ADVERTISEMENT

ಬೆಳಗಾವಿ: 2.39 ಲಕ್ಷ ಮಂದಿಗೆ ಲಸಿಕೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2021, 16:17 IST
Last Updated 17 ಸೆಪ್ಟೆಂಬರ್ 2021, 16:17 IST

ಬೆಳಗಾವಿ: ಜಿಲ್ಲೆಯಾದ್ಯಂತ ಶುಕ್ರವಾರ ಆಯೋಜಿಸಿದ್ದ ಮೇಳದಲ್ಲಿ ಒಟ್ಟು 2,39,137 ಮಂದಿಗೆ ಕೋವಿಡ್ ಲಸಿಕೆ ನೀಡಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಇದರೊಂದಿಗೆ ಜಿಲ್ಲೆಯಲ್ಲಿ 35,00,156 ಮಂದಿ ಲಸಿಕೆ ಪಡೆದುಕೊಂಡಂತಾಗಿದೆ. ಈ ಪೈಕಿ 27,66,898 ಮಂದಿ ಮೊದಲ ಡೋಸ್ ಹಾಗೂ 7,33,258 ಮಂದಿ ಎರಡೂ ಡೋಸ್‌ಗಳನ್ನು ತೆಗೆದುಕೊಂಡಿದ್ದಾರೆ ಎಂದು ಮಾಹಿತಿ ನೀಡಿದೆ.

ಜಿಲ್ಲಾಡಳಿತದಿಂದ ಜಿಲ್ಲೆಯಲ್ಲಿ ಶುಕ್ರವಾರ ಒಂದೇ ದಿನ ಒಟ್ಟು 3.76 ಲಕ್ಷ ಡೋಸ್ ನೀಡುವ ಗುರಿ ಹೊಂದಲಾಗಿತ್ತು. ಇದಕ್ಕಾಗಿ ವ್ಯಾಪಕ ಪ್ರಚಾರವನ್ನೂ ನೀಡಲಾಗಿತ್ತು. ಜಾಗೃತಿಯನ್ನೂ ಮೂಡಿಸಲಾಗಿತ್ತು. ಆದರೆ, ಗುರಿ ತಲು‍ಪಲು ಸಾಧ್ಯವಾಗಿಲ್ಲ. 1,208 ಸ್ಥಳಗಳಲ್ಲಿ ಲಸಿಕಾ ಮೇಳ ನಡೆಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.