ADVERTISEMENT

₹30.73 ಕೋಟಿ ಮೌಲ್ಯದ ಆಸ್ತಿ ಒತ್ತುವರಿ ತೆರವು

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2021, 17:46 IST
Last Updated 18 ಸೆಪ್ಟೆಂಬರ್ 2021, 17:46 IST

ಬೆಂಗಳೂರು: ನಗರ ಜಿಲ್ಲೆಯ 5 ತಾಲ್ಲೂಕುಗಳಲ್ಲಿ ಒತ್ತುವರಿಯಾಗಿದ್ದ ₹30.73 ಕೋಟಿ ಮೌಲ್ಯದ ಸರ್ಕಾರಿ ಆಸ್ತಿಯನ್ನು ಜಿಲ್ಲಾಡಳಿತದ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಒತ್ತುವರಿಯಾಗಿದ್ದ ಕೆರೆ, ಕಟ್ಟೆ, ಗೋಮಾಳ, ಸ್ಮಶಾನ, ರಾಜಕಾಲುವೆಗಳ 18 ಎಕರೆ 15 ಗುಂಟೆ ೊತ್ತುವರಿ ತೆರವಿಗೆ ಅಧಿಕಾರಿಗಳುಶನಿವಾರ ಕಾರ್ಯಾಚರಣೆ ನಡೆಸಿದರು.

ಬೆಂಗಳೂರು ಉತ್ತರ ತಾಲ್ಲೂಕಿನ ದಾಸನಪುರ ಹೋಬಳಿಯ ಕುಕ್ಕನಹಳ್ಳಿಯಲ್ಲಿ 9 ಗುಂಟೆ, ಗೋಪಾಲಪುರದಲ್ಲಿ 2 ಗುಂಟೆ ಸೇರಿ ಒಟ್ಟು ₹25 ಲಕ್ಷ ಮೌಲ್ಯದ ಸರ್ಕಾರಿ ಕೆರೆ ಜಾಗ ವಶಪಡಿಸಿಕೊಳ್ಳಲಾಗಿದೆ.

ADVERTISEMENT

ಬೆಂಗಳೂರು ಪೂರ್ವ ತಾಲ್ಲೂಕಿನ ಬಿದರಹಳ್ಳಿ ಹೋಬಳಿಯ ಕಮ್ಮಸಂದ್ರದಲ್ಲಿ 2 ಗುಂಟೆ, ಗುಂಡುತೋಪು, ಕಿತ್ತಗನೂರು ಗ್ರಾಮದಲ್ಲಿ 20 ಗುಂಟೆ ಗೋಮಾಳ, ನಾಡಗೌಡಹಳ್ಳಿ 27 ಗುಂಟೆ ಗುಂಡುತೋಪು, ನಿಂಬೇಕಾಯಿಪುರದಲ್ಲಿ 27 ಗುಂಟೆ ಕೆರೆ ಜಾಗ, ಗೊರವಿಗೆರೆಯಲ್ಲಿ 1 ಎಕರೆ 18 ಗುಂಟೆ ಸರ್ಕಾರಿ ಜಾಗ, ಶೀಗೆಹಳ್ಳಿಯಲ್ಲಿ 27 ಗುಂಟೆ ಗುಂಡುತೋಪು ಹಾಗೂ ವರ್ತೂರು ಹೋಬಳಿಯ ಕೊಡತಿ ಗ್ರಾಮದಲ್ಲಿ 5 ಗುಂಟೆ ಕೆರೆ ಜಾಗ ತೆರವುಗೊಳಿಸಲಾಗಿದೆ. ಪೂರ್ವ ತಾಲ್ಲೂಕಿನಲ್ಲಿ ಒಟ್ಟು ₹7.77 ಕೋಟಿ ಮೌಲ್ಯ 4 ಎಕರೆ 6 ಗುಂಟೆ ಜಮೀನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ವಿವರಿಸಿದ್ದಾರೆ.

‌ಬೆಂಗಳೂರು ದಕ್ಷಿಣ ತಾಲ್ಲೂಕಿನ ಗೋಣಿಪುರದಲ್ಲಿ 31 ಗುಂಟೆ ಕೆರೆ ಜಾಗ, ಹೊಮ್ಮದೇವನಹಳ್ಳಿಯಲ್ಲಿ 31 ಗುಂಟೆ ಕೆರೆ, ಕೆರೆಚೂಡಹಳ್ಳಿಯಲ್ಲಿ 12 ಗುಂಟೆ ಕೆರೆ ಜಾಗ ಸೇರಿ ₹3.10 ಕೋಟಿ ಮೌಲ್ಯದ 1 ಎಕರೆ 35 ಗುಂಟೆ ಜಾಗದಲ್ಲಿ ಇದ್ದ ಅಕ್ರಮ ಒತ್ತುವರಿ ತೆರವುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

‌‌‌ಆನೇಕಲ್ ತಾಲ್ಲೂಕಿನ ಗೆರಟಿನಗನಬೆಲೆಯಲ್ಲಿ 2 ಎಕರೆ 3 ಗುಂಟೆ ಕೆರೆ ಜಾಗ, ಬ್ಯಾಗಡದೇನಹಳ್ಳಿಯಲ್ಲಿ 8 ಗುಂಟೆ, ಅತ್ತಿಬೆಲೆ ಹೋಬಳಿಯ ಗುಡ್ಡಹಟ್ಟಿಯಲ್ಲಿ 20 ಗುಂಟೆ ಕೆರೆ ಜಾಗ, ಜಿಗಣಿ ಹೋಬಳಿಯ ಮಹಾಂತಲಿಂಗಾಪುರ ಗ್ರಾಮದಲ್ಲಿ 26 ಗುಂಟೆ ಕೆರೆ ಜಾಗ, ಹುಲ್ಲಹಳ್ಳಿ ಗ್ರಾಮದಲ್ಲಿ 25 ಗುಂಟೆ ಗೋಮಾಳ, ವಿ. ಕಲ್ಲಹಳ್ಳಿ ಗ್ರಾಮದಲ್ಲಿ 4 ಎಕರೆ 5 ಗುಂಟೆ, ಹೆಗ್ಗೊಂಡನಹಳ್ಳಿಯಲ್ಲಿ 4 ಎಕರೆ 15 ಗುಂಟೆ ಕೆರೆ ಜಾಗ ತೆರವುಗೊಳಿಸಲಾಗಿದೆ. ಈ ತಾಲ್ಲೂಕಿನಲ್ಲಿ ಒಟ್ಟು ₹19.61 ಕೋಟಿ ಮೌಲ್ಯದ 12 ಎಕರೆ 2 ಗುಂಟೆ ಸ್ವಾಧೀನಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.