ADVERTISEMENT

ದಾವಣಗೆರೆ: ಬಿಜೆಪಿಯವರು ನಕಲಿ ಹಿಂದುತ್ವವಾದಿಗಳಲ್ಲ -ಸಿದ್ದೇಶ್ವರ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2021, 16:04 IST
Last Updated 17 ಸೆಪ್ಟೆಂಬರ್ 2021, 16:04 IST
 ಜಿ.ಎಂ.ಸಿದ್ದೇಶ್ವರ
 ಜಿ.ಎಂ.ಸಿದ್ದೇಶ್ವರ   

ದಾವಣಗೆರೆ: ‘ಬಿಜೆಪಿಯವರು ನಕಲಿ ಹಿಂದುತ್ವವಾದಿಗಳು ಎಂದು ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ. ಬಿಜೆಪಿ ಯಾವಾಗಲೂ ಹಿಂದುತ್ವದ ಪರವಾಗಿಯೇ ಇರುತ್ತದೆ’ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಿಜೆಪಿ ನಕಲಿ ಹಿಂದುತ್ವವಾದಿಯಲ್ಲ. ಹಿಂದುತ್ವದ ಆಧಾರದ ಮೇಲೆಯೇ ಬಿಜೆಪಿ ಬೆಳೆದಿದೆ’ ಎಂದರು.

‘ಮಸೀದಿಗಳ ಮೇಲಿನ ಮೈಕ್ ತೆರವುಗೊಳಿಸುವಂತೆ ಸುಪ್ರೀಂ ಕೋರ್ಟ್ ಆದೇಶವಿದ್ದರೂ ಏಕೆ ತೆರವುಗೊಳಿಸುತ್ತಿಲ್ಲ’ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಭಾರತ ಹಿಂದೂಗಳು ಹೆಚ್ಚಿರುವ ದೇಶ. ಮುಸ್ಲಿಮರು ಇಲ್ಲಿ ಅಲ್ಪಸಂಖ್ಯಾತರು. ಅವರ ಧಾರ್ಮಿಕ ವಿಚಾರದ ಬಗ್ಗೆ ಚರ್ಚೆ ಮಾಡಬೇಕು. ಈ ವಿಷಯದಲ್ಲಿ ಎಲ್ಲರ ಸಹಕಾರ ಬೇಕು. ಮುಸ್ಲಿಂ ಸಮುದಾಯದ ಸಹಕಾರ ಪಡೆದು ಪ್ರಾರ್ಥನಾ ಮಂದಿರಗಳ ಮೇಲಿರುವ ಮೈಕ್‌ಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕಾಗುತ್ತದೆ. ಸುಪ್ರೀಂ ಕೋರ್ಟ್ ಆದೇಶವಿದೆ ಎಂದು ಮಸೀದಿಗಳ ಮೇಲೆ ಇರುವ ಮೈಕ್‌ಗಳನ್ನು ತೆರವುಗೊಳಿಸಿದರೆ, ಮುಸ್ಲಿಮರ ಮೇಲೆ ಹಿಂದೂಗಳ ದೌರ್ಜನ್ಯ ಎಂದು ನೀವೇ ಅಪಪ್ರಚಾರ ಮಾಡುತ್ತೀರಿ’ ಎಂದು ಸುದ್ದಿರಾರರನ್ನೇ ದೂರಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.