ADVERTISEMENT

ಜನ ಸೇರುವ ಕಾರ್ಯಕ್ರಮದಿಂದ ದೂರವಿರಿ: ಡಾ.ರಿಯಾಜ ಮೆಣಸಿನಕಾಯಿ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2021, 13:48 IST
Last Updated 13 ಸೆಪ್ಟೆಂಬರ್ 2021, 13:48 IST
ಉಗರಗೋಳ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ಬಸವೇಶ್ವರ ಗಜಾನನ ಉತ್ಸವ ಸಮಿತಿಯಿಂದ ಕೋವಿಡ್ ಲಸಿಕೆ ಶಿಬಿರ ನಡೆಯಿತು
ಉಗರಗೋಳ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ಬಸವೇಶ್ವರ ಗಜಾನನ ಉತ್ಸವ ಸಮಿತಿಯಿಂದ ಕೋವಿಡ್ ಲಸಿಕೆ ಶಿಬಿರ ನಡೆಯಿತು   

ಉಗರಗೋಳ (ಸವದತ್ತಿ ತಾ.): ‘ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಜನರು ಜಾತ್ರೆಗಳು, ಸಂತೆ, ಮದುವೆ ಮೊದಲಾದ ಕಾರ್ಯಕ್ರಮಗಳಿಂದ ದೂರವಿರಬೇಕು. ಮನೆ ಹಾಗೂ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು’ ಎಂದು ಡಾ.ರಿಯಾಜ ಮೆಣಸಿನಕಾಯಿ ಸಲಹೆ ನೀಡಿದರು.

ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ಬಸವೇಶ್ವರ ಗಜಾನನ ಉತ್ಸವ ಸಮಿತಿಯಿಂದ ಆಯೋಜಿಸಿದ್ದ ಕೋವಿಡ್ ಲಸಿಕಾ ಶಿಬಿರದಲ್ಲಿ ಅವರು ಮಾತನಾಡಿದರು.

‘18 ವರ್ಷ ಹಾಗೂ ಮೇಲಿನ ಎಲ್ಲರೂ ತಪ್ಪದೆ ಲಸಿಕೆ ಪಡೆಯಬೇಕು. ನೆಗಡಿ, ಕೆಮ್ಮು, ಜ್ವರ, ಸುಸ್ತಾಗುವುದು, ತಲೆ ತಿರುಗುವುದು ಮೊದಲಾದ ಲಕ್ಷಣ ಕಂಡುಬಂದರೆ ಆರೋಗ್ಯ ಕೇಂದ್ರಕ್ಕೆ ಬಂದು ಪರೀಕ್ಷಿಸಿಕೊಳ್ಳಬೇಕು’ ಎಂದು ತಿಳಿಸಿದರು.

ADVERTISEMENT

ಮುಖಂಡ ನಿಂಗನಗೌಡ ಹರಳಕಟ್ಟಿ ಮಾತನಾಡಿದರು. ಪ್ರಾಥಮಿಕ ಆರೋಗ್ಯ ಕೇಂದ್ರದ ಫಾತಿಮಾ ಶೇಖ, ನಿಂಗಪ್ಪ ಗೋವಪ್ಪನವರ, ಅಭಿಷೇಕ ತಿಪರಾಶಿ, ಪ್ರಶಾಂತಗೌಡ ಪೊಲೇಶಿ, ಎ.ಕೆ. ಮುಲ್ಲಾ, ಶಿವನಗೌಡ ಮೇದಗೊಪ್ಪ, ವಿಜಯ ಕಲಾಲ, ಸಿದ್ದನಗೌಡ ಶೆಟ್ಟಿನಗೌಡ್ರ, ಮಾರುತಿ ಬಜಂತ್ರಿ, ಈರಯ್ಯ ದಿಗಂಬರಮಠ, ಆನಂದ ಹಿರೇಮಠ, ಪರಸನಗೌಡ ಸಾವಕ್ಕನವರ, ನವೀನ ಗಡಾದಗೌಡ್ರ, ಗಣೇಶ ಶೆಟ್ಟಿನಗೌಡ್ರ, ಗುರುನಗೌಡ ಟೊಪಣ್ಣವರ, ಪರಸಪ್ಪ ರೋಗಿ, ಮಂಜು ಜಲಗಾರ, ಮಂಜುಳಾ ವಕ್ಕುಂದ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಇದ್ದರು.

ಲಸಿಕೆ ಪಡೆದವರಿಗೆ ಸಸಿ ನೀಡಲಾಯಿತು.

ಮಹಾಂತೇಶ ಸವದತ್ತಿ ಸ್ವಾಗತಿಸಿದರು. ಡಿ.ಎಸ್. ಕೊಪ್ಪದ ನಿರೂಪಿಸಿದರು. ಮಲ್ಲಪ್ಪ ರೋಗಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.