಅನ್ನದಾನೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು
ರಬಕವಿ ಬನಹಟ್ಟಿ ತಾಲ್ಲೂಕಿನ ಬಂಡಿಗಣಿ ಮಠದಲ್ಲಿ ಹಮ್ಮಿಕೊಳ್ಳಲಾದ ಶ್ರಾವಣ ಮಾಸದ ಪ್ರವಚನ ಸಮಾರೋಪದಲ್ಲಿ ಅನ್ನದಾನೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು   

ರಬಕವಿ ಬನಹಟ್ಟಿ: ‘ಸತ್ಯ ಮಾರ್ಗದಿಂದ ನಡೆದರೆ ಮಾತ್ರ ಜೀವನದಲ್ಲಿ ನೆಮ್ಮದಿ ಪಡೆಯಲು ಸಾಧ್ಯ. ಪ್ರತಿಯೊಬ್ಬರ ದೇಹದಲ್ಲಿ ಭಗವಂತನಿದ್ದಾನೆ’ ಎಂದು ತಾಲ್ಲೂಕಿನ ಬಂಡಿಗಣಿ ಗ್ರಾಮದ ಬಸವಗೋಪಾಲ ಮಠದ ಅನ್ನದಾನೇಶ್ವರ ಸ್ವಾಮೀಜಿ ತಿಳಿಸಿದರು.

ತಾಲ್ಲೂಕಿನ ಬಸವಗೋಪಾಲ ಮಠದಲ್ಲಿ ಬುಧವಾರ ಶ್ರಾವಣ ಮಾಸದ ಅಂಗವಾಗಿ ಹಮ್ಮಿಕೊಂಡಿದ್ದ ಪ್ರವಚನ ಕಾರ್ಯಕ್ರಮದ ಸಮಾರೋಪದಲ್ಲಿ ಮಾತನಾಡಿದರು.

‘ಜಾತಿ ಅಭಿಮಾನವನ್ನು ಬಿಟ್ಟು, ನೀತಿ ಧರ್ಮದಿಂದ ನಡೆಯಬೇಕು. ರಾಜಕಾರಣಿಗಳು ಮತ್ತು ಅಧಿಕಾರಿಗಳು ನುಡಿದಂತೆ ನಡೆಯಬೇಕು’ ಎಂದು ತಿಳಿಸಿದರು.

ADVERTISEMENT

ನೂರಾರು ಮಹಿಳೆಯರಿಗೆ ಉಡಿ ತುಂಬಲಾಯಿತು. ಬೆಳಗಾವಿಯ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಸತೀಶ ಕದಾಡಿ, ಎ. ಕಾರ್ತಿಕ, ಎ. ಮುತ್ತು, ಕರಿಸಿದ್ದಪ್ಪ ಪೂಜಾರಿ, ನಾಗಪ್ಪ ಕಂಠಿಕಾರ, ಭೀಶಸಿ ನಾಗನೂರ, ಬಸವರಾಜ ಕದಾಡಿ, ಪಾಮನ್ನ ಕಟ್ಟಿಮನಿ, ನಬಿಸಾಬ್ ಮುಲ್ಲಾ, ಕರಿಪ್ಪಾ ದಡ್ಡಿಮನಿ, ನಾಗಪ್ಪ ಚೌಗಲಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.