ADVERTISEMENT

ಸಿಇಟಿ: ಬೆಳಗಾವಿಯ ಮೊಹಮ್ಮದ್‌ಗೆ 5ನೇ ರ‍್ಯಾಂಕ್

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2021, 4:17 IST
Last Updated 21 ಸೆಪ್ಟೆಂಬರ್ 2021, 4:17 IST
ಮೊಹಮ್ಮದ್ ಕೈಫ್ ಕೆ. ಮುಲ್ಲಾ
ಮೊಹಮ್ಮದ್ ಕೈಫ್ ಕೆ. ಮುಲ್ಲಾ   

ಬೆಳಗಾವಿ: ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಈಚೆಗೆ ನಡೆದಿದ್ದ ಸಿಇಟಿ(ಸಾಮಾನ್ಯ ಪ್ರವೇಶ ಪರೀಕ್ಷೆ) ಫಲಿತಾಂಶ ಸೋಮವಾರ ಪ್ರಕಟಗೊಂಡಿದ್ದು, ನಗರದ ಕೆಎಲ್‌ಇ ಸಂಸ್ಥೆಯ ರಾಜಾ ಲಖಮಗೌಡ ಪಿಯು ಕಾಲೇಜಿನ ವಿದ್ಯಾರ್ಥಿ ಮೊಹಮ್ಮದ್ ಕೈಫ್ ಕೆ. ಮುಲ್ಲಾ ಮೂರು ವಿಭಾಗಗಳಲ್ಲಿ ಉತ್ತಮ ಸಾಧನೆ ತೋರಿದ್ದಾರೆ.

ನ್ಯಾಚುರೋಪಥಿ ಮತ್ತು ಯೋಗ ವಿಜ್ಞಾನ ಹಾಗೂ ಪಶುವೈದ್ಯ (ವೆಟರ್ನರಿ) ವಿಭಾಗದಲ್ಲಿ 5ನೇ ಮತ್ತು ಬಿ ಫಾರ್ಮಾ ಮತ್ತು ಡಿ ಫಾರ್ಮಾ ವಿಭಾಗದಲ್ಲಿ 8ನೇ ರ‍್ಯಾಂಕ್ ಗಳಿಸಿದ್ದಾರೆ.

ಕೃಷಿ ವಿಭಾಗದಲ್ಲಿ 15 ಮತ್ತು ಎಂಜಿನಿಯರಿಂಗ್ ವಿಭಾಗದಲ್ಲಿ 119ನೇ ರ‌್ಯಾಂಕ್ ಪಡೆದಿದ್ದಾರೆ. ಸಿಇಟಿಯಲ್ಲಿ ಒಟ್ಟು 240ಕ್ಕೆ 215 ಅಂಕ ಗಳಿಸಿದ್ದಾರೆ. ಭೌತವಿಜ್ಞಾನದಲ್ಲಿ 60ಕ್ಕೆ 57, ರಸಾಯನವಿಜ್ಞಾನದಲ್ಲಿ 60ಕ್ಕೆ 57 ಅಂಕ, ಗಣಿತದಲ್ಲಿ 60ಕ್ಕೆ 43 ಹಾಗೂ ಜೀವವಿಜ್ಞಾನದಲ್ಲಿ 60ಕ್ಕೆ 58 ಅಂಕ ಗಳಿಸಿದ್ದಾರೆ. ಅವರ ತಂದೆ ತಾಲ್ಲೂಕಿನ ಸಾಂಬ್ರಾದಲ್ಲಿರುವ ಏರ್‌ಮನ್‌ ತರಬೇತಿ ಶಾಲೆಯಲ್ಲಿ ‘ಕುಕ್’ ಆಗಿ ಕೆಲಸ ಮಾಡುತ್ತಿದ್ದಾರೆ.

ADVERTISEMENT

‘ನೀಟ್ ಪರೀಕ್ಷೆಯನ್ನೂ ಬರೆದಿದ್ದೇನೆ. ಅದರ ಫಲಿತಾಂಶಕ್ಕೆ ಕಾಯುತ್ತಿದ್ದೇನೆ. ವೈದ್ಯಕೀಯ ಕೋರ್ಸ್‌ಗೆ ಪ್ರವೇಶ ಪಡೆದು, ವೈದ್ಯನಾಗಿ ಜನರ ಸೇವೆ ಮಾಡಬೇಕು ಎಂಬ ಗುರಿ ಇದೆ’ ಎಂದು ಮುಲ್ಲಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.