ADVERTISEMENT

‘ಮಾಯಾ ಬಜಾರ್’ ಸಿನಿಮಾಕ್ಕೆ ಪೈರಸಿ ಕಾಟ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2020, 19:33 IST
Last Updated 1 ಮಾರ್ಚ್ 2020, 19:33 IST

ಬೆಂಗಳೂರು:ಪವರ್‌ ಸ್ಟಾರ್ ಪುನೀತ್ ರಾಜ್‌ಕುಮಾರ್ ನಿರ್ಮಿಸಿರುವ ‘ಮಾಯಾ ಬಜಾರ್’ಸಿನಿಮಾವನ್ನು ಕೃತಿಚೌರ್ಯ ಮಾಡಿ‘ಕನ್ನಡ ರಾಕರ್ಸ್‌’ ಹೆಸರಿನ ಜಾಲತಾಣದಲ್ಲಿ ಹರಿಬಿಡಲಾಗಿದ್ದು, ಈ ಸಂಬಂಧ ಸದಾಶಿವನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಪೈರಸಿ ಸಂಬಂಧ ಸ್ವಾಮಿ ಎಂಬುವರು ದೂರು ನೀಡಿದ್ದಾರೆ. ‘ಕನ್ನಡ ರಾಕರ್ಸ್‌’ ಜಾಲತಾಣದ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಪುನೀತ್‌ ರಾಜ್‌ಕುಮಾರ್ ಅವರ‘ಪಿಆರ್‌ಕೆ ಪ್ರೊಡಕ್ಷನ್’ ನಿರ್ಮಿಸಿರುವ ‘ಮಾಯಾ ಬಜಾರ್’ ಸಿನಿಮಾ, ಫೆ. 28ರಂದು ರಾಜ್ಯದಾದ್ಯಂತ ಬಿಡುಗಡೆ ಆಗಿದೆ. ಅಂದು ರಾತ್ರಿಯೇ ಪೂರ್ತಿ ಸಿನಿಮಾವನ್ನು ಪೈರಸಿ ಮಾಡಿ ಜಾಲತಾಣ ಹಾಗೂ ಟೆಲಿಗ್ರಾಮ್‌ ಆ್ಯಪ್‌ನಲ್ಲಿ ಹರಿಯಬಿಡಲಾಗಿದೆ. ಆರೋಪಿಗಳನ್ನು ಪತ್ತೆ ಮಾಡಿ’ ಎಂದು ದೂರಿನಲ್ಲಿ ಸ್ವಾಮಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.