ADVERTISEMENT

‘ವಿ.ವಿಗಳಲ್ಲಿ ಸಿದ್ದಲಿಂಗಯ್ಯ ಹೆಸರಿನ ಪೀಠ ಸ್ಥಾಪಿಸಿ’

​ಪ್ರಜಾವಾಣಿ ವಾರ್ತೆ
Published 16 ಜೂನ್ 2021, 20:16 IST
Last Updated 16 ಜೂನ್ 2021, 20:16 IST
ಮೂಲನಿವಾಸಿ ಮಹಾ ಒಕ್ಕೂಟವು ಹಮ್ಮಿಕೊಂಡಿದ್ದ ನುಡಿ-ನಮನ ಕಾರ್ಯಕ್ರಮದಲ್ಲಿ ಎ.ಆರ್. ಗೋವಿಂದಸ್ವಾಮಿ, ಜಿಗಣಿ ಶಂಕರ್, ಭೀಮಪುತ್ರಿ ಬ್ರಿಗೇಡ್‍ನ ಅಧ್ಯಕ್ಷೆ ರೇವತಿರಾಜ್, ದಲಿತ ಮುಖಂಡರಾದ ಹೆಬ್ಬಾಳ ವೆಂಕಟೇಶ್, ಮುನಿ ಆಂಜನಯ್ಯ ಅವರು ಸಿದ್ದಲಿಂಗಯ್ಯ ಅವರ ಭಾವಚಿತ್ರಕ್ಕೆ ನಮನ ಸಲ್ಲಿಸಿದರು.

ಬೆಂಗಳೂರು: ‘ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಚ್ಚಳಿಯದ ಕೊಡುಗೆ ನೀಡಿದ ಕವಿ ಸಿದ್ದಲಿಂಗಯ್ಯ ಅವರ ಹೆಸರಿನಲ್ಲಿ ವಿಶ್ವವಿದ್ಯಾಲಯಗಳಲ್ಲಿ ಪೀಠ ಸ್ಥಾಪಿಸಬೇಕು’ ಎಂದು ರಂಗತಜ್ಞ ಎ.ಆರ್. ಗೋವಿಂದ ಸ್ವಾಮಿ ಅವರು ಸರ್ಕಾರಕ್ಕೆ ಆಗ್ರಹಿಸಿದರು.

ಮೂಲನಿವಾಸಿ ಮಹಾ ಒಕ್ಕೂಟವು ನಗರದಲ್ಲಿ ಸಿದ್ದಲಿಂಗಯ್ಯ ಅವರಿಗೆ ಹಮ್ಮಿಕೊಂಡಿದ್ದ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಸರ್ಕಾರವು 5 ಎಕರೆ ಜಾಗದಲ್ಲಿ ವಿದ್ಯಾರ್ಥಿಗಳಿಗೆ ಸಂಶೋಧನೆ ಹಾಗೂ ಉನ್ನತ ವ್ಯಾಸಂಗಕ್ಕೆ ಸಹಕಾರಿಯಾದ ಕೇಂದ್ರವನ್ನು ‌ಅವರ ಹೆಸರಿನಲ್ಲಿ ನಿರ್ಮಿಸಬೇಕು’ ಎಂದರು.

ADVERTISEMENT

ಒಕ್ಕೂಟದ ಅಧ್ಯಕ್ಷ ಜಿಗಣಿ ಶಂಕರ್, ‘ಕಾಲೇಜು ದಿನಗಳಲ್ಲಿ ಸಿದ್ದಲಿಂಗಯ್ಯ ಅವರ ಜತೆಗೆ ಸೇರಿ ದಲಿತಪರ ಹೋರಾಟ ಮಾಡುತ್ತಿದೆವು. ಜೀವನದುದ್ದಕ್ಕೂ ಹೋರಾಟ ನಡೆಸಿದ ಅವರು, ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.