ADVERTISEMENT

ಕೃಷಿ–ವೈದ್ಯಕೀಯಕ್ಕೆ ತಳಿವಿಜ್ಞಾನದ ಶಕ್ತಿ: ಪ್ರೊ.ಖಿಂಚ

ಆಕ್ಸ್‌ಫರ್ಡ್‌ ಎಂಜಿನಿಯರಿಂಗ್‌ ಕಾಲೇಜಿನ ಘಟಿಕೋತ್ಸವ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2019, 20:07 IST
Last Updated 19 ಆಗಸ್ಟ್ 2019, 20:07 IST
ಘಟಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು
ಘಟಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು   

ಬೊಮ್ಮನಹಳ್ಳಿ: ‘ತಳಿ ವಿಜ್ಞಾನವು ವೈದ್ಯಕೀಯ ಹಾಗೂ ಕೃಷಿ ಕ್ಷೇತ್ರದಲ್ಲಿ ಹೊಸ ಮನ್ವಂತರಕ್ಕೆ ಕಾರಣವಾಗಲಿದೆ. ನ್ಯಾನೊ ತಂತ್ರಜ್ಞಾನವು ಇನ್ನಷ್ಟು ಸಂಕೀರ್ಣಗೊಳ್ಳುತ್ತಿದೆ. 22 ನ್ಯಾನೊ ಮೀಟರ್‌ ತಂತ್ರಜ್ಞಾನದಿಂದ 9 ನ್ಯಾನೋ ಮೀಟರ್ ತಂತ್ರಜ್ಞಾನಕ್ಕೆ ನಾವು ಜಿಗಿದಿದ್ದೇವೆ’ ಎಂದುವಿಟಿಯು ನಿವೃತ್ತ ಕುಲಪತಿ ಪ್ರೊ.ಖಿಂಚ ಹೇಳಿದರು.

ಬೊಮ್ಮನಹಳ್ಳಿಯ ಆಕ್ಸ್‌ಫರ್ಡ್‌ ಎಂಜಿನಿಯರಿಂಗ್‌ಕಾಲೇಜಿನಲ್ಲಿ ಸೋಮವಾರ ನಡೆದ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ‘ತಂತ್ರಜ್ಞಾನದ ಅಭಿವೃದ್ಧಿಯು ಬೆರಳ ತುದಿಯಲ್ಲೇ ಎಲ್ಲವೂ ಸಿಗುವಂತೆ ಮಾಡಿದೆ. ಜಗತ್ತಿನ ಜನರನ್ನು ಹತ್ತಿರ ತಂದು ವಿಶ್ವವನ್ನು ಕಿರಿದಾಗಿಸಿದೆ’ ಎಂದರು.

‘ನಗರಗಳ ಬೆಳವಣಿಗೆಗೆ ಪೂರಕವಾಗಿ ಮೆಗಾ ವಿಜ್ಞಾನವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಉದಾಹರಣೆಗೆ ಬೆಂಗಳೂರು ನಗರಕ್ಕೆ ನೀರು ಹಂಚಿಕೆ ಎಂಬುದು ಮೆಗಾ ಯೋಜನೆಯಾಗಿದ್ದು, ಇಂತಹ ಹಲವು ಕ್ಷೇತ್ರಗಳ ಯೋಜನೆಗಳನ್ನು ರೂಪಿಸಲು ಇದು ನೆರವಾಗಲಿದೆ. ಹೀಗಾಗಿ ವಿದ್ಯಾರ್ಥಿಗಳು ತಂತ್ರಜ್ಞಾನದ ಹೊಸ ಕ್ಷೇತ್ರಗಳತ್ತ ಮುಖ ಮಾಡಬೇಕು’ ಎಂದು ಸಲಹೆ ನೀಡಿದರು.

ADVERTISEMENT

ಪ್ರಶಸ್ತ ತಾಣ:

‘ಬೆಂಗಳೂರು ನಗರ ಕೈಗಾರಿಕೆಗಳ ಬೆಳವಣಿಗೆಗೆ ವಿಶ್ವದಲ್ಲಿಯೇ ಪ್ರಶಸ್ತ ತಾಣವಾಗಿದ್ದು, ತಂತ್ರಜ್ಞರಿಗೆ, ನವೋದ್ಯಮಿಗಳಿಗೆ ಅವಕಾಶಗಳ ಹೆಬ್ಬಾಗಿಲಾಗಿ ಹೊರಹೊಮ್ಮಲಿದೆ’ ಎಂದು ಸೆಂಟ್ರಾ ಟೆಕ್ ಸಲ್ಯೂಶನ್ಸ್ ಸಂಸ್ಥೆ ಉಪಾಧ್ಯಕ್ಷ ಸೂರ್ಯ ಪತಾರ್ ಮುಂಡಾ ಅಭಿಪ್ರಾಯಪಟ್ಟರು.

ಬಿ.ಇ ಹಾಗೂ ವಾಸ್ತುಶಿಲ್ಪ ಕೋರ್ಸ್‌ನ ಪ್ರಥಮ ವರ್ಷದ ತರಗತಿಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಭವಿಷ್ಯದಲ್ಲಿ ಬರಲಿರುವ 5ಜಿ ಮತ್ತು 6 ಜಿ ತಂತ್ರಜ್ಞಾನವು ಡೇಟಾ ವೇಗವನ್ನು ಹೆಚ್ಚಿಸುವುದು ಮಾತ್ರವಲ್ಲದೇ ವೈದ್ಯಕೀಯ, ಮಾಹಿತಿ ತಂತ್ರಜ್ಞಾನ, ಸೇವೆ ಇತರೆ ಕ್ಷೇತ್ರಗಳಿಗೂ ಇದು ಪ್ರಯೋಜನಕಾರಿಯಾಗಲಿದೆ’ ಎಂದರು.

ಆಕ್ಸ್ ಫರ್ಡ್ ಸಂಸ್ಥೆಯ ಅಧ್ಯಕ್ಷ ಎಸ್.ಎನ್.ವಿ.ಎಲ್. ನರಸಿಂಹರಾಜು ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ನಿರ್ದೇಶಕ ಡಾ.ಅಮರನಾಥ್, ಪಾಂಶುಪಾಲರಾದ ಡಾ.ಅರವಿಂದ್, ಪ್ರೊ.ಗುರುದತ್ ಸೂರ್ಯನಾರಾಯಣ್ ಕಾರ್ಯಕ್ರಮ ಸಂಯೋಜಕ ಡಾ.ಶಶಿಧರ್ ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.