ADVERTISEMENT

ನಗರದ ಟ್ರಾಫಿಕ್‌ ಸಮಸ್ಯೆ ‘ಬಿಗ್‌ ಡೇಟಾ’ ಪರಿಹಾರ!

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2019, 19:45 IST
Last Updated 21 ಅಕ್ಟೋಬರ್ 2019, 19:45 IST
ಸುಗುಮ ಟ್ರಾಫಿಕ್‌ ಸಂಚಾರದಲ್ಲಿ ಡೇಟಾ ಸಂಗ್ರಹ ಮತ್ತು ಮಾಹಿತಿ ಹೇಗೆ ಕಾರ್ಯನಿರ್ವಹಿಸುತ್ತವೆ ಎಂದು ತೋರಿಸುವ ಚಿತ್ರ
ಸುಗುಮ ಟ್ರಾಫಿಕ್‌ ಸಂಚಾರದಲ್ಲಿ ಡೇಟಾ ಸಂಗ್ರಹ ಮತ್ತು ಮಾಹಿತಿ ಹೇಗೆ ಕಾರ್ಯನಿರ್ವಹಿಸುತ್ತವೆ ಎಂದು ತೋರಿಸುವ ಚಿತ್ರ   

ಅ ತಿ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರಿನ ಮೂಲಭೂತ ಸೌಕರ್ಯ ಹಾಗೂ ಸಂಚಾರ ಸಮಸ್ಯೆಗಳು ಟ್ರಾಫಿಕ್‌ ಸಿಬ್ಬಂದಿಗೆ ಸಾಕಷ್ಟು ಸವಾಲು ಒಡ್ಡಿವೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಛಾಪು ಮೂಡಿಸಿರುವ ನಗರ ಎದುರಿಸುತ್ತಿರುವ ಸಾರಿಗೆ ವ್ಯವಸ್ಥೆ ಸಮಸ್ಯೆಗೆ ‘ಬಿಗ್ ಡೇಟಾ’ ಅನಾಲಿಸಿಸ್ ಪರಿಹಾರವಾಗಬಲ್ಲದು ಎನ್ನುವುದು ತಜ್ಞರು ಅಭಿಪ್ರಾಯ.

ಅಕ್ಷರ, ಸಂಖ್ಯೆ, ಸಂಕೇತ, ವಿಡಿಯೊ, ಮಾಹಿತಿ, ಧ್ವನಿ ಇವುಗಳನ್ನು ಕಂಪ್ಯೂಟರಿನ ಒಂದು ಸಣ್ಣ ಚಿಪ್ಪಿನಲ್ಲಿ ಸಂಗ್ರಹಿಸಬಹುದು ಮತ್ತು ಬೇರೆ ಉಪಕರಣಕ್ಕೆ ವರ್ಗಾವಣೆ ಮಾಡಬಹುದು.ಇವುಗಳನ್ನು ದತ್ತಾಂಶ ಅಥವಾ ಡೇಟಾ, ಡಾಟಾ ಎನ್ನುತ್ತೇವೆ, ‘ಬಿಗ್ ಡೇಟಾ’ ಹೆಸರೇ ಸೂಚಿಸುವಂತೆ ಅತಿ ಹೆಚ್ಚು ದತ್ತಾಂಶ ಮಾಹಿತಿ ಹೊಂದಿರುತ್ತದೆ. ಸಮಯ ಸರಿದಂತೆ ಇದರ ಗಾತ್ರವೂ ಭಾರೀ ಪ್ರಮಾಣದಲ್ಲಿ ಹೆಚ್ಚುತ್ತಾ ಹೋಗುತ್ತದೆ. ಒಟ್ಟಾರೆಯಾಗಿ ಹೇಳುವುದಾದರೆ, ಲಭ್ಯವಿರುವ ಯಾವ ಪರಿಕರಗಳೂ ಇವುಗಳನ್ನು ಪರಿಣಾಮಕಾರಿಯಾಗಿ ಶೇಖರಿಸಿ, ಪರಿಷ್ಕರಿಸಲು ಮತ್ತು ಉಪಯೋಗಿಸಲು ಸಾಧ್ಯವಾಗುತ್ತಿಲ್ಲ.

ಡೇಟಾ ಹೇಗೆ ಸಹಾಯಕ?

ADVERTISEMENT

* ರಿಯಲ್‍ಟೈಮ್‍ನಲ್ಲಿಬಿಗ್ ಡಾಟಾ ವಿಶ್ಲೇಷಣೆಯಿಂದ ರಸ್ತೆ ಅಪಘಾತ, ಪ್ರಯಾಣದ ಅವಧಿ, ಅಪಘಾತಗಳಾಗುವ ಸಾಧ್ಯತೆ ಇತ್ಯಾದಿಗಳನ್ನು ನಿಖರವಾಗಿ ಊಹಿಸಬಹುದು

* ಅಪಘಾತ ತಗ್ಗಿಸಲು,ತುರ್ತುಪರಿಸ್ಥಿತಿ ನಿಭಾಯಿಸಲು ಮತ್ತು ಸರಿಯಾದ ತೀರ್ಮಾನ ತೆಗೆದುಕೊಳ್ಳಲು ಬಿಗ್ ಡಾಟಾ ವಿಶ್ಲೇಷಣೆ ಅನುಕೂಲ

* ಸಂಚಾರ ಹರಿವು,ವಾಹನಗಳಸರಾಸರಿ ವೇಗ,ಒಂದು ವಾಹನ ಯಾವ ಯಾವ ರಸ್ತೆಗಳಲ್ಲಿ ಓಡಾಡಿದೆ ಎಂಬ ಬಗ್ಗೆ ನಿಖರ ಮಾಹಿತಿ ಪಡೆಯಬಹುದು

* ಅನುಮಾನಸ್ಪದ ಅಥವಾ ಕ್ರಿಮಿನಲ್ ಕೇಸ್‍ನಲ್ಲಿ ಬೇಕಾಗಿರುವ ವಾಹನದ ಚಲನವಲನ ಮಾಹಿತಿ ಸುಲಭವಾಗಿ ಲಭ್ಯ

* ಪಾರ್ಕಿಂಗ್ ಸೌಲಭ್ಯ ಲಭ್ಯವಿರುವ ಸ್ಥಳ, ಏಕಮುಖ ಸಂಚಾರ ರಸ್ತೆ, ಪ್ರವೇಶ ನಿಷಿದ್ಧ ರಸ್ತೆ,ವಾಹನಗಳ ಸರದಿಯ ಉದ್ದ, ಸಂಚಾರ ದಟ್ಟಣೆ ಅವಧಿ ಬಗ್ಗೆ ನಿಖರ ಮಾಹಿತಿ ಪಡೆಯಬಹುದು

* ಅಪಾಯಕಾರಿ ಅಪಘಾತ ಪ್ರದೇಶ ಮತ್ತು ಸಂಚಾರದ ಆರಂಭ ಮತ್ತು ತಲುಪಬೇಕಾದ ಜಾಗಗಳ ಅಧ್ಯಯನಕ್ಕೆ ನೆರವು

ಹಡೂಪ್‌ ಸಿಸ್ಟಮ್‌ನಿಂದ ವಿಶ್ಲೇಷಣೆ

ಬಿಗ್ ಡೇಟಾ ವಿಶ್ಲೇಷಣೆಗೆ Hadoop system ಬಳಸಲಾಗುತ್ತದೆ. ಇದರಲ್ಲಿ ಡೇಟಾವನ್ನು ಬೇರೆ ಬೇರೆ ‘ನೋಡ್ಸ್’ಗಳಲ್ಲಿ ಶೇಖರಿಸಲಾಗುತ್ತದೆ. ದೊಡ್ಡ ಕೆಲಸವನ್ನು ಸಣ್ಣ ಸಣ್ಣ ಕೆಲಸಗಳಾಗಿ ವಿಭಾಗಿಸಲಾಗುತ್ತದೆ ಮತ್ತು ವಿಶ್ಲೇಷಿಸಲಾಗುತ್ತದೆ.

ಹೆಚ್ಚುತ್ತಿರುವ ಸೆಲ್‍ಫೋನ್‌, ಇಂಟರ್‌ನೆಟ್‌ ಸೌಲಭ್ಯ ಬಳಸಿಕೊಂಡು ಸಂಚಾರದ ಹರಿವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು. ಐರಿಶ್ ರಿಪಬ್ಲಿಕ್‍ ನಗರವಾದ ಡಬ್ಲಿನ್ ನಗರದಲ್ಲಿ ಪ್ರತಿ 20 ಸೆಕೆಂಡ್‌ ಅಂತರದಲ್ಲಿ ವಾಹನಗಳ ಜಿಪಿಎಸ್, ಕ್ಯಾಮರಾ, ರೈನ್‍ಗೇಜ್‍ಗಳು ಡಾಟಾ ಅಪ್‍ಡೇಟ್ ಮಾಡಿ ಸಂಚಾರ ಸುಗಮಗೊಳಿಸಲಾಗುತ್ತದೆ. ಇದೇ ರೀತಿ ಹಲವಾರು ಯುರೋಪಿಯನ್ ರಾಷ್ಟ್ರಗಳಲ್ಲಿ ಈಗಾಗಲೇ ಬಿಗ್‍ಡೇಟಾ ಉಪಯೋಗ ಮಾಡಿಕೊಳ್ಳಲಾಗುತ್ತಿದೆ.

ಪರಿಹಾರ ಹೇಗೆ?

2050 ಹೊತ್ತಿಗೆ ಜಗತ್ತಿನ ಮಹಾನಗರಗಳ ಜನಸಂಖ್ಯೆ ಈಗಿನ 54% ನಿಂದ 66% ಗೆ ಏರಲಿದೆ ಎಂದು ಅಧ್ಯಯನ ಹೇಳಿದೆ. ನಗರ ವಾಸಿಗಳು ಸಾಕಷ್ಟು ಸಂಚಾರ ಸಮಸ್ಯೆ ಎದುರಿಸಬೇಕಾಗುತ್ತದೆ.

ಈಗಿನಿಂದಲೇ ಸ್ಮಾರ್ಟ್‌ಸಿಟಿಗಳ ನೀಲನಕ್ಷೆ ರೂಪುಗೊಳ್ಳಬೇಕಾಗಿದೆ

ಯೋಜನಾ ತಜ್ಞರು, ಮೂಲಸೌಕರ್ಯ ಒದಗಿಸುವ ಪಾಲುದಾರಿಕೆ ಇಲಾಖೆಗಳು ಕುಳಿತು ಕಾರ್ಯಯೋಜನೆ ಸಿದ್ಧಪಡಿಸುವುದು ಅವಶ್ಯಕ.

ಜಗತ್ತಿನ ಇತರೆಡೆ ನಡೆಯುತ್ತಿರುವ ಸುಗಮ ಸಂಚಾರ ಸಂಬಂಧಿತ ಸಂಶೋಧನೆಗಳು ನಮ್ಮಲ್ಲೂ ನಡೆಯಬೇಕಿದೆ.

ಸಂಚಾರ ಸಮಸ್ಯೆಗೆ ಡೇಟಾ ಪರಿಹಾರ?

ಸುಗಮ ಸಂಚಾರ ಮತ್ತು ನಿಯಮ ಜಾರಿ ಕ್ಯಾಮರಾಗಳಿಂದ ಸಾಕಷ್ಟು ವಿಡಿಯೋ ಹಾಗೂ ಫೋಟೊ, ಲೈವ್‍ಫೀಡ್‌ನ ಡೇಟಾ ಸಂಚಾರ ನಿಯಂತ್ರಣ ಕೊಠಡಿಗೆ ಬಂದು ಸೇರುತ್ತದೆ. ಈ ಮಾಹಿತಿಯು ಹಲವಾರು ಟೆರಾಬೈಟ್‌ಗಳಿಗೆ ಸಮ. ಇದನ್ನು ಹೇಗೆ ಬಳಸಬೇಕು ಎನ್ನುವುದು ನಮ್ಮ ಮುಂದಿರುವ ಪ್ರಶ್ನೆ.

ಹಲವು ಮೂಲಗಳಿಂದ ಪಡೆದ ಸಂಚಾರ ಸಂಬಂಧಿತ ಡೇಟಾವನ್ನು ಒಂದೇ ಕಡೆ ಪರಿಷ್ಕರಿಸಬಹುದೇ? ಇಂತಹ ಬಿಗ್ ಡೇಟಾದಿಂದ ಏನು ಪಡೆಯಬೇಕು ಮತ್ತು ಹೇಗೆ ಪರಿಷ್ಕರಿಸಬೇಕು ಎಂಬ ಪ್ರಶ್ನೆಗಳಿಗೆ ಪರಿಹಾರ ಕಂಡುಕೊಂಡರೆ ಪರಿಹಾರ ಸುಲಭವಾಗಲಿದೆ!

– ಡಾ. ಅನಿಲ್‌ಕುಮಾರ್ ಪಿ.ಜಿ., ಟ್ರಾಫಿಕ್‌ ಇನ್‌ಸ್ಪೆಕ್ಟರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.