ADVERTISEMENT

ವರವಾದ ಸಮಗ್ರ ಕೃಷಿ ಮಾಹಿತಿ ಮೇಳ

​ಪ್ರಜಾವಾಣಿ ವಾರ್ತೆ
Published 25 ಜೂನ್ 2019, 19:45 IST
Last Updated 25 ಜೂನ್ 2019, 19:45 IST
ಅಭಿಯಾನ
ಅಭಿಯಾನ   

ಸಾಲು ಸಾಲಾಗಿ ಜೋಡಿಸಿದ ಕೃಷಿ ಯಂತ್ರೋಪಕರಣಗಳು, ರಾಗಿ, ಜೋಳ, ತೊಗರಿ ಹಾಗೂ ತರಕಾರಿಯ ಹತ್ತಾರು ತಳಿಗಳು, ರೈತರಿಗೆ ಸಿಗುವ ಸರ್ಕಾರಿ ಸೌಲಭ್ಯಗಳು, ಮಣ್ಣಿನ ಫಲವತ್ತತೆ ಬಗ್ಗೆ ಅರಿವು, ಕೃಷಿಯೊಂದಿಗೆ ಮೀನುಗಾರಿಕೆ, ರೇಷ್ಮೆ, ತೋಟಗಾರಿಕೆ, ಅರಣ್ಯ, ಪಶುಸಂಗೋಪನಾ ಇಲಾಖೆಗಳ ಸಮಗ್ರ ಮಾಹಿತಿಗಳ ಮಳಿಗೆ. ಇವೆಲ್ಲವೂ ಸೋಂಪುರದ ರೈತ ಸಂಪರ್ಕ ಕೇಂದ್ರದಲ್ಲಿ ಆಯೋಜಿಸಿದ್ದ ’ಸಮಗ್ರ ಕೃಷಿ ಅಭಿಯನ’ ಕಾರ್ಯಕ್ರಮದ ನೋಟ.

ಒಂದೇ ಸೂರಿನಡಿ ರೈತರಿಗೆ ಬೇಕಾದ ಕೃಷಿಯ ನೂರಾರು ಆಯಾಮಗಳನ್ನು ಮನವರಿಕೆ ಮಾಡಿಕೊಡಲಾಯಿತು. ಪ್ರಗತಿಪರ ರೈತರು ಹಾಗೂ ಅಧಿಕಾರಿಗಳು ಹೊರ ದೇಶಗಳಲ್ಲಿ ಕೃಷಿ ಹೊಂದಿರುವ ಪ್ರಗತಿಯ ಬಗ್ಗೆ ರೈತರಿಗೆ ತಿಳಿಸಿಕೊಟ್ಟರು.

‘ಕೃಷಿ ಎಂದರೇ ಕೇವಲ ರಾಗಿ, ಭತ್ತ, ಮುಸುಕಿನ ಜೋಳ ಬೆಳೆಯುವುದಲ್ಲ. ಅದರ ಜತೆಗೆ ಬೆಳೆ ಬೆಳೆಯುವ ಸಾಧ್ಯತೆಗಳ ಕುರಿತು ರೈತರು ಚಿಂತಿಸಬೇಕು. ಅವಿದ್ಯಾವಂತರಿಗೆ ಮಾತ್ರ ಕೃಷಿ ಅನ್ನುವ ಮಾತು ಭಾರತದಲ್ಲಿದೆ. ವಿದೇಶಗಳಲ್ಲಿ ಪಿಎಚ್‌ಡಿ ಪಧವೀದರ ಸಹ ಕೃಷಿಯಲ್ಲಿ ತೊಡಗುತ್ತಾನೆ. ನಮ್ಮಲ್ಲಿ ಈ ಬೆಳವಣಿಗೆ ಸಾಧ್ಯವಾಗಬೇಕು ಎನ್ನುವ ಆಶಯವನ್ನು’ ರೈತ ಸಂಪರ್ಕ ಅಧಿಕಾರಿ ಆನಂದ್ ವ್ಯಕ್ತಪಡಿಸಿದರು.

ADVERTISEMENT

ರೈತ ಮಹಿಳೆಯರು ಭಾಗವಹಿಸಿ ಮಾಹಿತಿ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.