ADVERTISEMENT

ಲಕ್ಷ್ಮಿಗೆ ಕನ್ನಡ ಹೋರಾಟಗಾರರ ಸನ್ಮಾನ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2021, 12:45 IST
Last Updated 21 ಸೆಪ್ಟೆಂಬರ್ 2021, 12:45 IST
ಬೆಳಗಾವಿ ಮಹಾನಗರಪಾಲಿಕೆ ಉಪ ಆಯುಕ್ತೆ ಲಕ್ಷ್ಮಿ ಸುಳಗೇಕರ ಅವರನ್ನು ಕನ್ನಡ ಸಂಘಟನೆಗಳ ಮುಖಂಡರಾದ ಮೈನೋದ್ದೀನ್ ಮಕಾನದಾರ, ದೀಪಕ ಗುಡಗನಟ್ಟಿ ಮತ್ತು ಮಹಾದೇವ ತಳವಾರ ಮಂಗಳವಾರ ಸನ್ಮಾನಿಸಿದರು
ಬೆಳಗಾವಿ ಮಹಾನಗರಪಾಲಿಕೆ ಉಪ ಆಯುಕ್ತೆ ಲಕ್ಷ್ಮಿ ಸುಳಗೇಕರ ಅವರನ್ನು ಕನ್ನಡ ಸಂಘಟನೆಗಳ ಮುಖಂಡರಾದ ಮೈನೋದ್ದೀನ್ ಮಕಾನದಾರ, ದೀಪಕ ಗುಡಗನಟ್ಟಿ ಮತ್ತು ಮಹಾದೇವ ತಳವಾರ ಮಂಗಳವಾರ ಸನ್ಮಾನಿಸಿದರು   

ಬೆಳಗಾವಿ: ಇಲ್ಲಿನ ಕ‍ಪಿಲೇಶ್ವರ ಹೊಂಡದ ಬಳಿ ಗಣೇಶ ಮೂರ್ತಿಗಳ ವಿಸರ್ಜನೆ ಕಾಲಕ್ಕೆ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್) ಕಾರ್ಯಕರ್ತರು ಮರಾಠಿ ನಾಮಫಲಕಕ್ಕೆ ಆಗ್ರಹಿಸಿ ನಡೆಸಿದ ಪುಂಡಾಟಿಕೆಯನ್ನು ಸಮರ್ಥವಾಗಿ ಎದುರಿಸಿ ಎದುರೇಟು ನೀಡಿದ ಮಹಾನಗರ ಪಾಲಿಕೆಯ ಉಪ ಆಯುಕ್ತೆ ಲಕ್ಷ್ಮಿ ಸುಳಗೇಕರ ಹಾಗೂ ಕನ್ನಡ ಬಳಕೆಯಲ್ಲಿ ಬದ್ಧತೆ ಪ್ರದರ್ಶಿಸಿದ ಆಯುಕ್ತ ರುದ್ರೇಶ ಘಾಳಿ ಅವರನ್ನು ಕನ್ನಡ ಪರ ಸಂಘಟನೆಗಳ ಮುಖಂಡರು ಮಂಗಳವಾರ ಸನ್ಮಾನಿಸಿ ಅಭಿನಂದಿಸಿದರು.

‘ಗಡಿ ನಾಡಿನಲ್ಲಿ ಕನ್ನಡದ ಕೆಲಸದಲ್ಲಿ ರಾಜಿ ಮಾಡಿಕೊಳ್ಳದ ಅಧಿಕಾರಿಗಳ ಬೆಂಬಲವಾಗಿ ನಿಲ್ಲುತ್ತೇವೆ’ ಎಂದು ತಿಳಿಸಿದರು.

ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ, ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಸಂಚಾಲಕ ಮಹಾದೇವ ತಳವಾರ, ಜಿಲ್ಲಾ ಘಟಕದ ಅಧ್ಯಕ್ಷ ದೀಪಕ ಗುಡಗನಟ್ಟಿ, ಮೈನೋದ್ದೀನ್ ಮಕಾನದಾರ, ಕಿರಣ ಮಾಳನ್ನವರ, ಸಾಗರ ಬೋರಗಲ್ಲ, ವೀರೇಂದ್ರ ಗೋಬರಿ, ವಿಶಾಲ ತಿಗಡಿ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.