ADVERTISEMENT

ಬೆಂಗಳೂರಿನಲ್ಲಿ ಮಧ್ಯಾಹ್ನವೇ ಅಬ್ಬರದ ಮಳೆ 

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2021, 10:30 IST
Last Updated 20 ಸೆಪ್ಟೆಂಬರ್ 2021, 10:30 IST
ಬೆಂಗಳೂರಿನಲ್ಲಿ ಮಳೆ
ಬೆಂಗಳೂರಿನಲ್ಲಿ ಮಳೆ   

ಬೆಂಗಳೂರು: ನಗರದ ಬಹುತೇಕ ಪ್ರದೇಶಗಳಲ್ಲಿ ಸೋಮವಾರ ಮಧ್ಯಾಹ್ನವೇ ಅಬ್ಬರದ ಮಳೆ ಸುರಿಯುತ್ತಿದೆ.

ನಗರದಲ್ಲಿ ಬೆಳಿಗ್ಗೆಯಿಂದಲೇ ಬಿಸಿಲು ಹಾಗೂ ಕೆಲವು ಬಾರಿ ಮೋಡ ಕವಿದ ವಾತಾವರಣ ಕಾಣಿಸಿತ್ತು.
ಮಧ್ಯಾಹ್ನ 2ಗಂಟೆಯಿಂದಲೇ ಜಿಟಿ ಜಿಟಿಮಳೆ ಆರಂಭವಾಗಿ, ನಂತರ ಜೋರು ಮಳೆ ಸುರಿಯಿತು.

ಮೆಜೆಸ್ಟಿಕ್, ವಿಧಾನಸೌಧ, ಎಂಜಿ.ರಸ್ತೆ, ಯಶವಂತಪುರ, ಪೀಣ್ಯ, ಜಾಲಹಳ್ಳಿ, ರಾಜಾಜಿನಗರ, ವಿಜಯನಗರ, ಮಹಾಲಕ್ಷ್ಮಿಲೇಔಟ್, ಗಾಂಧಿನಗರ, ಬಸವೇಶ್ವರನಗರ, ಮಲ್ಲೇಶ್ವರ, ಕಾಮಾಕ್ಷಿಪಾಳ್ಯ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಸಹಿತ ಮಳೆ ಸುರಿಯಿತು.

ADVERTISEMENT

ಮಳೆಯಿಂದಾಗಿ ನೀರು ರಸ್ತೆ ಮೇಲೆಯೇ ಹರಿಯುತ್ತಿದೆ. ಕೆಲ ಕಡೆ ಕಾಲುವೆಗಳಲ್ಲಿ ನೀರು ತುಂಬಿ ಹರಿಯುತ್ತಿದ್ದು, ತ್ಯಾಜ್ಯವೆಲ್ಲ ರಸ್ತೆಗೆ ಬಂದು ಬಿದ್ದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.