ADVERTISEMENT

‘ಹಸ್ತಪ್ರತಿಗಳ ಶೋಧನೆ ಅಗತ್ಯ’

ಶೇಷಶಾಸ್ತ್ರಿ, ಭಾನುಮತಿ, ಪ್ರೇಮಾ ಅವರಿಗೆ ದತ್ತಿ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2019, 20:05 IST
Last Updated 26 ಆಗಸ್ಟ್ 2019, 20:05 IST
ಕಾರ್ಯಕ್ರಮದಲ್ಲಿ ಡಾ.ಟಿ.ವಿ. ವೆಂಕಟಾಚಲಶಾಸ್ತ್ರೀ (ಬಲತುದಿ) ಅವರು ಪ್ರೇಮಾ ಬದಾಮಿ, ಡಾ.ಆರ್‌. ಶೇಷಶಾಸ್ತ್ರೀ, ಡಾ.ವೈ.ಸಿ. ಭಾನುಮತಿ ಅವರಿಗೆ ದತ್ತಿ ಪ್ರಶಸ್ತಿ ಪ್ರದಾನ ಮಾಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಡಾ.ರಾಜಶೇಖರ್‌ ಹತಗುಂದಿ, ಗೌರವ ಕೋಶಾಧ್ಯಕ್ಷ ಪಿ.ಮಲ್ಲಿಕಾರ್ಜುನಪ್ಪ, ಗೌರವ ಕಾರ್ಯದರ್ಶಿ ವ. ಚ. ಚನ್ನೇಗೌಡ ಇದ್ದಾರೆ
ಕಾರ್ಯಕ್ರಮದಲ್ಲಿ ಡಾ.ಟಿ.ವಿ. ವೆಂಕಟಾಚಲಶಾಸ್ತ್ರೀ (ಬಲತುದಿ) ಅವರು ಪ್ರೇಮಾ ಬದಾಮಿ, ಡಾ.ಆರ್‌. ಶೇಷಶಾಸ್ತ್ರೀ, ಡಾ.ವೈ.ಸಿ. ಭಾನುಮತಿ ಅವರಿಗೆ ದತ್ತಿ ಪ್ರಶಸ್ತಿ ಪ್ರದಾನ ಮಾಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಡಾ.ರಾಜಶೇಖರ್‌ ಹತಗುಂದಿ, ಗೌರವ ಕೋಶಾಧ್ಯಕ್ಷ ಪಿ.ಮಲ್ಲಿಕಾರ್ಜುನಪ್ಪ, ಗೌರವ ಕಾರ್ಯದರ್ಶಿ ವ. ಚ. ಚನ್ನೇಗೌಡ ಇದ್ದಾರೆ   

ಬೆಂಗಳೂರು:‘ಪ್ರಾಚೀನ ಕೃತಿಗಳ, ಹಸ್ತಪ್ರತಿಗಳ ಶೋಧನೆ, ಸಂಪಾದನೆ ಮತ್ತು ಸಂರಕ್ಷಣೆ ಅಗತ್ಯವಾಗಿದೆ’ ಎಂದು ಹಿರಿಯ ವಿದ್ವಾಂಸ ಡಾ. ಟಿ.ವಿ. ವೆಂಕಟಾಚಲಶಾಸ್ತ್ರೀ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಪ್ರಾಚೀನ ಸಾಹಿತ್ಯದ ವಿಚಾರದಲ್ಲಿ ಸಾಹಿತಿಗಳಿಗೆ ಒಲವು ಇದ್ದರೆ, ಕಥೆ, ಕಾದಂಬರಿ, ಕವನ, ನಾಟಕ ಓದುವುದರಲ್ಲಿ ಜನರಿಗೆ ಒಲವು ಇರುತ್ತದೆ. ಹಸ್ತಪ್ರತಿ ಶಾಸ್ತ್ರ ಮತ್ತು ಗ್ರಂಥ ಸಂಪಾದನೆ ಕಾರ್ಯ ನಡೆಯುತ್ತಿರಬೇಕು’ ಎಂದರು.

‘ಗ್ರಂಥ ಸಂಪಾದನೆ ಮತ್ತು ಸಂಶೋಧನೆಯಲ್ಲಿ ಪುರುಷ ಏಕಸ್ವಾಮ್ಯವಿದೆ ಎಂಬ ವಾದಗಳನ್ನು ಒಪ್ಪಲಾಗುವುದಿಲ್ಲ. ಈ ಕ್ಷೇತ್ರಕ್ಕೆ ಬರಬೇಡಿ ಎಂದು ಯಾರೂ ಮಹಿಳೆಯರನ್ನು ತಡೆಯುವುದಿಲ್ಲ. ಈ ಕ್ಷೇತ್ರ ಆಯ್ದುಕೊಂಡರೆ ಯಾರಾದರೂ ಪ್ರೋತ್ಸಾಹ ನೀಡುತ್ತಾರೆ. ಈಗ, ಪುರುಷರೇ ಈ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುತ್ತಿಲ್ಲ’ ಎಂದರು.

ADVERTISEMENT

‘ಶಾಸನ ರಚನೆ, ಲಿಪಿ ಸಂಗ್ರಹ, ಗ್ರಂಥ ಸಂಪಾದನೆ ಮತ್ತು ಅನುವಾದ ಕ್ಷೇತ್ರದಲ್ಲಿ ಡಾ. ಆರ್. ಶೇಷಶಾಸ್ತ್ರೀ ಮಹತ್ವದ ಕಾರ್ಯ ಮಾಡಿದ್ದಾರೆ. ಡಾ. ವೈ.ಸಿ. ಭಾನುಮತಿಯವರು ಕೂಡ ಗ್ರಂಥ ಸಂಪಾದನ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ’ ಎಂದು ಅವರು ಶ್ಲಾಘಿಸಿದರು.

ವಿದ್ವಾಂಸ ಡಾ. ಆರ್. ಶೇಷಶಾಸ್ತ್ರೀ ಅವರಿಗೆ ಡಾ. ಟಿ.ವಿ.ವೆಂಕಟಾಚಲ ಶಾಸ್ತ್ರೀ ದತ್ತಿ ಪ್ರಶಸ್ತಿ, ಲೇಖಕಿ ಡಾ.ವೈ.ಸಿ. ಭಾನುಮತಿ ಅವರಿಗೆ ಟಿ.ಗಿರಿಜ ಸಾಹಿತ್ಯ ದತ್ತಿ ಪ್ರಶಸ್ತಿ ಹಾಗೂ ನಟಿ, ನಿರ್ದೇಶಕಿ ಪ್ರೇಮಾ ಬದಾಮಿ ಅವರಿಗೆ ಕಂಡ್ಲೂರು ಗಿರಿಜಮ್ಮ ಮತ್ತು ನರಸಿಂಹ ಜೋಗಿ ದತ್ತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.