ADVERTISEMENT

ಸೂಲಿಬೆಲೆ: ಇಂದು ಲಸಿಕಾ ಮೇಳ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2021, 4:28 IST
Last Updated 17 ಸೆಪ್ಟೆಂಬರ್ 2021, 4:28 IST
ದೊಡ್ಡಬಳ್ಳಾಪುರ ತಾಲ್ಲೂಕಿನ ಆರೂಢಿ ಸಮೀಪದ ಸರ್ಕಾರಿ ಗೋಮಾಳದ ಒತ್ತುವರಿ ಪ್ರದೇಶಕ್ಕೆ ತಹಶೀಲ್ದಾರ್ ಟಿ.ಎಸ್. ಶಿವರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗ್ರಾಮಸ್ಥ ರಾಜಕುಮಾರ್‌ ಹಾಜರಿದ್ದರು
ದೊಡ್ಡಬಳ್ಳಾಪುರ ತಾಲ್ಲೂಕಿನ ಆರೂಢಿ ಸಮೀಪದ ಸರ್ಕಾರಿ ಗೋಮಾಳದ ಒತ್ತುವರಿ ಪ್ರದೇಶಕ್ಕೆ ತಹಶೀಲ್ದಾರ್ ಟಿ.ಎಸ್. ಶಿವರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗ್ರಾಮಸ್ಥ ರಾಜಕುಮಾರ್‌ ಹಾಜರಿದ್ದರು   

ಸೂಲಿಬೆಲೆ: ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಸೆ. 17ರಂದು ಕೋವಿಡ್ ವಿಶೇಷ ಲಸಿಕಾ ಮೇಳ ಹಮ್ಮಿಕೊಳ್ಳಲಾಗಿದೆ. 18 ವರ್ಷ ಮೇಲ್ಪಟ್ಟ ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ವೈದ್ಯಾಧಿಕಾರಿ ಡಾ.ಶಶಿಕಲಾ ತಿಳಿಸಿದ್ದಾರೆ.

ಸೂಲಿಬೆಲೆ ಆರೋಗ್ಯ ಕೇಂದ್ರಕ್ಕೆ 800 ಲಸಿಕೆ ಪೂರೈಕೆಯಾಗಿವೆ. ಜನದಟ್ಟಣೆ ಆಗದಂತೆ ಹಾಗೂ ಹಳ್ಳಿಯ ಫಲಾನುಭವಿಗಳಿಗೆ ಸಮೀಪದ ಕೇಂದ್ರಗಳಲ್ಲಿ ಲಸಿಕೆ ನೀಡಲು ಅನುಕೂಲವಾಗುವಂತೆ ಒಟ್ಟು 7 ಲಸಿಕಾ ಕೇಂದ್ರ ತೆರೆಯಲಾಗುವುದು ಎಂದು ತಿಳಿಸಿದ್ದಾರೆ.

ಸೂಲಿಬೆಲೆ ಪಟ್ಟಣದ ಜನತಾ ಕಾಲೊನಿ, ವಾಲ್ಮೀಕಿ ನಗರ ಮತ್ತು ಆರೋಗ್ಯ ಕೇಂದ್ರ, ಹೋಬಳಿಯ ಅತ್ತಿಬೆಲೆ, ಹಸಿಗಾಳ, ಕಂಬಳಿಪುರ, ವೆಂಕಟಾಪುರ, ಸಿದ್ಧಾರ್ಥ ನಗರದಲ್ಲಿ ಲಸಿಕಾ ಕೇಂದ್ರ ತೆರೆಯಲಾಗುವುದು. ಲಸಿಕೆ ಹಾಕಿಸಿಕೊಳ್ಳಲು ಬರುವ ಫಲಾನುಭವಿಗಳು ಆಧಾರ್ ಕಾರ್ಡ್ ಪ್ರತಿ ಹಾಗೂ ಮೊಬೈಲ್ ತರಬೇಕು ಎಂದು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.