ADVERTISEMENT

‘ಅಧಿಕಾರ ಇದ್ದಾಗ ಸೌಜನ್ಯದಿಂದ ವರ್ತಿಸಬೇಕು’; ವಿಲಾಸ ಮೋರೆ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2021, 13:07 IST
Last Updated 8 ಸೆಪ್ಟೆಂಬರ್ 2021, 13:07 IST
ತೆಲಸಂಗದ ದುರ್ಗಾದೇವಿ ದೇವಸ್ಥಾನದಲ್ಲಿ ಮಾದಿಗ ಸಮಾಜದವರು ಗಣ್ಯರನ್ನು ಮಂಗಳವಾರ ಸತ್ಕರಿಸಿದರು
ತೆಲಸಂಗದ ದುರ್ಗಾದೇವಿ ದೇವಸ್ಥಾನದಲ್ಲಿ ಮಾದಿಗ ಸಮಾಜದವರು ಗಣ್ಯರನ್ನು ಮಂಗಳವಾರ ಸತ್ಕರಿಸಿದರು   

ತೆಲಸಂಗ: ‘ಇಲ್ಲಿ ಯಾವುದೂ ಶಾಶ್ವತವಲ್ಲ. ಅಧಿಕಾರ ಇದ್ದಾಗ ಜನ ಕೊಡುವ ಗೌರವಕ್ಕೆ ಬೀಗದೆ ಸೌಜನ್ಯದಿಂದ ಜನಸೇವೆ ಮಾಡಬೇಕು’ ಎಂದು ಗ್ರಾಮ ಪಂಚಾಯ್ತಿ ಅಧ್ಯಕ್ಷ ವಿಲಾಸ ಮೋರೆ ಹೇಳಿದರು.

ಗ್ರಾಮದ ದುರ್ಗಾದೇವಿ ದೇವಸ್ಥಾನದಲ್ಲಿ ಮಾದಿಗ ಸಮಾಜದವರಿಂದ ಮಂಗಳವಾರ ನಡೆದ ಗಣ್ಯರ ಸತ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಎಲ್ಲ ಜನರೂ ನನಗೇ ನಮಸ್ಕಾರ ಮಾಡುತ್ತಿದ್ದಾರೆಂದು ದೇವರ ಮೂರ್ತಿ ಹೊತ್ತೊಯ್ಯುವ ಕತ್ತೆಗೂಮ್ಮೆ ಗರ್ವ ಬಂದಿತ್ತಂತೆ. ಅವರು ನಮಸ್ಕರಿಸಿದ್ದು ನನಗಲ್ಲ; ನಾ ಹೊತ್ತ ದೇವರ ಮೂರ್ತಿಗೆ ಎಂದು ಕತ್ತೆಗೆ ಗೊತ್ತಾಗಿದ್ದು ಜನರು ಕಲ್ಲೆಸೆದು ಓಡಿಸಿದಾಗ. ಕೆಲ ಸಮಯ ದೇವರು ಅಧಿಕಾರ ಕೊಟ್ಟಿರುತ್ತಾನೆ. ಅದನ್ನು ಉತ್ತಮ ಕೆಲಸಕ್ಕೆ ಬಳಸಿಕೊಳ್ಳಬೇಕು’ ಎಂದರು.

ADVERTISEMENT

ಗ್ರಾಮ ಪಂಚಾಯ್ತಿ ಸದಸ್ಯ ರಾಮು ನಿಡೋಣಿ, ‘ಸೇಡು, ವೈರತ್ವ, ಕೇಡು ಸಣ್ಣತನವನ್ನು ತೋರಿಸುತ್ತವೆ. ಜನರು ಭಕ್ತಿಯಿಂದ ಕೈಮುಗಿಯಬೇಕು. ಆಗ ವ್ಯಕ್ತಿತ್ವಕ್ಕೆ ಶಕ್ತಿ ಬರುತ್ತದೆ. ನಾವಿಲ್ಲದಾಗಲೂ ಜನ ನಮ್ಮನ್ನು ಹೃದಯದಲ್ಲಿಟ್ಟು ಗೌರವಿಸುತ್ತಾರೆ’ ಎಂದು ತಿಳಿಸಿದರು.

ನಿವೃತ್ತ ಸೈನಿಕ ಮಹಾದೇವ ಬಾಣಿ, ಡಾ.ಎಸ್.ಐ. ಇಂಚಗೇರಿ, ಸಿದ್ದಲಿಂಗ ಮಾದರ, ಗಜಾನನ ಮಾದರ, ಸಿದ್ರಾಯ ಕಳಸಗೊಂಡ, ಹಾಪೀಜ್ ರಿಜ್ವಾನ ಮೀರಾಗೋಳ, ಕಾಸಪ್ಪ, ಶಂಕರ ಮೆಣಸಂಗಿ, ಹಾಜು ಮುಜಾವರ, ಸೋಮಣ್ಣ ಮಾದರ, ಸುನೀಲ, ರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.