ADVERTISEMENT

ಬೆಳಗಾವಿ: ಕೆನರಾ ಬ್ಯಾಂಕ್‌ನಲ್ಲಿ ಹಿಂದಿ ದಿವಸ್ ಆಚರಣೆ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2021, 8:20 IST
Last Updated 16 ಸೆಪ್ಟೆಂಬರ್ 2021, 8:20 IST
ಬೆಳಗಾವಿಯ ಕೆನರಾ ಬ್ಯಾಂಕ್‌ ಪ್ರಾದೇಶಿಕ ಕಚೇರಿಯಲ್ಲಿ ಹಿಂದಿ ದಿವಸ್ ಅನ್ನು ಮಂಗಳವಾರ ಆಚರಿಸಲಾಯಿತು
ಬೆಳಗಾವಿಯ ಕೆನರಾ ಬ್ಯಾಂಕ್‌ ಪ್ರಾದೇಶಿಕ ಕಚೇರಿಯಲ್ಲಿ ಹಿಂದಿ ದಿವಸ್ ಅನ್ನು ಮಂಗಳವಾರ ಆಚರಿಸಲಾಯಿತು   

ಬೆಳಗಾವಿ: ಇಲ್ಲಿನ ಕೆನರಾ ಬ್ಯಾಂಕ್‌ ಪ್ರಾದೇಶಿಕ ಕಚೇರಿಯಲ್ಲಿ ಹಿಂದಿ ದಿವಸ್ ಅನ್ನು ಆಚರಿಸಲಾಯಿತು.

ಗೃಹ ಸಚಿವಾಲಯದ ನಿವೃತ್ತ ಸಹಾಯಕ ನಿರ್ದೇಶಕ ಡಾ.ಜೈಶಂಕರ್‌ ಯಾದವ್ ಮಾತನಾಡಿ, ‘ಅಧಿಕೃತ ಭಾಷೆ ಹಿಂದಿಯನ್ನು ಗರಿಷ್ಠವಾಗಿ ಬಳಸುವುದು ನಮ್ಮ ಸಂವಿಧಾನಿಕ ಜವಾಬ್ದಾರಿ ಮಾತ್ರವಲ್ಲ; ಇದು ನಮ್ಮ ಬ್ಯಾಂಕಿಂಗ್ ವ್ಯವಹಾರದ ಅಗತ್ಯವೂ ಆಗಿದೆ. ಆದ್ದರಿಂದ ಹಿಂದಿಯನ್ನು ತಿಳಿದುಕೊಳ್ಳುವುದು, ಕಲಿಯುವುದು ಮತ್ತು ಕೆಲಸದಲ್ಲಿ ಬಳಸುವುದು ನಮಗೆ ಅಗತ್ಯವಾಗಿದೆ’ ಎಂದು ಹೇಳಿದರು.

‘ಭಾಷೆಯು ಕೇವಲ ವಿಚಾರ ವಿನಿಮಯದ ಮಾಧ್ಯಮವಲ್ಲ. ಅದು ಸಂಸ್ಕೃತಿ, ಸಂಪ್ರದಾಯ ಮತ್ತು ರಾಷ್ಟ್ರದ ಜೀವನ ಮೌಲ್ಯಗಳ ಸಹಾಯಕವಾಗಿದೆ. ಆದ್ದರಿಂದ ಯಾವುದೇ ರಾಷ್ಟ್ರವು ತನ್ನ ಭಾಷೆಯನ್ನು ಉಳಿಸಿಕೊಳ್ಳುವುದು ಬಹಳ ಮುಖ್ಯ’ ಎಂದು ತಿಳಿಸಿದರು.

ADVERTISEMENT

ಹಿಂದಿ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಗೃಹ ಸಚಿವರು, ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಕಾರ್ಯನಿರ್ವಾಹಕ ಅಧಿಕಾರಿಯ ಸಂದೇಶವನ್ನು ಸಿಬ್ಬಂದಿಗೆ ತಿಳಿಸಲಾಯಿತು.

ಉಪ ಪ್ರಧಾನ ವ್ಯವಸ್ಥಾಪಕಎನ್. ಕೃಷ್ಣಪ್ಪ ಅಧ್ಯಕ್ಷತೆ ವಹಿಸಿದ್ದರು. ಅಧಿಕಾರಿಗಳಾದ ಅಶೋಕ ಎಸ್. ಕುಂಬಾರ ಮತ್ತು ರಂಜಯ್ ಕುರ್ಮಾ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.