ADVERTISEMENT

ಬೆಳಗಾವಿ ‘ರಾಣಿ ಚನ್ನಮ್ಮ ವಿಶ್ವವಿದ್ಯಾಲಯ'ಕ್ಕೆ ‘ಬಿ ಪ್ಲಸ್’ ಮಾನ್ಯತೆ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2021, 15:36 IST
Last Updated 8 ಸೆಪ್ಟೆಂಬರ್ 2021, 15:36 IST
   

ಬೆಳಗಾವಿ: ‘ರಾಣಿ ಚನ್ನಮ್ಮ ವಿಶ್ವವಿದ್ಯಾಲಯ(ಆರ್‌ಸಿಯು)ಕ್ಕೆ ನ್ಯಾಕ್‌ನಿಂದ ‘ಬಿ ಪ್ಲಸ್’ ಮಾನ್ಯತೆ ನೀಡಿದೆ’ ಎಂದು ಕುಲ‍ಪತಿ ಪ್ರೊ.ಎಂ. ರಾಮಚಂದ್ರಗೌಡ ತಿಳಿಸಿದ್ದಾರೆ.

ಈ ಬಗ್ಗೆ ಬುಧವಾರ ಪ್ರಕಟಣೆ ನೀಡಿರುವ ಅವರು, ‘ನ್ಯಾಕ್ ತಂಡವು ಈಚೆಗೆ ಸತತ ಮೂರು ದಿನಗಳು ಏಳು ಹಂತಗಳ ವಿಭಿನ್ನ ಮಾನದಂಡಗಳನ್ನು ಮುಂದಿಟ್ಟುಕೊಂಡು ಪರಿಶೀಲನೆ ನಡೆಸಿ ಸಲ್ಲಿಸಿದ ವಿಸ್ತೃತ ವರದಿಯನ್ನು ಗಮನಿಸಿ ನ್ಯಾಕ್ ಸಮಿತಿಯು ಮಾನ್ಯತೆ ಕೊಟ್ಟಿದೆ. ವಿಶ್ವವಿದ್ಯಾಲಯವು ಪ್ರಥಮ ಬಾರಿಗೆ ‘ಬಿ ಪ್ಲಸ್’ ಮಾನ್ಯತೆಯೊಂದಿಗೆ ಸಿಜಿಪಿಎ 2.56 ಅಂಕ ಪಡೆದಿರುವುದು ಸಂತಸದ ಸಂಗತಿಯಾಗಿದೆ’ ಎಂದು ಹೇಳಿದ್ದಾರೆ.

‘ನಿರಂತರವಾಗಿ ನಡೆದಿರುವ ಸಂಶೋಧನೆ, ಅಧ್ಯಾಪನ ಹಾಗೂ ವಿಸ್ತರಣಾ ಚಟುವಟಿಕೆಗಳು, ಬೋಧನೆ ಮುಂತಾದ ಶೈಕ್ಷಣಿಕ ಚಟುವಟಿಕೆಗಳನ್ನು ಸಮಿತಿಯು ಸೂಕ್ಷ್ಮವಾಗಿ ಪರಿಶೀಲಿಸಿ ಪ್ರೋತ್ಸಾಹಿಸಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.